AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಳೆದುಹೋದ ನನ್ನ ಕೈಗಡಿಯಾರವನ್ನು ಭಾರತವು ಮರಳಿಸಿತು’ ವಿದೇಶಿಗರೊಬ್ಬರ ಹೃದಯಸ್ಪರ್ಶಿ ಕಥೆ

Gift : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ನನ್ನ ಕೈಗಡಿಯಾರವನ್ನು ಎಕ್ಸ್​ರೇ ಟ್ರೇಯಲ್ಲಿ ಬಿಟ್ಟುಬಂದಿದ್ದೆ. ಮಾಮೂಲಿ ಕೈಗಡಿಯಾರ ಇದಾಗಿರಲಿಲ್ಲ. ಇದರೊಂದಿಗೆ ಭಾವನಾತ್ಮಕ ಸಂಬಂಧವಿತ್ತು. ನಂತರ...

‘ಕಳೆದುಹೋದ ನನ್ನ ಕೈಗಡಿಯಾರವನ್ನು ಭಾರತವು ಮರಳಿಸಿತು’ ವಿದೇಶಿಗರೊಬ್ಬರ ಹೃದಯಸ್ಪರ್ಶಿ ಕಥೆ
ಅಜ್ಜ ಕೊಟ್ಟ ಕೈಗಡಿಯಾರ ಮರಳಿ ಸಿಕ್ಕಾಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 29, 2022 | 1:15 PM

Viral : ವಿದೇಶಿಗರೊಬ್ಬರು ಇತ್ತೀಚೆಗೆ ಕೆಲಸದ ನಿಮಿತ್ತ ಭಾರತಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಕೈಗಡಿಯಾರ ಕಳೆದು ಹೋಯಿತು. ವಾಪಸ್​ ತಮ್ಮ ದೇಶಕ್ಕೆ ಮರಳಿದಾಗ ಅವರಿಗೆ ಕೈಗಡಿಯಾರದ ನೆನಪಾಯಿತು. ತಕ್ಷಣವೇ ಇಮೇಲ್ ರವಾನಿಸಿದರು. ತ್ವರಿತ ರೀತಿಯಲ್ಲಿ ಇವರ ಕೈಗಡಿಯಾರ ಇವರನ್ನು ಮರಳಿ ಸೇರಿತು. ಇದರಿಂದ ಸಂತೋಷಗೊಂಡ ಈ ವ್ಯಕ್ತಿ ಲಿಂಕ್​ಡಿನ್​ ನಲ್ಲಿ ತಮ್ಮ ಕೈಗಡಿಯಾರದ ಕಥೆಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಐಟಿಸಿ ಕಂಪೆನಿಯ ವೃತ್ತಿಪರತೆಯನ್ನು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ನಾನು ಆ್ಯಂಡರ್ ಆ್ಯಂಡರ್​ಸನ್​. ಇತ್ತೀಚೆಗೆ ಕಾರ್ಯನಿಮಿತ್ತ ನನಗೆ ಭಾರತಕ್ಕೆ ಭೇಟಿನೀಡುವ ಅವಕಾಶ ದೊರೆಯಿತು. ನಾನು ಇಷ್ಟೊಂದು ದೇಶಗಳನ್ನು ಸುತ್ತಿದರೂ ಇಂಥ ಆಪ್ತ, ಅದ್ಭುತ ಅನುಭವ ಈತನಕ ನನಗಾಗಿರಲಿಲ್ಲ. ಕಳೆದುಹೋದ ಒಂದು ಕೈಗಡಿಯಾರ ಮರಳಿ ಸಿಕ್ಕಾಗ ಭಾರತದ ಸಂಸ್ಕೃತಿ, ಸಂಬಂಧಗಳ ಬಂಧ ಎಷ್ಟೊಂದು ಶ್ರೀಮಂತಿಕೆಯಿಂದ ಕೂಡಿದೆ ಎಂಬ ಅರಿವಾಯಿತು.

ಇದನ್ನೂ ಓದಿ : Viral News: 13 ದಿನದಲ್ಲಿ 3,955 ಕಿ.ಮೀ ಸೈಕಲ್ ಸವಾರಿ ಮಾಡಿದ ಪುಣೆಯ ಮಹಿಳೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ನನ್ನ ಕೈಗಡಿಯಾರವನ್ನು ಎಕ್ಸ್​ರೇ ಟ್ರೇಯಲ್ಲಿ ಬಿಟ್ಟುಬಂದಿದ್ದೆ. ಇದು ಸಾಮಾನ್ಯವಾದ ಕೈಗಡಿಯಾರವಲ್ಲ, ಇದರೊಂದಿಗೆ ಭಾವನಾತ್ಮಕ ಸಂಬಂಧವಿದೆ. ತೀರಿಹೋದ ನನ್ನ ಅಜ್ಜ ನನ್ನ ಹುಟ್ಟುಹಬ್ಬದ ದಿನ ಉಡುಗೊರೆಯಾಗಿ ಕೊಟ್ಟಿದ್ದಿದು.

ಕಚೇರಿ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮುಗಿಸಿ ಬೆಂಗಳೂರಿನಿಂದ ವಾಪಸ್​ ಫ್ರಾಂಕ್​ಫರ್ಟ್​ಗೆ ಹೋದಾಗ ನನಗೆ ಕೈಗಡಿಯಾರದ ನೆನಪಾಯಿತು. ತಕ್ಷಣವೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಈ ಕುರಿತು ಇಮೇಲ್​ ರವಾನಿಸಿದೆ. ಅದೇ ವೇಳೇಗೆ ನಾನು ಭೇಟಿಕೊಟ್ಟ ಟಿಸಿಎಸ್ ಕಂಪೆನಿಯ ಸರ್ವೀಸ್​ ತಂಡಕ್ಕೂ ಸಹಾಯ ಕೋರಿ ಇಮೇಲ್​ ರವಾನಿಸಿದೆ. ಒಂದು ತಾಸಿನ ಒಳಗೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಉತ್ತರ ಬಂದಿತು, ಭಾನುವಾರ ಮಧ್ಯರಾತ್ರಿ 1.41ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕೈಗಡಿಯಾರವನ್ನು ತೆಗೆದುಕೊಂಡು ಹೋಗಬಹುದು ಎಂಬ ಸಾರಾಂಶ ಅದರಲ್ಲಿತ್ತು.

ನಂತರ ಟಿಸಿಎಸ್​ ಪ್ರತಿನಿಧಿಯು ಕೈಗಡಿಯಾರವನ್ನು ನನಗೆ ತಲುಪಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡದ ವೃತ್ತಿಪರತೆ ಮತ್ತು ಟಿಸಿಎಸ್​ನ ಸರ್ವೀಸ್​ ಸಿಬ್ಬಂದಿಯ ತಂಡದ ಬದ್ಧತೆಗೆ ನಾನು ಕೃತಜ್ಞನಾಗಿದ್ದೇನೆ.

ಇದೊಂದು ಅನಿರೀಕ್ಷಿತ ಘಟನೆ, ನನ್ನನ್ನು ಭಾವುಕನನ್ನಾಗಿಸಿದೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:01 pm, Tue, 29 November 22

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್