ಒಂದೇ ನಿಮಿಷ, ನನ್ನ ಮುದ್ದುನಾಯಿಗೆ ಊಟ ಮಾಡಿಸಬೇಕು; ಮೇಕಪ್​ ಮಧ್ಯೆ ಬ್ರೇಕ್​ ತೆಗೆದುಕೊಂಡ ವಧು

Indian Bride : ಸಾಕಿದ ನಾಯಿಗಳು ಮಕ್ಕಳಿಗಿಂತ ಹೆಚ್ಚು ಎನ್ನುವುದಕ್ಕೆ ಉದಾಹರಣೆ ಈ ವಿಡಿಯೋ. ತನ್ನ ನಾಯಿಗೆ ಊಟ ಮಾಡಿಸಬೇಕು ಎನ್ನುವ ಕಾರಣಕ್ಕೆ ಈ ವಧು ಮೇಕಪ್​ನಿಂದ ಬ್ರೇಕ್​ ತೆಗೆದುಕೊಳ್ಳುತ್ತಾಳೆ.

ಒಂದೇ ನಿಮಿಷ, ನನ್ನ ಮುದ್ದುನಾಯಿಗೆ ಊಟ ಮಾಡಿಸಬೇಕು; ಮೇಕಪ್​ ಮಧ್ಯೆ ಬ್ರೇಕ್​ ತೆಗೆದುಕೊಂಡ ವಧು
ಮೇಕಪ್ ಅರ್ಧಕ್ಕೆ ಬಿಟ್ಟು ತನ್ನ ನಾಯಿಗೆ ಉಣ್ಣಿಸುತ್ತಿರುವ ವಧು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 08, 2022 | 3:18 PM

Viral Video : ವಧು ತನ್ನ ಮದುವೆಯ ತಯಾರಿಯಲ್ಲಿ ಮುಳುಗಿದರೆ ಮುಗಿಯಿತು. ಕೈಗೊಬ್ಬರು ಕಾಲಿಗೊಬ್ಬರು ತಲೆಗೊಬ್ಬರು, ಬೆರಳಿಗೊಬ್ಬರು… ಎಷ್ಟು ಜನರಾದರೂ ಸಾಲುವುದೇ ಇಲ್ಲ ಅವಳ ಸಹಾಯಕ್ಕೆ. ರಾಜಕುಮಾರಿಯಂತೆ ಮಿನುಗುತ್ತಿರುತ್ತಾಳೆ. ಆದರೆ ಈ ವಿಡಿಯೋದಲ್ಲಿ ನೋಡಿ. ಈ ವಧು ತನ್ನ ಮದುವೆಗೆಂದು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ತನ್ನ ಮುದ್ದುನಾಯಿಗೆ ಊಟ ಮಾಡಿಸಬೇಕಿರುವುದು ನೆನಪಾಗಿದೆ. ಮೇಕಪ್​ ಅರ್ಧಕ್ಕೇ ಬಿಟ್ಟು, ನಾಯಿಗೆ ಊಟ ಮಾಡಿಸಲು ಬಂದಿದ್ದಾಳೆ.

View this post on Instagram

A post shared by Simar K (@simark_makeup)

ಮಗುವಿನಂತೆ ನೋಡಿಕೊಳ್ಳುತ್ತಿದ್ದರೆ ಮಾತ್ರ ಇಂಥ ನಾಯಿಗಳನ್ನು ಸಾಕಬೇಕು ಎನ್ನುವುದು ಅಕ್ಷರಶಃ ನಿಜ. ಇಲ್ಲವಾದಲ್ಲಿ ಜೋಲುಮುಖ ಹಾಕಿಕೊಂಡು ಕುಳಿತುಬಿಡುತ್ತವೆ ಅಥವಾ ಕುಣಿದು ಕುಪ್ಪಳಿಸಿ ನಿಮ್ಮ ಜೀವ ಹಿಂಡಿಬಿಡುತ್ತವೆ. ಒಟ್ಟು ಗರ್ಭಗುಡಿಯ ಮುಂದೆ ಬಸವಣ್ಣ ಕುಳಿತ ಹಾಗೆ ನೀವು ಸದಾ ಅವುಗಳ ದೇಖರೇಖಿ ಮಾಡುತ್ತಲೇ ಇರಬೇಕು.

ಹಿಂದೆಮುಂದೆ ನೋಡದೆ ಸೀದಾ ನೆಲದ ಮೇಲೆ ಕುಳಿತು ಮಗುವಿಗೆ ಉಣ್ಣಿಸಿದ ಹಾಗೆ ಉಣಿಸುತ್ತಿದ್ದಾಳೆ. 1 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 5,000ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಗಂಡನ ಮನೆಗೆ ಈ ಮುದ್ದುನಾಯಿಯನ್ನೂ ಕರೆದುಕೊಂಡು ಹೋಗುತ್ತಾಳೆಯೇ? ಎಂಬ ಪ್ರಶ್ನೆ ಏಳದೇ ಇರದು ಅಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್