ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

Dog : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಇತ್ತೀಚೆಗಷ್ಟೇ ಸೂಟ್​ಕೇಸ್​ನೊಳಗಿದ್ದ ಬೆಕ್ಕು ಪತ್ತೆಯಾಗಿತ್ತು. ಇದೀಗ ಬ್ಯಾಗಿನೊಳಗಿದ್ದ ನಾಯಿ ಪತ್ತೆಯಾಗಿದೆ. ಏನಿದು ಹೀಗೆಲ್ಲ ಎಂದು ಪ್ರಾಣಿಪ್ರಿಯ ನೆಟ್ಟಿಗರು ಕೋಪಗೊಂಡಿದ್ದಾರೆ.

ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ
ಬ್ಯಾಗಿನಲ್ಲಿ ನಾಯಿ, ವಿಮಾನ ನಿಲ್ದಾಣದ ಸ್ಕ್ಯಾನಿಂಗ್ ಮಶೀನ್ ಪತ್ತೆ ಹಚ್ಚಿದೆ
Follow us
| Updated By: ಶ್ರೀದೇವಿ ಕಳಸದ

Updated on:Dec 09, 2022 | 12:26 PM

Viral : ಕಳೆದ ತಿಂಗಳು ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಸೂಟ್​ಕೇಸಿನೊಳಗೆ ಜೀವಂತ ಬೆಕ್ಕೊಂದು ಪತ್ತೆಯಾಗಿರುವ ವರದಿ ಓದಿದ್ದೀರಿ. ಅದು ಪ್ರಯಾಣಿಕರ ಬೆಕ್ಕಾಗಿರದೆ ಪಕ್ಕದಮನೆಯವರ ಬೆಕ್ಕಾಗಿತ್ತು. ಪ್ರಯಾಣಿಕರಿಗೆ ಅರಿವಿಲ್ಲದೆ ನಡೆದ ಘಟನ ಇದಾಗಿತ್ತು. ಆದರೆ ಇದೀಗ ವಿಸ್ಕಾನ್ಸಿನ್​ ಡೇನ್​ ಕೌಂಟಿ ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನೊಳಗೆ ಇಟ್ಟ ಬ್ಯಾಗಿನೊಳಗೆ ನಾಯಿಯೊಂದು ಪತ್ತೆಯಾಗಿದೆ. ಇದು ಅರಿವಿನಿಂದಲೇ ಆಗಿದ್ದೋ ಅರಿವಿಲ್ಲದೆ ಆಗಿದ್ದೋ ಗೊತ್ತಾಗುತ್ತಿಲ್ಲ. ಆದರೆ ಈ ಟ್ವೀಟ್ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಟ್ವೀಟ್​ ನ ನಂತರ ಅಮೆರಿಕಾದ ಸಾರಿಗೆ ಭದ್ರತಾ ಆಡಳಿತವು (TSA) ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ನಿಯಮಗಳನ್ನು ಅನುಸರಿಸಲು ಸಲಹೆ ನೀಡುತ್ತಿದೆ. ಎಲ್ಲಾ ಚೆಕ್ ಪಾಯಿಂಟ್​ಗಳಲ್ಲೂ ಪ್ರಯಾಣಿಕರ ಪ್ರತೀ ಬ್ಯಾಗ್​ ಅನ್ನೂ ಪರೀಕ್ಷಿಸಲು ಕೇಳಿಕೊಂಡಿದೆ. ಈ ನಾಯಿಮರಿ ಈ ಬ್ಯಾಗಿನೊಳಗೆ ಹೇಗೆ ಬಂದಿದೆಯೋ ಗೊತ್ತಿಲ್ಲ. ಈ ಟ್ವೀಟ್​ಗೆ ನೂರಾರು ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್

ಬ್ಯಾಗಿನಲ್ಲಿ ಬಂದು ಕುಳಿತ ನಾಯಿ ಯಾವ ತಳಿಯದು ಎಂಬ ಕುತೂಹಲ ಉಂಟಾಗುತ್ತಿದೆ. ಆ ನಾಯಿ ಸಾಕಿರುವ ನಾಯಿಯಾ ಬೀದಿಯದಾ? ಪ್ರಯಾಣಿಕರಿಗೆ ಬ್ಯಾಗ್​ ಭಾರ ಎನ್ನಿಸಲಿಲ್ಲವೆ? ನನಗಿದು ಅಚ್ಚರಿ ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು.

ಈಗ ನಾಯಿ ಆರಾಮಾಗಿದೆ ಎಂದು ಭಾವಿಸಬಹುದೆ? ಏಕೆಂದರೆ ಮುಂದೆ ಏನಾಯಿತು ಎನ್ನುವ ಮಾಹಿತಿ ತಿಳಿದು ಬಂದಿಲ್ಲ ಎಂದಿದ್ದಾರೆ ಇನ್ನೊಬ್ಬರು. ಪ್ರಾಣಿಯನ್ನು ವಿಮಾನದಲ್ಲಿ ಕರೆದೊಯ್ಯಬೇಕೆಂದೆರ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಅದಕ್ಕಾಗಿ ಹೀಗೆ ಮಾಡಿದರೆ ಈ ನಾಯಿಯನ್ನು ಸಾಕಿದವರು? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಇನ್ನೊಬ್ಬರು.

ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಕರೆದೊಯ್ಯವುದಾದರೆ ಸೂಕ್ತವಾದ ಈ ಕ್ರಮಗಳನ್ನು  ಅನುಸರಿಸಬೇಕು ಎಂದು ವಿಡಿಯೋ ಟ್ವೀಟ್ ಮಾಡಿದ್ದಾರೆ ಮತ್ತೊಬ್ಬರು.

ಆದರೂ ಎಷ್ಟು ಅಜಾಗರೂಕತೆ ಅಲ್ಲವಾ? ಮೊನ್ನೆ ಬೆಕ್ಕನ್ನು ಹೀಗೆ ತೆಗೆದುಕೊಂಡು ಹೋಗಲಾಗಿತ್ತು. ಈಗ ನಾಯಿ. ನಾಳೆ ಮಗು!? ಒಟ್ಟಿನಲ್ಲಿ ಪ್ರಯಾಣ ಮಾಡುವಾಗ ಬಹಳ ಗಮನವಿರಬೇಕು. ಕೆಲವು ಅರಿವಿದ್ದೇ ಆಗುತ್ತವೆ. ಇನ್ನೂ ಕೆಲವು ಅರಿವಿಲ್ಲದೆಯೂ ಆಗುತ್ತವೆ. ಒಟ್ಟಾರೆ ಜೀವ ಜೀವವೇ ಅಲ್ಲವೆ?

ಈ ಸುದ್ದಿ ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:22 pm, Fri, 9 December 22