ಲೋಕಲ್ ಟ್ರೇನ್ನ ಮಹಿಳಾ ಕೂಲಿ ಕಾರ್ಮಿಕರಿಗೆ ಸಲಾಂ ಎನ್ನುತ್ತಿರುವ ನೆಟ್ಟಿಗರು
Local Train : ಯಾರೂ ಇಷ್ಟೊಂದು ಅಪಾಯವನ್ನು ಇಷ್ಟಪಟ್ಟು ತಂದುಕೊಳ್ಳಲಾರರು. ಇದು ಸ್ತ್ರೀಶಕ್ತಿಗಷ್ಟೇ ಸಂಬಂಧಿಸಿದ್ದಲ್ಲ. ಹೊಟ್ಟೆಪಾಡಿನ ಅನಿವಾರ್ಯತೆ ಇದು ಎನ್ನುತ್ತಿದ್ದಾರೆ ಒಬ್ಬರು. ರಕ್ಷಣೆಯ ಹೊಣೆ ಯಾರದು ಎಂದು ಕೇಳುತ್ತಿದ್ದಾರೆ ಮತ್ತೊಬ್ಬರು.
Viral Video : ಲೋಕಲ್ ಟ್ರೇನ್ನ ದೃಶ್ಯ ಇದು. ರೈಲು ಬರುವುದನ್ನೇ ಕಾಯುತ್ತ ನಿಂತಿದ್ದ ಮಹಿಳಾ ಕೂಲಿ ಕಾರ್ಮಿಕರು ರೈಲು ಬಂದೊಡನೆ ಸರಕುಗಳನ್ನು ಸಾಗಿಸುವಲ್ಲಿ ಹೇಗೆ ತೊಡಗಿಕೊಳ್ಳುತ್ತಾರೆ ನೋಡಿ. ಡಿ.ಕೆ. ಹರಿ ಮತ್ತು ಹೇಮಾ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ಕೂಲಿ ಕಾರ್ಮಿಕರ ಚಾಕಚಕ್ಯತೆ, ಅನಿವಾರ್ಯತೆ ಎಲ್ಲವನ್ನೂ ಗಮನಿಸಿದ ನೆಟ್ಟಿಗರು ಇವರಿಗೆ ಯಾವ ರೀತಿಯ ಸುರಕ್ಷತೆ ಇದೆ, ಅದನ್ನು ಯಾರು ಒದಗಿಸುತ್ತಾರೆ ಎಂದು ಸಮಯೋಚಿತವಾಗಿ ಪ್ರಶ್ನಿಸಿದ್ಧಾರೆ.
Perfect case study for time and target setting. Appreciate Stree Shakti. Recd WA. pic.twitter.com/tDuibOllwE
ಇದನ್ನೂ ಓದಿ— D K Hari & Hema (@Bharathgyan) December 7, 2022
ಎಂಥದೋ ಎಲೆಯ ಕಟ್ಟುಗಳನ್ನು ಇವರು ಸಾಗಿಸುತ್ತಿದ್ದಾರೆ. ಇವರ ಈ ನಡೆಯನ್ನು ನೋಡಿದರೆ, ಅನೇಕ ವರ್ಷಗಳಿಂದ ಇವರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ಭಾಸವಾಗುತ್ತದೆ. ಏಕೆಂದರೆ ಕೆಲವೇ ಕೆಲ ಸೆಕೆಂಡುಗಳ ಕಾಲ ನಿಲ್ಲುವ ರೈಲಿನೊಳಗೆ ಇಷ್ಟೊಂದು ಸರಕುಗಳನ್ನು ಸಾಗಿಸುವುದೆಂದರೆ ಅದೆಷ್ಟು ಮೈಯೆಲ್ಲ ಕಣ್ಣಾಗಿ ಎಚ್ಚರವಿರಬೇಕು.
ಅನೇಕ ನೆಟ್ಟಿಗರು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಅದ್ಭುತ! ಬುದ್ಧಿವಂತಿಕೆಗೆ ಅನುಭವವು ಮಾರ್ಗದರ್ಶನ ಮಾಡಿದೆ ಎಂದಿದ್ದಾರೆ ಒಬ್ಬರು. ಮುಂಬೈನ ಡಬ್ಬಾವಾಲಾ ಚಿತ್ರಣವನ್ನು ನೆನಪಿಸಿಕೊಂಡಿದ್ದಾರೆ ಕೆಲವರು. ಮುಂಬೈವಾಸಿಗಳ ಶ್ರಮ ಮತ್ತು ಸರ್ಕಾರದ ನಿರ್ಲಕ್ಷ್ಯವನ್ನು ಹೀಗೆ ರೊಮ್ಯಾಂಟಿಸೈಸ್ ಮಾಡುವ ಅನಿವಾರ್ಯತೆ ಉಂಟಾಗುತ್ತದೆ, ನಾನೂ ಇದಕ್ಕೆ ಹೊರತಾಗಿಲ್ಲ ಎಂದಿದ್ಧಾರೆ ಇನ್ನೊಬ್ಬರು. ಬದುಕು ಸುಲಭ ಅಲ್ಲ, ಯಾರೂ ಇಷ್ಟೊಂದು ಅಪಾಯವನ್ನು ಇಷ್ಟಪಟ್ಟು ತಂದುಕೊಳ್ಳಲಾರರು. ಇದು ಸ್ತ್ರೀಶಕ್ತಿಗಷ್ಟೇ ಸಂಬಂಧಿಸಿದ್ದಲ್ಲ. ಒಟ್ಟಾರೆ ಹೊಟ್ಟೆಪಾಡಿನ ಚಿಂತೆಯಿದು ಎಂದಿದ್ದಾರೆ ಮಗದೊಬ್ಬರು.
ಈಗಾಗಲೇ ಈ ವಿಡಿಯೋ ಅನ್ನು ಸುಮಾರು 2,40,000 ಕ್ಕೂ ಹೆಚ್ಚು ಜನ ನೋಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:09 am, Fri, 9 December 22