ಬಾಕ್ಸಿಂಗ್​ನಲ್ಲಿ ಮೊಹಮ್ಮದ್​ ಅಲಿಯನ್ನು ಸೋಲಿಸಿದ ಈ ಪುಟ್ಟಣ್ಣ! ಹಳೆಯ ವಿಡಿಯೋ ವೈರಲ್

Muhammad Ali : ಈಗ ಈ ಪುಟ್ಟಣ್ಣ ಎಷ್ಟು ದೊಡ್ಡವನಾಗಿರಬಹುದು, ಎಲ್ಲಿರಬಹುದು, ಈ ವಿಡಿಯೋ ನೋಡಿದ್ದಾನೆಯೇ, ಅವನಿಗೆ ಹೇಗೆನ್ನಿಸುತ್ತಿರಬಹುದು? ಎಂದೆಲ್ಲ ನೆಟ್ಟಿಗರು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.

ಬಾಕ್ಸಿಂಗ್​ನಲ್ಲಿ ಮೊಹಮ್ಮದ್​ ಅಲಿಯನ್ನು ಸೋಲಿಸಿದ ಈ ಪುಟ್ಟಣ್ಣ! ಹಳೆಯ ವಿಡಿಯೋ ವೈರಲ್
ಪುಟ್ಟ ಬಾಲಕನೊಂದಿಗೆ ಮುಹಮ್ಮದ್​ ಅಲಿ ಜಿನ್ನಾ ಬಾಕ್ಸಿಂಗ್​ನಲ್ಲಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 08, 2022 | 12:23 PM

Viral Video : ಒಳಗೆ ಚಳಿ ಹೊರಗೆ ಎಳೇಬಿಸಿಲು. ಈ ಗುರುವಾರದ ಬೆಳಗು ಮಧ್ಯಾಹ್ನಕ್ಕೆ ನಿಧಾನ ಜಾರುತ್ತಿದೆ. ಈ ವಿಡಿಯೋ ನೋಡಿದರೆ ನಿಮ್ಮಲ್ಲಿ ಉತ್ಸಾಹ ಮತ್ತು ಪ್ರೀತಿ ಉಕ್ಕುವುದು ಗ್ಯಾರಂಟಿ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಕ್ಸಿಂಗ್​ಪಟು ಮೊಹಮ್ಮದ್​ ಅಲಿ ಪುಟ್ಟ ಬಾಲಕನೊಬ್ಬ ಸೋಲಿಸಿದ್ದಾನೆ. ಗೆಲ್ಲಬೇಕೆಂದರೆ ಸೋಲುವುದೂ ಗೊತ್ತಿರಬೇಕು ಎಂಬಂತೆ ಮುಹಮ್ಮದ್ ಅಲಿ ಇಲ್ಲಿ ಸೋಲುತ್ತ ಹೋಗಿರುವುದು ಎಂಥ ಆಪ್ತ ಅನುಭವ ಕೊಡುತ್ತದೆ. ನೋಡಿ ನೀವೂ…

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪುಟ್ಟ ಬಾಲಕ ತನ್ನ ಮೇಲೆ ಆಕ್ರಮಣ ಮಾಡಲು ಮೊಹಮ್ಮದ್ ಅಲಿ ಅವಕಾಶ ಮಾಡಿಕೊಡುತ್ತಾ ಹೋಗುವುದನ್ನು ನೋಡುವುದೇ ನಿಮ್ಮನ್ನು ಸೆಳೆಯುತ್ತಾ ಹೋಗುತ್ತದೆ. ಮಿನಿ ನಾಯರ್ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ತನ 1.6 ಮಿಲಿಯನ್ ಜನ ಈ ವಿಡಿಯೋ ನೋಡಿದ್ದಾರೆ. ಪದೇಪದೇ ಕೆನ್ನೆಯ ಮೇಲೆ ಗುದ್ದುವುದಂತೂ ಎಂಥ ಚೆಂದ ಇದೆ ನೋಡಿ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಈಗ ಈ ಮಗು ಈಗ ಎಷ್ಟು ದೊಡ್ಡದಾಗಿರಬಹುದು. ಇದನ್ನು ನೋಡಿ ಎಂಥ ಅಚ್ಚರಿಗೆ ಒಳಗಾಗಿರಬಹುದು ಎಂದು ಒಬ್ಬರು ಹೇಳಿದ್ದಾರೆ. ಈಗ ಈ ಪುಟ್ಟ ಬಾಲಕ ಎಲ್ಲಿದ್ಧಾನೆ ಎಂದು ಸಾಕಷ್ಟು ಜನರು ಕೇಳಿದ್ದಾರೆ. ಮಗುವನಿಂದ ಮುತ್ತು ಕೊಡಿಸಿಕೊಳ್ಳುವುದರ ಮೂಲಕ ಬದುಕನ್ನು ಸಂಭ್ರಮಿಸಿದ್ದಾರೆ ಮೊಹಮ್ಮದ್ ಎಂದಿದ್ದಾರೆ ಒಬ್ಬರು. ಈ ಮಗುವಿಗೆ ಇದು ಮರೆಯಲಾಗದ ಅನುಭವ ಎಂದಿದ್ದಾರೆ ಇನ್ನೊಬ್ಬರು. ಮೊಹಮ್ಮದ್​ ಅಲಿ ನೀವು ಎಂದಿಗೂ ಶ್ರೇಷ್ಠ ಎಂದು ಹಲವಾರು ಜನ ಅಭಿಮಾನ ಮತ್ತು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:22 pm, Thu, 8 December 22