AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ನಾನಿದನ್ನು ಪ್ರೀತಿಸುತ್ತಿದ್ದೇನೆ’ ಎಂದ ಭಾರತದ ಹೊಸ ಕಾಲ್ಪನಿಕ ಕ್ಯೂಟ್ ಅಳಿಯ ಮಸ್ಕ್

Elon Musk : 'ಎಲಾನ್, ಇದನ್ನು ನಿಮ್ಮ DPಯಾಗಿ ಮಾಡಿಕೊಳ್ಳಿ. ಭಾರತವು ಟೆಸ್ಲಾ (Tesla) ಕಾರುಗಳ ಮೇಲೆ ಆಮದು ತೆರಿಗೆ ಕಡಿಮೆ ಮಾಡಬಹುದು’ ಎಂದೊಬ್ಬರು ಬಿಟ್ಟಿ ಸಲಹೆ ಕೊಟ್ಟಿದ್ದಾರೆ. ನಿಮ್ಮದೇನು ಅಭಿಪ್ರಾಯ?

Viral: 'ನಾನಿದನ್ನು ಪ್ರೀತಿಸುತ್ತಿದ್ದೇನೆ' ಎಂದ ಭಾರತದ ಹೊಸ ಕಾಲ್ಪನಿಕ ಕ್ಯೂಟ್ ಅಳಿಯ ಮಸ್ಕ್
ಎಐ ಸೃಷ್ಟಿಸಿದ ಎಲಾನ್​ ಮಸ್ಕ್​ ಭಾರತೀಯ ವರನ ಪೋಷಾಕಿನಲ್ಲಿ ಕಂಗೊಳಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jun 03, 2023 | 3:59 PM

Artificial Intelligence: ಇತ್ತೀಚೆಗೆ ಎಲಾನ್ ಮಸ್ಕ್ (Elon Musk) AI ಕಲಾವಿದರೊಬ್ಬರ ಕಲ್ಪನೆಯಲ್ಲಿ ಭಾರತದ ಅಳಿಯನಾದ ಬಗ್ಗೆ ಓದಿದ್ದಿರಿ. ಸಿಕ್ಕಾಪಟ್ಟೆ ವೈರಲ್ ಆಗಿದ್ದ ಆ ಫೋಟೋಗಳು ಎಲಾನ್ ಮಸ್ಕ್ ಗಮನಕ್ಕೂ ಬಂದು ಅವರು ಅವುಗಳನ್ನು ನೋಡಿ, ‘I love it,’ ಎಂದು ಉದ್ಗರಿಸಿದ್ದಾರೆ. ಹೂವಿನ ಜೊತೆ ನಾರು ಎಂಬಂತೆ ಮಸ್ಕ್ ಜೊತೆಗೆ ಭಾರತ ಮತ್ತು ಅದರ ವಿವಿಧ ವರ್ಣರಂಜಿತ ಸಂಪ್ರದಾಯಗಳೂ ವೈರಲ್ ಆಗಿವೆ. ‘ಅದ್ಭುತ ಪರಂಪರೆಯುಳ್ಳ ಮಾಂತ್ರಿಕ ದೇಶ’, ‘ಭಾರತವೆಂಬ ಅತ್ಯದ್ಭುತ’, ‘ಜೈ ಹಿಂದ್’ ಮೊದಲಾಗಿ ನೆಟ್ಟಿಗರೂ ಉದ್ಗಾರ ತೆಗೆದಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ವೆಡ್ಡಿಂಗ್ ಫೋಟೋಗ್ರಾಫರ್ ಹಾಗೂ AI ಕಲಾವಿದನೊಬ್ಬ ಮಸ್ಕ್‌ನನ್ನು ಉತ್ತರ ಭಾರತದ ಶೇರವಾನಿಯಲ್ಲಿ ಸಿಂಗರಿಸಿ ಕುದುರೆ ಮೇಲೆ ಕೂಡಿಸಿ ಪಕ್ಕಾ ಮದುಮಗನಂತೆ ಮೆರೆಸಿದ್ದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇವನ್ನು ಮಿಡ್‌ಜರ್ನಿ (Midjourney) ಎಂಬ ಕೃತಕ ಬುದ್ಧಿಮತ್ತೆಯ ಬಹು ಜನಪ್ರಿಯ ಹೊಸ ಉತ್ಪನ್ನದ ಸಹಾಯದಿಂದ ಸೃಷ್ಟಿಸಲಾಗಿತ್ತು.

ಇದನ್ನೂ ಓದಿ : Viral Video: ಮೋಡಗಳ ಮೇಲೆ ವಿಹರಿಸಬೇಕೆ? ಹಾಗಿದ್ದರೆ ಟರ್ಕಿಗೆ ಬನ್ನಿ

ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ ಪದವಿಯನ್ನು ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್‌ನಿಂದ ತಿರುಗಿ ಪಡೆದ ಬೆನ್ನಲ್ಲೇ ಕಾಲ್ಪನಿಕವಾಗಿದ್ದರೇನಂತೆ ಮದುವೆಯೂ ಆದದ್ದು, ಅದೂ ಭಾರತೀಯ ಶೈಲಿಯಲ್ಲಿ, ಮಸ್ಕ್‌ರ ಪ್ರತಿ ಸೊಲ್ಲನ್ನೂ ಸಂಭ್ರಮಿಸುವ ಅವರ ಅಭಿಮಾನಿಗಳಲ್ಲಿ ಹುಮ್ಮಸ್ಸು ತುಂಬಿದೆ.

ಇದನ್ನೂ ಓದಿ : Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

‘ನಿಮಗಿದು ಸೊಗಸಾಗಿ ಹೊಂದುತ್ತದೆ,’ ಎಂದಿದ್ದಾರೆ ಹಲವರು. ‘ಇಂಡಿಯನ್ ಮಸ್ಕ್,’ ‘ಇಂಡಿಯನ್ ಜೇಮ್ಸ್ ಬಾಂಡ್,’ ಮೊದಲಾದ ಉಪಾಧಿಗಳಿಂದ ಮಂದಿ ಮಸ್ಕ್​ನನ್ನು ಕೊಂಡಾಡಿದ್ದಾರೆ. ‘ಎಲಾನ್, ಇದನ್ನು ನಿಮ್ಮ DPಯಾಗಿ ಮಾಡಿಕೊಳ್ಳಿ. ಭಾರತ ಟೆಸ್ಲಾ (Tesla) ಕಾರುಗಳ ಮೇಲೆ ಆಮದು ತೆರಿಗೆ ಕಡಿಮೆ ಮಾಡಬಹುದು’ ಎಂದೊಬ್ಬರು ಬಿಟ್ಟಿ ಸಲಹೆಯನ್ನೂ ಕೊಟ್ಟಿದ್ದಾರೆ.

ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:57 pm, Sat, 3 June 23

ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು