ವರಮಾಲಾಗೆ ಸವಾಲು ಹಾಕಿದ ವಧು‘ಯೋಗ‘; ವೈರಲ್ ಆದ ವಿಡಿಯೋ
Indian Wedding: ವಧು, ಯೋಗವನ್ನು ಗಂಭೀರವಾಗಿ ಪರಿಗಣಿಸಿದರೆ ವರ ಇಂಥ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ! ಮಿಲಿಯನ್ಗಟ್ಟಲೆ ಜನರು ಈ ವಿಡಿಯೋ ನೋಡಿದ್ದಾರೆ, ನೋಡುತ್ತಲೇ ಇದ್ಧಾರೆ.

Viral Video : ಭಾರತೀಯ ಮದುವೆಗಳೆಂದರೆ ಸಾಮಾನ್ಯವಾಗಿ ಸಂಭ್ರಮ, ಉತ್ಸಾಹ, ನೃತ್ಯ, ಸಂಗೀತ, ವಿನೋದ, ಊಟ ಇತ್ಯಾದಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವರ ವಧುವಿನ ಕೈಯಿಂದ ಸಲೀಸಾಗಿ ಮಾಲೆ ಹಾಕಿಸಿಕೊಂಡ. ಆದರೆ ವಧು ಮಾತ್ರ ಹಿಂಬರಿಕೆಯಲ್ಲಿ ಕಮಾನಿನಂತೆ ಬಾಗಿ ವರನಿಗೆ ಸವಾಲು ಎಸೆದಿದ್ದಾಳೆ. ಅಂತೂ ವರ ಕಷ್ಟಪಟ್ಟು ಬಾಗಿ ಮಾಲೆಯನ್ನು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ವಧು ಯೋಗವನ್ನು ಗಂಭೀರವಾಗಿ ಪರಿಗಣಿಸಿದಂತಿದೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ!
ಡಿಸೆಂಬರ್ 10ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ 1.8 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 1.5 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅದ್ಭುತ! ಇವರ ಬಾಗುವಿಕೆಯನ್ನು ಅಚ್ಚರಿಯಿಂದ ನೋಡುತ್ತಿದ್ದೇನೆ ಎಂದಿದ್ದಾರೆ ಹಲವರು. ಆಹಾ ಬಾಗಲು ಕಲಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದ ಹಾಗಾಯಿತು ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ : ಪ್ರೀವೆಡ್ಡಿಂಗ್ ಶೂಟ್: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಜ್ಞೆ ತೊಟ್ಟ ‘ಅನಂತಗಾಯತ್ರಿ’
ವಧುವಿಗೋಸ್ಕರ ವರನೂ ಯೋಗ ಕಲಿತರೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎಂದು ಮಗದೊಬ್ಬರು ಕಾಲೆಳೆದಿದ್ದಾರೆ. ಖಂಡಿತ ಈಕೆ ವರನಿಗೂ ಯೋಗ ಕಲಿಸದೇ ಬಿಡುವುದಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ಅಂತೂ ಪದೇಪದೆ ಈ ವಿಡಿಯೋ ನೋಡುತ್ತ ಬಿಲ್ಲಿನಂತೆ ಹಿಂಬದಿಯಲ್ಲಿ ಆಕೆ ನಿರಾಯಾಸವಾಗಿ ಬಾಗುವುದನ್ನು ನೋಡುತ್ತ ಕುಳಿತಿದ್ಧಾರೆ ನೆಟ್ಟಿಗರು.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:43 pm, Wed, 28 December 22