ತೀವ್ರ ಆತಂಕಕ್ಕೆ ಒಳಗಾದ ಮಗಳನ್ನು ಅಮ್ಮ ಸಾಂತ್ವನಿಸಿದ ವಿಶಿಷ್ಟ ಬಗೆ ಇಲ್ಲಿದೆ

Anxiety Attack: ರಸ್ತೆಯಲ್ಲಿ ಹೀಗೆ ಮಲಗಿದ್ದೀ! ಎಂದು ಕೋಪಗೊಳ್ಳದೆ, ಏಳಿಸುವ ಪ್ರಯತ್ನ ಮಾಡದೆ, ಬುದ್ಧಿ ಹೇಳದೆ, ಈ ಸ್ಥಿತಿಯಲ್ಲಿ ತಾನು ಮಗಳೊಂದಿಗೆ ಸಂಪೂರ್ಣ ಜೊತೆಯಾಗಿದ್ದೇನೆ ಎಂಬ ಭಾವಸಾಂತ್ವನವನ್ನು ಅವಳಿಗೆ ನೀಡುತ್ತಾಳೆ ತಾಯಿ.

ತೀವ್ರ ಆತಂಕಕ್ಕೆ ಒಳಗಾದ ಮಗಳನ್ನು ಅಮ್ಮ ಸಾಂತ್ವನಿಸಿದ ವಿಶಿಷ್ಟ ಬಗೆ ಇಲ್ಲಿದೆ
ತೀವ್ರತರವಾದ ಆತಂಕಕ್ಕೆ ಒಳಗಾಗಿ ಮಗಳು ರಸ್ತೆಯ ಮೇಲೆ ಮಲಗಿದಾಗ ಅಮ್ಮ ಸಾಂತ್ವನಿಸಲು ಬರುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 28, 2022 | 11:03 AM

Viral Video : ಮನಸ್ಸು ಎನ್ನುವುದು ಗಾಜಿನ ಹೂಜಿ ಇದ್ದಂತೆ. ಬಹಳ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಸ್ವಲ್ಪ ಏರುಪೇರಾದರೂ ಅದು ಸೀಳುತ್ತದೆ. ಯಾಕೆ ಸೀಳಿತು ಎನ್ನುವುದಕ್ಕೆ ಉತ್ತರ ಹುಡುಕದೆ ಸೀಳಿದ್ದನ್ನು ಹೇಗೆ ನಿಭಾಯಿಸಬೇಕು ಎನ್ನುವುದರತ್ತ ಹೆಚ್ಚು ಗಮನವಿರಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ,  ಮಗಳು ತೀವ್ರವಾಗಿ ಆತಂಕಕ್ಕೆ (Anxiety Attack) ಒಳಗಾಗಿ ರಸ್ತೆ ಮೇಲೆ ಮಲಗಿದ್ದಾಳೆ. ಕಾರಿನಲ್ಲಿ ಬಂದಿಳಿವ ತಾಯಿ ಮಗಳ ಬಳಿ ಬಂದು ಅವಳ ಪಕ್ಕದಲ್ಲಿ ಮಲಗುತ್ತಾಳೆ. ಯಾಕೆ ಹೀಗೆ ಎಂದು ಯೋಚಿಸುತ್ತಿದ್ದೀರಾ?

ಧೋ ಎಂದು ಮಳೆ ಸುರಿಯುತ್ತಿದೆ. ರಸ್ತೆ ಮೇಲೆ ಹೀಗೆ ಮಗಳು ಮಲಗಿದ್ದಾಳೆ. ತಾಯಿಯಾದವಳು ಅವಳನ್ನು ಕರೆದೊಯ್ದು ಕಾರಿನೊಳಗೆ ಕೂರಿಸಬೇಕಿತ್ತು ಎಂದು ನೀವು ಎಣಿಸುತ್ತೀರಿ. ಆದರೆ ಹಾಗೆ ಮಾಡದ ಆಕೆ ಮಗಳಂತೆಯೇ ರಸ್ತೆಯಲ್ಲಿ ಮಲಗುತ್ತಾಳೆ. ಏಕೆಂದರೆ ಆಕೆಯ ಮಗಳು Anxiety Attack ಗೆ ಒಳಗಾಗಿದ್ದಾಳೆ. ಈ ಸ್ಥಿತಿಯಲ್ಲಿರುವ ಆಕೆಯನ್ನು ಶಾಂತಗೊಳಿಸಲು ಆಕೆ ಇದ್ದಲ್ಲಿಗೇ ಬಂದು ಆಕೆಯಂತೆಯೇ ಮಲಗಿ ಅವಳ ಕೈ ಹಿಡಿದುಕೊಂಡು ಸಮಾಧಾನಗೊಳಿಸುವುದು ಆಕೆಯ ಉದ್ದೇಶ.

ಇದನ್ನೂ ಓದಿ : Viral Video : ನೀವೇನು ಹೇಳುತ್ತೀರಿ? ಈ ಮಹಿಳೆ ಕುದಿಯುವ ಎಣ್ಣೆಯಲ್ಲಿ ಬರಿಗೈಯಿಂದ ವಡಾಪಾವ್​ ತೆಗೆಯುತ್ತಿದ್ದಾರಲ್ಲ

ರಸ್ತೆಯಲ್ಲಿ ಹೀಗೆ ಮಲಗಿದ್ದೀ! ಎಂದು ಕೋಪಗೊಳ್ಳದೆ, ಅವಳನ್ನು ಏಳಿಸುವ ಪ್ರಯತ್ನ ಮಾಡದೆ, ಬುದ್ಧಿ ಹೇಳಲು ಮುಂದಾಗದೆ, ಅವಳ ಈ ಸ್ಥಿತಿಯಲ್ಲಿ ತಾನು ಅವಳೊಂದಿಗೆ ಸಂಪೂರ್ಣವಾಗಿ ಜೊತೆಯಾಗಿದ್ದೇನೆ ಎಂಬ ಭಾವಸಾಂತ್ವನವನ್ನು ಅವಳಿಗೆ ನೀಡುತ್ತಾಳೆ.

ಮಾನಸಿಕ ಸಮಸ್ಯೆಗಳಿಗೆ ಒಳಗಾದವರನ್ನು ಹೀಗೆ ಪ್ರೀತಿಯಿಂದ, ಅರಿವಿನಿಂದ ಸಾಂತ್ವನಗೊಳಿಸಬೇಕು. ಪ್ರೀತಿ,  ಅಂತಃಕರಣ ಮತ್ತು ಸಹನೆಯೇ ಇದಕ್ಕೆ ದಿವ್ಯೌಷಧಿ. ಈ ವಿಡಿಯೋ ಅನ್ನು ಈತನಕ 3.4 ಮಿಲಿಯನ್ ಜನರು ನೋಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 1.4 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:00 am, Wed, 28 December 22