ಅಚ್ಛೇ ದಿನ್; 2 ಸಮೋಸಾ, 1 ಕಾಫಿ, 1 ನೀರಿನ ಬಾಟಲಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ರೂ. 490

Viral News : ಕಾಫೀ ಅಚ್ಛೇ ದಿನ್ ಆಗಯೇ ಹೈ- ಸರ್ಕಾರವನ್ನು ಗೇಲಿ ಮಾಡಿ ಟ್ವೀಟ್ ಮಾಡಿದ ಪತ್ರಕರ್ತೆಯೊಬ್ಬರ ಟ್ವೀಟಿನಡಿ ಇತರೇ ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್​ಗಳಲ್ಲಿರುವ ಆಹಾರೋತ್ಪನ್ನಗಳ ಬೆಲೆಯ ಬಗ್ಗೆ ನೆಟ್ಟಿಗರು ಚರ್ಚೆ ಮಾಡಿದ್ಧಾರೆ.

ಅಚ್ಛೇ ದಿನ್; 2 ಸಮೋಸಾ, 1 ಕಾಫಿ, 1 ನೀರಿನ ಬಾಟಲಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ರೂ. 490
ಸಮೋಸಾ, ಕಾಫಿ
Follow us
| Updated By: ಶ್ರೀದೇವಿ ಕಳಸದ

Updated on:Dec 30, 2022 | 11:51 AM

Viral : ಅಚ್ಛೇ ದಿನ್​ಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ಈ ಸುದ್ದಿಯನ್ನು ಗಮನಿಸಿ. ಪತ್ರಕರ್ತೆಯೊಬ್ಬರು ಮುಂಬೈ ವಿಮಾನದಲ್ಲಿ ರೂ. 490 ಕೊಟ್ಟು ಎರಡು ಸಮೋಸಾ, ಒಂದು ಕಾಫಿ ಮತ್ತು ಒಂದು ನೀರಿನ ಬಾಟಲಿಯನ್ನು ಖರೀದಿಸಿದ ನಂತರ ‘ಕಾಫೀ ಅಚ್ಛೇ ದಿನ್ ಆಗಯೇ ಹೈ​’ ಎಂದು ಬಿಜೆಪಿ ಸರ್ಕಾರವನ್ನು ಗೇಲಿ ಮಾಡಿ ಬಿಲ್​ ಸಮೇತ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.

ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮೋಸಾ, ನೀರಿನ ಬಾಟಲಿ ಮತ್ತು ಕಾಫಿ ಖರೀದಿಸಿದ ಪತ್ರಕರ್ತೆ ಫರಾ ಖಾನ್​ ಬಹಳೇ ಒಳ್ಳೆಯದ ದಿನಗಳು ಬಂದಿವೆ ಎಂದು ಮಾಡಿದ ಟ್ವೀಟ್ ಇದಾಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಂಡಿ ಕಾಫಿ ಕೈಗೆಟಕುವ ದರದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ : ವರಮಾಲಾಗೆ ಸವಾಲು ಹಾಕಿದ ವಧು‘ಯೋಗ‘; ವೈರಲ್ ಆದ ವಿಡಿಯೋ

ಆಹಾರ ಮತ್ತು ಪ್ರಯಾಣದ ಆಯ್ಕೆ ಆದಷ್ಟು ಅಗ್ಗವಾಗಿರಲಿ ಅದಕ್ಕಾಗಿ ಸಾಕಷ್ಟು ಮಾರ್ಗಗಳಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೈದರಾಬಾದ್​ ವಿಮಾನ ನಿಲ್ದಾಣದ ಬೇರೆ ಬೇರೆ ಮಳಿಗೆಗಳಲ್ಲಿ ಒಂದೇ ತಿಂಡಿಯ ಬೆಲೆಯಲ್ಲಿ ಹೇಗೆ ಮತ್ತು ಎಷ್ಟು ವ್ಯತ್ಯಾಸವಿರುತ್ತದೆ ಎನ್ನುವುದನ್ನು ಚರ್ಚಿಸಿದ್ದಾರೆ ಕೆಲವರು. ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ ಒಂದು ಇಡ್ಲಿ ವಡೆಗೆ ನೂರು ರೂಪಾಯಿ, ಕಿತ್ತಳೆ ಜ್ಯೂಸಿಗೆ ರೂ. 150. ಅಚ್ಛೆ ದಿನಗಳು ಹೇಗೆ ಆದಾವು? ಎಂದು ಕೇಳಿದ್ದಾರೆ ಇನ್ನೂ ಒಬ್ಬರು. ಇದಕ್ಕೆ ಪ್ರತಿಯಾಗಿ, ಇದು ಯಾವ ಮಳಿಗೆಯಲ್ಲಿ ಎನ್ನುವ ವಿವರವನ್ನು ಕೊಡಿ ಎಂದಿದ್ಧಾರೆ ಒಬ್ಬರು.

ಇದನ್ನೂ ಓದಿ : ಏರ್​ಪಾಡ್ಸ್​ ಕಳೆದುಕೊಂಡಿದ್ದು ವಿಮಾನದಲ್ಲಿ, ಹುಡುಕಿಕೊಡಿ ಎನ್ನುತ್ತಿರುವುದು ನೆಟ್ಟಿಗರಲ್ಲಿ

ದುಬೈ ಏರ್​ಪೋರ್ಟ್​ಗೆ ಬಂದು ನೋಡಿ ಎಂದು ಮತ್ತೊಬ್ಬರು ಆಹ್ವಾನಿಸಿದ್ಧಾರೆ. ಕೇವಲ ಏರ್​ಪೋರ್ಟ್​ನಲ್ಲಿ ಮಾತ್ರವಲ್ಲ ಮಲ್ಟಿಪ್ಲೆಕ್ಸ್​ಗಳಲ್ಲಿಯೂ ಸಮೋಸಾ ಮತ್ತು ಪಾಪ್​ಕಾರ್ನ್​ ಬೆಲೆ ಶುರುವಾಗುವುದೇ ರೂ. 200 ಮತ್ತು ರೂ. 300ರಿಂದ ಎಂದಿದ್ದಾರೆ ಮತ್ತೊಬ್ಬರು.

ಅಚ್ಛೇ ದಿನ್​ ಬಗ್ಗೆ ಮತ್ತು ವಿಮಾನ ನಿಲ್ದಾಣಗಳ ಆಹಾರೋತ್ಪನ್ನಗಳ ಬೆಲೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:45 am, Fri, 30 December 22

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ