ಕನ್ಯಾದಾನ ನಿರಾಕರಿಸಿದೆ ಎಂದ ವಧು, ಸಂಪೂರ್ಣ ಬೆಂಬಲ ಸೂಚಿಸಿದ ನೆಟ್ಟಿಗರು
Kanyadan : ‘ಒಂದು ಮನೆಯಿಂದ ಇನ್ನೊಂದು ಮನೆಗೆ ಹೆಣ್ಣುಮಕ್ಕಳನ್ನು ವರ್ಗಾಯಿಸುವಂತಿಲ್ಲ. ಹಾಗಾಗಿ ನಾನು ನನ್ನ ಮದುವೆಯಲ್ಲಿ ಕನ್ಯಾದಾನ ಪ್ರಕ್ರಿಯೆಯನ್ನು ನಿರಾಕರಿಸಿದೆ. ನನ್ನ ತಂದೆತಾಯಿ ಕೂಡ ಇದೆಲ್ಲವನ್ನು ನಿರಾಕರಿಸಿದರು.’
Viral : ಭಾರತೀಯ ವಿವಾಹ ಪದ್ಧತಿಯಲ್ಲಿ ಪ್ರತೀ ಹಂತಗಳೂ ನಿರ್ದಿಷ್ಟವಾದ ಅರ್ಥಗಳಿಂದ ಕೂಡಿವೆ. ಇವುಗಳಲ್ಲಿ ಕನ್ಯಾದಾನ ಎನ್ನುವುದು ಮಹತ್ತರ ಪಾತ್ರ ವಹಿಸುತ್ತದೆ. ಆದರೆ ಅನಾದಿಕಾಲದಲ್ಲಿ ಮಾಡಿಟ್ಟ ಈ ಪದ್ಧತಿಗಳು ಬದಲಾದ ಕಾಲಘಟ್ಟದಲ್ಲಿ ಅರ್ಥಹೀನವೆನ್ನಿಸುತ್ತಿವೆ. ಹೆಣ್ಣಿನ ಅಸ್ತಿತ್ವವನ್ನು ಅವಮಾನಿಸುವಂತಿವೆ ಎಂದು ಆಧುನಿಕ ಹೆಣ್ಣುಮಕ್ಕಳು ಇಂಥ ಪದ್ಧತಿಗಳನ್ನು ನಿರ್ಭಿಡೆಯಿಂದ ನಿರಾಕರಿಸಲು ಆರಂಭಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇದೀಗ ವೈರಲ್ ಆಗಿರುವ ಈ ಪೋಸ್ಟ್. ತನ್ನ ಮದುವೆಯಲ್ಲಿ ಕನ್ಯಾದಾನವನ್ನು ಹೇಗೆ ನಿರಾಕರಿಸಿದೆ ಎಂಬುದನ್ನು ವಧುವೊಬ್ಬಳು ಟ್ವೀಟ್ ಮಾಡಿದ್ದಾಳೆ. ಇದಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ನೆಟ್ಟಿಗರು.
Also the hugest shout out to my husband because when his pandit ji asked why not do it he refused to listen and just told him to listen to us. If there was a way to fall more for him, I would have. I kinda did.
ಇದನ್ನೂ ಓದಿ— seething and growing (@keepsitrustic) December 7, 2022
@keepitrustic ಎನ್ನುವ ಖಾತೆಯಲ್ಲಿ ಈ ಟ್ವೀಟ್ ಇದೆ. ತನ್ನ ಮದುವೆಯ ಸಂದರ್ಭದಲ್ಲಿ ತಾನು ಕನ್ಯಾದಾನವನ್ನು ಹೇಗೆ ನಿರಾಕರಿಸಿದೆ ಎನ್ನುವ ಕುರಿತು ಈಕೆ ಚರ್ಚಿಸಿದ್ಧಾಳೆ. ‘ನನ್ನ ಮದುವೆಯಲ್ಲಿ ನಾನು ಕನ್ಯಾದಾನವನ್ನು ನಿರಾಕರಿಸಿದೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಹೆಣ್ಣನ್ನು ವರ್ಗಾವಣೆ ಮಾಡುವ ಈ ಪದ್ಧತಿಯು ನನಗೆ ಇಷ್ಟವಿಲ್ಲ. ನನಗಷ್ಟೇ ಅಲ್ಲ, ನನ್ನ ತಂದೆತಾಯಿಯೂ ಈ ಪದ್ಧತಿಯನ್ನು ನಿರಾಕರಿಸಿದರು’ ಎಂದು ಟ್ವೀಟ್ ಮಾಡಿದ್ಧಾರೆ ಈಕೆ.
ಇದನ್ನೂ ಓದಿ : ಮಿಸ್ ಅರ್ಜೆಂಟೀನಾ, ಮಿಸ್ ಪ್ಯೂರ್ಟೋರಿಕೋ ಇದೀಗ ವಿವಾಹ ಬಂಧನದಲ್ಲಿ
ಕನ್ಯಾದಾನ ಪ್ರಕ್ರಿಯೆಯು ಹೆಣ್ಣನ್ನು ಸರಕಿನಂತೆ ಕಾಣಲು ಸೂಚಿಸುತ್ತದೆ. ಹಾಗಾಗಿ ಇದು ಸಮ್ಮತವಲ್ಲ ಎಂದು ಬಹುತೇಕ ನೆಟ್ಟಿಗರು ಹೇಳಿದ್ದಾರೆ. ಉಳಿದ ಪದ್ಧತಿಗಳನ್ನು ಪಾಲಿಸಿದಿರಾ ಎಂದು ಒಬ್ಬರು ಕೇಳಿದ್ದಾರೆ. ಇಲ್ಲ ಸಿಂಧೂರ ಮತ್ತು ಸಪ್ತಪದಿಯನ್ನು ಮಾತ್ರ. ಪಂಡಿತರು ಉಳಿದುದನ್ನು ಪಾಲಿಸಲು ಒತ್ತಾಯಿಸಿದರು ನನ್ನ ಅಪ್ಪ ನಿರಾಕರಿಸಿದರು ಎಂದಿದ್ದಾಳೆ ಈ ಹೊಸ ಮದುವಣಗಿತ್ತಿ. ನಿಮಗೆ ಪದ್ಧತಿಗಳಲ್ಲಿ ನಂಬಿಕೆ ಇಲ್ಲದಿದ್ದರೆ ರಿಜಿಸ್ಟರ್ ಮದುವೆ ಆಗಬಹುದಿತ್ತಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಅದಕ್ಕೆ ಪ್ರತಿಯಾಗಿ ಒಬ್ಬರು ಅವರ ಮದುವೆ ಅವರದೇ ನಿಯಮ ಎಂದಿದ್ದಾರೆ. ‘ನಾನಂತೂ ಈಗಲೇ ನಿರ್ಧರಿಸಿದ್ದೀನಿ ನನ್ನ ಮದುವೆಯಲ್ಲಿ ಕನ್ಯಾದಾನ ಇರುವುದೇ ಇಲ್ಲ’ ಎಂದು ಒಬ್ಬರು ಹೇಳಿದ್ದಾರೆ.
ಎಲ್ಲರೂ ಹೊಸ ಮದುವಣಗಿತ್ತಿಯನ್ನು ಈ ನಿರ್ಧಾರಕ್ಕೆ ಅಭಿನಂದಿಸಿದ್ಧಾರೆ.
ನೀವೇನಂತೀರಿ ಈ ವಿಷಯವಾಗಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ