ಶತಮಾನದ ಹಿಮಪಾತ; ಹಿಮಗಟ್ಟಿದ ಜಿಂಕೆಯ ಮುಖ, ಸಹಾಯ ಮಾಡಿದ ಚಾರಣಿಗರು
Winter Storm : ಕಡುಚಳಿಗಾಲದಲ್ಲಿ ಹಿಮವನ್ನು ಅಗೆಯುತ್ತ ಆಹಾರ ಹುಡುಕುತ್ತಿದ್ದ ಈ ಜಿಂಕೆಯು ಚಾರಣಿಗರ ಕಣ್ಣಿಗೆ ಬಿದ್ದಿದೆ. ಹಿಮಗಟ್ಟಿದ ಇದರ ಮುಖ ನೋಡಿದ ಅವರಿಗೆ ಸುಮ್ಮನಿರಲಾಗಿಲ್ಲ. ವೈರಲ್ ಆದ ಈ ವಿಡಿಯೋ ನೋಡಿ.
Viral Video: ಅಮೆರಿಕಾ ಮತ್ತು ಕೆನಡಾದ ಕೆಲ ಪ್ರದೇಶಗಳಲ್ಲಿ ಹಿಂದೆಂದೂ ಕಾಣದಂಥ ಹಿಮಪಾತವಾಗುತ್ತಿದೆ. ಚಂಡಮಾರುತದ ಪರಿಣಾಮವಾಗಿ ವಿಪರೀತ ಚಳಿ ಆವರಿಸಿದ್ದರಿಂದ ಅಲ್ಲಿಯ ಜನಜೀವನ ಇಂಥ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗುತ್ತಿದೆ. ಇನ್ನು ಪ್ರಾಣಿಗಳ ಪಾಡು? ಅವುಗಳ ನರಳಿಕೆ ನೋಡಲಾಗುತ್ತಿಲ್ಲ. ಅವು ಹೇಗೆ ಬದುಕುತ್ತಿವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ದಾರಿಯಲ್ಲಿ ಹಾದು ಹೋಗುವವರ ಕಣ್ಣಿಗೆ ಈ ಜಿಂಕೆ ಕಣ್ಣಿಗೆ ಬಿದ್ದಿದೆ. ತಕ್ಷಣವೇ ರಕ್ಷಿಸಿದ್ದಾರೆ.
ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಅನ್ನು ಯಾವಾಗ ಎಲ್ಲಿ ಚಿತ್ರೀಕರಿಸಿರುವುದು ಎಂಬ ಮಾಹಿತಿ ಇಲ್ಲ. ಈ ಜಿಂಕೆಯ ತಲೆಯು ಪೂರ್ತಿ ಹಿಮಗಟ್ಟಿದೆ. ತಲೆ, ಕಣ್ಣು, ಬಾಯಿ ಸಮೇತ ಮುಚ್ಚಿಹೋಗಿದೆ. ಹೇಗೋ ಉಸಿರೊಂದು ಇದೆ. ಹಸಿವು ವಿಪರೀತವಾಗಿ. ಹಿಮವನ್ನು ಅಗೆದರೆ ಆಹಾರ ಸಿಗಬಹುದೆ ಎಂಬ ಇರಾದೆಯಲ್ಲಿ ಓಡಾಡಿಕೊಂಡಿದೆ.
ಇದನ್ನೂ ಓದಿ : ಹಿಮಾಚಲಪ್ರದೇಶದಲ್ಲಿ ಅಪರೂಪದ ಹಿಮಚಿರತೆ ಪತ್ತೆ; ವಿಡಿಯೋ ವೈರಲ್
ಇದರ ಅವಸ್ಥೆ ನೋಡಿದ ಚಾರಣಿಗರು ಹತ್ತಿರ ಬಂದಿದ್ದಾರೆ. ಆದರೆ ಜಿಂಕೆಗೆ ಸಹಜವಾದ ಭಯ ಓಡಿಹೋಗಲು ಪ್ರಯತ್ನಿಸಿದೆ. ಜಿಂಕೆಯನ್ನು ಮಲಗಿಸಿ ಅದರ ಮುಖಕ್ಕೆ ಆವರಿಸಿದ್ದ ಹಿಮವನ್ನೆಲ್ಲ ತೆಗೆದಿದ್ದಾರೆ. ನಂತರ ಅದರ ನೆಗೆತ ನೋಡಿ! ಅನೇಕರು ಈ ವಿಡಿಯೋ ನೋಡಿದ ಅನೇಕರು, ಸಹಾನುಭೂತಿಯುಳ್ಳ ನಿಮಗೆ ಧನ್ಯವಾದ ಎಂದು ಚಾರಣಿಗರಿಗೆ ಧನ್ಯವಾದ ಹೇಳಿದ್ದಾರೆ. ಮಲಗಿದಾಗ ಹಿಮಪಾತವಾಗಿ ಈ ಪರಿಸ್ಥಿತಿಗೆ ಜಿಂಕೆ ಬಂದಿರಬಹುದು ಎಂದು ಒಬ್ಬರು ಊಹಿಸಿದ್ದಾರೆ. ದೊಡ್ಡ ಮೈದಾನದಲ್ಲಿ ಬೀಸಿದ ಬಿರುಗಾಳಿಗೆ ಇದರ ಮುಖ ಹೀಗಾಗಿರಬಹುದು ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ