ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು

Kerala : ಉತ್ಸಾಹದಿಂದ ಸಹಕಲಾವಿದರೊಂದಿಗೆ ಈ ವಧು ಚಂಡೆ ನುಡಿಸುವುದನ್ನು ನೋಡುತ್ತಿದ್ದರೆ ಎಂಥವರಿಗೂ ಉಮೇದು ಬರುತ್ತದೆ. ನಿನ್ನೆಯಷ್ಟೇ ಈ ವಿವಾಹ ಕೇರಳದಲ್ಲಿ ನೆರವೇರಿದೆ. ನೋಡಿ ವೈರಲ್ ಆದ ಈ ವಿಡಿಯೋ.

ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು
ತನ್ನ ಮದುವೆಯಲ್ಲಿ ಚಂಡೆವಾದನ ನುಡಿಸಿದ ವಧು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 27, 2022 | 5:57 PM

Viral Video : ವಧುವೆಂದರೆ ನಾಚಿ ನೀರಾಗಿ ನೆಲ ನೋಡುತ್ತ ಕುಳಿತುಕೊಳ್ಳುವ ಕಾಲ ಇದಲ್ಲ ಎನ್ನುವುದಕ್ಕೆ ಈ ತಾಣದಲ್ಲಿಯೇ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಅನೇಕ ಬಗೆಯಲ್ಲಿ ವಧುವರರು ಮದುವೆ ಮಂಟಪಕ್ಕೆ ಪ್ರವೇಶ ನೀಡುವುದನ್ನು ನೋಡಿ ಅಚ್ಚರಿಗೆ ಒಳಗಾಗಿದ್ದೀರಿ. ಕೇರಳದ ಗುರುವಾಯೂರ್ ದೇವಾಲಯದಲ್ಲಿ ನಡೆದ ಈ ಮದುವೆಯ ವಿಶೇಷ ಏನೆಂದು ನೀವೇ ನೋಡಿ. ಈ ವಿಡಿಯೋ ನೋಡುತ್ತಿದ್ದಂತೆ ನಿಮ್ಮ ಮನಸ್ಸು ಗರಿಗೆದರಿದ ನವಿಲಿನಂತಾಗದಿದ್ದರೆ ಹೇಳಿ!

ವಧು ಚಂಡೆ ವಾದನದಲ್ಲಿ ಪರಿಣಿತೆ. ತನ್ನ ಮದುವೆ ಸಂದರ್ಭದಲ್ಲಿ ಪುಟ್ಟದೊಂದು ಕಛೇರಿಯನ್ನೇ ಕೊಟ್ಟಿದ್ದಾಳೆ. ಈ ವಿಡಿಯೋದ ನೋಟ್ ಹೀಗಿದೆ, ‘ಇಂದು ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ. ವಧುವಿನ ತಂದೆ ಚಂಡೆ ಪರಿಣತರು. ಮಗಳೂ ಕೂಡ ಚಂಡೆ ಕಲಾವಿದೆ. ವಧು ವರರ ಮುಖದಲ್ಲಿರುವ ಸಂತೋಷ ಯಾರನ್ನೂ ಸಮ್ಮೋಹನಗೊಳಿಸುವಂತಿದೆ.’

ಇದನ್ನೂ ಓದಿ : ತಾಯಿಯ ಕೊನೆಯ ಆಸೆ ಪೂರೈಸಲು ಐಸಿಯುನಲ್ಲಿಯೇ ಮಗಳ ಮದುವೆ

ನೆಟ್ಟಿಗರು ಈ ವಿಡಿಯೋ ನೋಡಿ ಮಹಾ ಅಚ್ಚರಿಗೆ ಒಳಗಾಗಿದ್ದಾರೆ. ಸಾಕಷ್ಟು ಉಲ್ಲಸಿತರಾಗಿದ್ದಾರೆ. ಆಹಾ ಇಂತ ಚಂಡೆವಾದನವನ್ನು ನೋಡಿಯೇ ಇರಲಿಲ್ಲ, ಅದರಲ್ಲೂ ವಧು ಹೀಗೆ ಉತ್ಸಾಹದಿಂದ ನುಡಿಸುತ್ತಿರುವುದನ್ನು ನೋಡಲು ಬಹಳ ಸಂತೋಷವೆನ್ನಿಸುತ್ತಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವಧುವರರು ಬಹಳ ಸುಂದರವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎನ್ನುವುದು ನನಗೆ ಖಾತ್ರಿ ಇದೆ ಎಂದಿದ್ದಾರೆ ಮತ್ತೊಬ್ಬರು. ಕಲೆಯ ಬೇರುಗಳು ಇಲ್ಲಿ ಒಂದಾಗಿವೆ ಇವರಿಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ. ವಧು ಈ ವಿಡಿಯೋದ ಶೈನಿಂಗ್ ಸ್ಟಾರ್ ಎಂದಿದ್ದಾರೆ ಕೆಲವರು.

ಅಂದಹಾಗೆ ಈ ವಧು ಚೆಂಡೆವಾದನದಲ್ಲಿ ಪರಿಣತಿ ಪಡೆದ ಕಲಾವಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:56 pm, Tue, 27 December 22

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ