Viral Video: ಮೋಡಗಳ ಮೇಲೆ ವಿಹರಿಸಬೇಕೆ? ಹಾಗಿದ್ದರೆ ಟರ್ಕಿಗೆ ಬನ್ನಿ

Above the Cloud: ನೆಟ್ಟಿಗರು ಪರಮಾಶ್ಚರ್ಯಗೊಂಡು ಇಂಥದೊಂದು ಜಾಗ ನಿಜಕ್ಕೂ ಇದೆಯೆ? ಎಲ್ಲಿದೆ ಇದು? ನೀವು ಈ ಜಾಗಕ್ಕೆ ಭೇಟಿ ಕೊಟ್ಟಿದ್ದೀರೇ? ನೀವು ಇಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದಿರೆ? ಅಂತೆಲ್ಲ ಡಾ. ಫಿಗೆನ್​ಗೆ ಪ್ರಶ್ನಿಸುತ್ತಿದ್ದಾರೆ.

Viral Video: ಮೋಡಗಳ ಮೇಲೆ ವಿಹರಿಸಬೇಕೆ? ಹಾಗಿದ್ದರೆ ಟರ್ಕಿಗೆ ಬನ್ನಿ
ಟರ್ಕಿಯ ಫೆಥಿಯೇ ಎಂಬ ಪ್ರದೇಶದಲ್ಲಿ ಮೋಡಗಳ ಮೇಲೆ ವಿಹಾರ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 03, 2023 | 10:59 AM

Cloud : ದೊಡ್ಡ ದೊಡ್ಡ ಕೈಗಳಿದ್ದಿದ್ದರೆ ಆ ಮೋಡವನ್ನೆಲ್ಲ ಹಿಂಜಿ ಅದರೊಳಗೇನಿದೆ ಅಥವಾ ಆಚೆಗೇನಿದೆ ಎಂದು ನೋಡಬಹುದಿತ್ತಲ್ಲವೆ; ಸಾಮಾನ್ಯವಾಗಿ ಇಂಥ ಕಲ್ಪನೆ ಆಸೆಗಳಲ್ಲೇ ಬಾಲ್ಯ ಕಳೆದಿರುತ್ತದೆ. ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತ ಹೋದಂತೆ ಅಧ್ಯಯನಕ್ಕೆ ತೊಡಗಿಕೊಳ್ಳುತ್ತೀರಿ. ಪ್ರಕೃತಿಪ್ರಿಯರಾದರೆ ಚಾರಣ ಮಾಡುತ್ತೀರಿ. ಕಲೆ ಸಾಹಿತ್ಯದೆಡೆ ಆಕರ್ಷಿತಗೊಂಡರೆ ಕಲ್ಪನೆಯನ್ನು ಹರಿಬಿಡುತ್ತೀರಿ ಚಿತ್ರಿಸುತ್ತೀರಿ ಬರೆಯುತ್ತೀರಿ. ಆದರೆ ನಿಜಕ್ಕೂ ನೀವು ಮೋಡದ ಮೇಲೆ ಚಲಿಸುವ ಅನುಭವ ಪಡೆಯಬೇಕೆಂದರೆ ಟರ್ಕಿಗೆ (Fethiye, Turkey) ಬರಬೇಕು ಎನ್ನುತ್ತಿದ್ದಾರೆ ಫಿಗೆನ್​ ಎನ್ನುವ ಟ್ವೀಟಿಗರು.

ಈತನಕ ಈ ವಿಡಿಯೋ ಅನ್ನು ಸುಮಾರು 2.5 ಲಕ್ಷ ಜನರು ನೋಡಿದ್ದಾರೆ. ನೆಟ್ಟಿಗರು ಪರಮಾಶ್ಚರ್ಯಗೊಂಡು ಇಂಥದೊಂದು ಜಾಗ ನಿಜಕ್ಕೂ ಇದೆಯೆ? ಎಲ್ಲಿದೆ ಇದು? ನೀವು ಈ ಜಾಗಕ್ಕೆ ಭೇಟಿ ಕೊಟ್ಟಿದ್ದೀರೇ? ನೀವು ಇಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದಿರೆ? ಅಂತೆಲ್ಲ ಫಿಗೆನ್​ಗೆ ಪ್ರಶ್ನಿಸುತ್ತಿದ್ದಾರೆ. ಫಿಗೆನ್​ ಹೌದು, ನಾನು ಟರ್ಕಿಯಲ್ಲಿ ವಾಸವಾಗಿದ್ದೇನೆ ಎಂದಿದ್ದಾರೆ. ಈಕೆ ಸಂಗೀತದಲ್ಲಿ ಪಿಎಚ್.ಡಿ ಪದವಿ ಪಡೆದಾಕೆ. ಸಂಗೀತ ಅಧ್ಯಾಪಕಿ ಕೂಡ.

ಇದನ್ನೂ ಓದಿ : Viral Video: ಓನು ಬಂಗಾರಾ ಓನು ಪುಟ್ಟಾ, ಈ ವೀಕೆಂಡ್​ ಎಲ್ಲಿ ಹೋಗೋಣ?

ಹೇಗೆ ಇದೆಲ್ಲ ಸಾಧ್ಯ ಎಂದು ಕೆಲವರು ಕೇಳಿದ್ದಾರೆ. ಕಳೆದವಾರ ನಾನು ಈ ಬೆಟ್ಟದ ತುದಿಯಲ್ಲಿದ್ದೆ. ನಾನು ಇಲ್ಲಿ ಆಗಾಗು ಹೋಗುತ್ತಿರುತ್ತೇನೆ. ನಾನೂ ಇಲ್ಲಿ ಹೋಗಬೇಕು ಎಂದು ಕೆಲವರು ಹೇಳಿದ್ದಾರೆ. ಮೋಡಗಳನ್ನು ಸಮೀಪಿಸುವುದು ಅಪಾಯಕಾರಿ ಅಲ್ಲವೆ ಎಂದು ಮತ್ತೊಬ್ಬರು ಕೇಳಿದ್ದಾರೆ. ದೇವರೇ, ದಯವಿಟ್ಟು ಈ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗು, ಸ್ವರ್ಗವೆಂದರೆ ಇದೇ ಇರಬೇಕು ಎಂದಿದ್ದಾರೆ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ