Viral: ನನ್ನನ್ನು ದತ್ತು ತೆಗೆದುಕೊಳ್ಳುತ್ತೀರೋ? ನಿಮ್ಮ ಕೈಲಾಡೋ ಬೊಂಬೆ ಮಸ್ಕಯ್ಯ

Elon Musk : ಎಲಾನ್​, ಆ್ಯಂಟಿ ಏಜಿಂಗ್ ಫಾರ್ಮ್ಯುಲಾ ಕುರಿತು ಪ್ರಯೋಗ ಮಾಡುತ್ತಿದ್ದರೋ ಏನೋ, ಫಲಿತಾಂಶ ಮಾತ್ರ ಹೀಗಾಗಿಬಿಟ್ಟಿದೆ! ಬಂದ ಬಂದ ಬಂದ ನಮ್ಮ ಎಲಾನ್​ ಪುಟ್ಟಾ...

Viral: ನನ್ನನ್ನು ದತ್ತು ತೆಗೆದುಕೊಳ್ಳುತ್ತೀರೋ? ನಿಮ್ಮ ಕೈಲಾಡೋ ಬೊಂಬೆ ಮಸ್ಕಯ್ಯ
ಮಾಸ್ಟರ್ ಎಲಾನ್ ಮಸ್ಕ್!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 05, 2023 | 4:41 PM

Artificial Intelligence: ಎಐ ಕಲಾವಿದರಂತೂ ಇತ್ತೀಚೆಗೆ ಎಲಾನ್ ಮಸ್ಕ್​ನನ್ನು (Elon Musk) ಆವಾಹಿಸಿಕೊಂಡ ಹಾಗಿದೆ. ಮೊನ್ನೆಯಷ್ಟೇ ಉತ್ತರ ಭಾರತೀಯ ವರನಂತೆ ಎಲಾನ್​ನನ್ನು ಸೃಷ್ಟಿಸಿ ಸಿಂಗರಿಸಿ ಕುಣಿಸಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಮೆರವಣಿಗೆ ಮಾಡಿದ್ದಾಯಿತು. ಅದು ಅಷ್ಟಕ್ಕೇ ಸಂಪನ್ನಗೊಳ್ಳದೆ ಎಲಾನ್ I Love it ಎಂದದ್ದೂ ಆಯಿತು. ಮುಂದೇನು ಎಂದು ಕುತೂಹಲದಿಂದ ಕಾಯ್ದು ಕುಳಿತ ನಿಮ್ಮೆದುರಿಗೆ ಈಗ ಮಾಸ್ಟರ್​ ಎಲಾನ್​ನನ್ನು ಕೈಹಿಡಿದು ಕರೆದುಕೊಂಡು ಬಂದಿದ್ದೇವೆ.

ಎರಡೂವರೆ ಮೂರು ವರ್ಷದ ಮಗು ಎಲಾನ್​ ಡಂಗ್ರಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿದೆ. ಲಕ್ಷಾಂತರ ಜನರು ಈ ಫೋಟೋ ನೋಡಿ ನಕ್ಕಿದ್ದಾರೆ, ಮುದ್ದಿಸಿದ್ದಾರೆ, ಕಾಲೆಳೆದಿದ್ದಾರೆ, ತೋಚಿದಂತೆ ಪ್ರತಿಕ್ರಿಯಿಸಿದ್ಧಾರೆ. ಆಹಾ ಇದು ಕ್ಯೂರಿಯಸ್​ ಕೇಸ್​ ಆಫ್​ ಬೆಂಜಮಿನ್​ ಬಟನ್​ ಚಿತ್ರದ ಹಾಗಿಲ್ಲವೆ? ಇದು ಬಹಳ ಮುದ್ದಾಗಿದೆ, ದತ್ತು ಪಡೆದುಕೊಳ್ಳಬಹುದೆ? ನಾನು ಈ ಮಗುವನ್ನು ಈಗಲೇ ಕಿಡ್ನ್ಯಾಪ್​ ಮಾಡುತ್ತೇನೆ ಅಂತೆಲ್ಲ ಪ್ರತಿಕ್ರಿಯಿಸಿದ್ಧಾರೆ ನೆಟ್ಟಿಗರು. ಮಜಾ ಎಂದರೆ, ಮಗುವಿದ್ದಾಗಿನಿಂದ ಹಿಡಿದು ಹದಿಹರೆಯದ ತನಕವೂ ವಿವಿಧ ಭಂಗಿಗಳಲ್ಲಿ ಮಸ್ಕ್​ನ ಎಐ ಚಿತ್ರಗಳನ್ನು ಈ ಕೆಳಗಿನ ಟ್ವೀಟ್​ನಲ್ಲಿ ನೋಡಬಹುದಾಗಿದೆ.

ಇನ್ನು ಎಐ ಕಲಾವಿದರ ಕೈಯಲ್ಲಾಡೋ ಬೊಂಬೆಯಂತಾಗಿರುವ ಎಲಾನ್​ ಮಸ್ಕ್​ ತನ್ನ ಈ ಅವತಾರಗಳನ್ನೆಲ್ಲ ಖುಷಿಯಿಂದ ಅನುಭವಿಸುತ್ತಿದ್ದಾನೆ, ರೀಟ್ವೀಟ್ ಕೂಡ ಮಾಡುತ್ತಿದ್ದಾನೆ. ಅಬ್ಬಾ ಬೆಳಗ್ಗೆಯಿಂದ ನಾನು ಯಾಕೋ ಸಪ್ಪಗಿದ್ದೆ. ಈಗ ನಿಜಕ್ಕೂ ಇದನ್ನು ನೋಡಿ ನಗುತ್ತಿದ್ದೇನೆ. ಮಸ್ಕ್​ ಮತ್ತು ಕಲಾವಿದರಿಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಅನೇಕರು ವಿವಿಧ ಸೆಲೆಬ್ರಿಟಿಗಳ ಎಐ ಕಲಾಕೃತಿಗಳನ್ನು ಈ ಥ್ರೆಡ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಎಲಾನ್​ ಮರಿಯನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ