ಈ ಬೀದಿಯಲ್ಲಿ, ಕಡುಚಳಿಗಾಲದಲ್ಲಿ ನಿಮಗೂ ಒಂದು ಬೆಚ್ಚಗಿನ ಮನೆಯಿರಲಿ
Viral Video : ಈ ಮಹಿಳೆ ಡ್ರಮ್ ಒಂದನ್ನು ಕಾರಿನಿಂದ ತೆಗೆದು ಬೀದಿಯಲ್ಲಿ ಇಡುತ್ತಾಳೆ. ಸುತ್ತಮುತ್ತಲಿನ ನಾಯಿಗಳಿಗೆ ಕರೆಯುತ್ತಿದ್ದಂತೆ ಅವು ಬಂದು ನಿಲ್ಲುತ್ತವೆ. ಎದುರಿಗಿದ್ದ ಬೆಚ್ಚಗಿನ ಮನೆಯನ್ನು ನೋಡಿ ಕ್ಷಣ ಸುಮ್ಮನೇ ದಿಟ್ಟಿಸುತ್ತವೆ.
Viral Video : ಎಲ್ಲೆಡೆ ಚಳಿ ಮೈಕೊರೆಯುತ್ತಿದೆ. ನಮಗಾದರೆ ಮನೆಗಳಿವೆ, ಹೊದಿಕೆಗಳಿವೆ. ಆದರೆ ಬೀದಿಯ ನಾಯಿಗಳಿಗೆ? ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಮಹಿಳೆಯೊಬ್ಬರು ಡ್ರಮ್ ನಂಥದ್ದನ್ನು ಕಾರಿನಿಂದ ಹೊರತೆಗೆದು ಬೀದಿ ಬಳೀ ಇಡುತ್ತಿದ್ದಾರೆ. ಅಲ್ಲಿದ್ದ ನಾಯಿಗಳನ್ನು ಕರೆದು ಇದೇ ನಿಮ್ಮ ಮನೆ ಎಂದು ಪ್ರೀತಿಯಿಂದ ಕೈತೋರುತ್ತಿದ್ದಾರೆ. ಎಂಥ ಆಪ್ತವಾದ ವಿಡಿಯೋ ಇದಲ್ಲವೆ?
ಇದನ್ನೂ ಓದಿView this post on Instagram
ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಈಗ ಚಳಿ ವಿಪರೀತಕ್ಕೇರಿದೆ. ಅಲ್ಲಿಯ ಬೀದಿನಾಯಿಗಳು ಕಡುಕಷ್ಟದಲ್ಲಿವೆ. ಹಾಗಾಗಿ ನಿರಾಶ್ರಿತ ನಾಯಿಗಳಿಗೆ ಸಹಾಯ ಮಾಡಲು ಪ್ರಾಣಿಪ್ರಿಯರು ಮುಂದಾಗುತ್ತಿದ್ದಾರೆ. ಸ್ಟ್ರೇ ಟಾಕ್ ಇಂಡಿಯಾ, ಬೀದಿನಾಯಿಗಳಿಗೆ ಆಶ್ರಯ ಕೊಡುವ ಸಂಸ್ಥೆಯು ಹೀಗೆ ನಾಯಿಗಳಿಗೆ ತಾತ್ಕಾಲಿಕ ಮನೆಗಳ ವ್ಯವಸ್ಥೆ ಮಾಡುತ್ತಿದೆ. ಪ್ಲಾಸ್ಟಿಕ್ ಅಥವಾ ಮರದ ಡ್ರಮ್ಗಳನ್ನು ಖರೀದಿಸಿ ಅದರೊಳಗೆ ಹಾಸಿಗೆಯನ್ನಿಟ್ಟು ಬೀದಿನಾಯಿಗಳು ಬೆಚ್ಚಗೆ ಮಲಗುವಂತೆ ಸಹಾಯ ಮಾಡುತ್ತಿದೆ.
ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ
ಅನೇಕರು ಈ ವಿಡಿಯೋ ನೋಡಿ ಇವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಎಂಥ ಆರ್ದ್ರವಾದ ವಿಡಿಯೋ ಇದು ಇದನ್ನು ನೋಡಲು ಬಹಳೇ ಖುಷಿ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ಹಲವಾರು ಜನ. ಈ ಐಡಿಯಾ ಬಹಳ ಚೆನ್ನಾಗಿದೆ, ನಾವೂ ಹೀಗೆಯೇ ಬೀದಿನಾಯಿಗಳಿಗೆ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ
Published On - 6:28 pm, Tue, 27 December 22