AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್

Rat Eating Cake : ಇಲ್ಲಿರುವ ಮಹಾಶಯರೆಲ್ಲ ಘನಗಂಭೀರವಾಗಿ ಮೀಟಿಂಗ್ ಮಾಡುತ್ತಿದ್ಧಾರೆ. ಆದರೆ, ಇದ್ಯಾವ ಪರಿವೆಯೂ ಇಲ್ಲದೆ ಈಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ ಈ ಮೂಷಿಕ ಮಹಾರಾಯರು. ನೋಡಿ ವಿಡಿಯೋ.

ನೀವು ಮೀಟಿಂಗ್ ನಾನು ಈಟಿಂಗ್; ಇಲಿಯೊಂದು ಕೇಕ್​ ತಿನ್ನುತ್ತಿರುವ ವಿಡಿಯೋ ವೈರಲ್
ಮೀಟಿಂಗ್ ಮಾಡುತ್ತಿರುವಾಗ ಇಲಿ ಕೇಕ್ ತಿನ್ನುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 07, 2022 | 10:38 AM

Viral Video : ಮೀಟಿಂಗ್​ ಎಂದಮೇಲೆ ಇಂತಿಂಥವರು ಮಾತ್ರ ಹಾಜರಿರಬೇಕು ಎಂಬ ನಿಯಮವಿರುತ್ತದೆ. ಆದರೆ ಇಲ್ಲೊಬ್ಬರು ಆಹ್ವಾನವಿಲ್ಲದಿದ್ದರೂ ಮೀಟಿಂಗ್​ ಹಾಲ್​ನಲ್ಲಿ ಬಂದು ಕುಳಿತಿದ್ದಾರೆ. ಅದು ಮೀಟಿಂಗ್​ನಲ್ಲಿ ಮುಳುಗಿದವರಿಗೆ ಅರಿವಿಲ್ಲ. ಆದರೆ ಆಹ್ವಾನವಿಲ್ಲದೇ ಇಲ್ಲಿಗೆ ಬಂದವರು ಮಾತ್ರ ನಿರಾತಂಕವಾಗಿ ಪ್ಲೇನ್ ಕೇಕ್​ ಮೆಲ್ಲುತ್ತ ಕುಳಿತಿದ್ದಾರೆ. ಇದು ಕ್ಯಾಮೆರಾ ಕಣ್ಣಿಗೆ ಬಿದ್ದು ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಅಪ್​ಲೋಡ್ ಆಗುತ್ತಿದ್ದಂತೆ  ವೈರಲ್ ಆಗಿದೆ.

ಡಾ. ಆರಿಫ್ ಖ್ವಾಜಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ಬಯೋ ಹೇಳುವಂತೆ ಆರೀಫ್​ ಖ್ವಾಜಾ ಜಮ್ಮು-ಕಾಶ್ಮೀರದಲ್ಲಿರುವ ದಂತ ಶಸ್ತ್ರಚಿಕಿತ್ಸಕರು. 26 ಸೆಕೆಂಡುಗಳ ಈ ಕ್ಲಿಪ್​ನಲ್ಲಿ ಇಲ್ಲಿರುವ ಜನ ಗಂಭೀರವಾದ ಚರ್ಚೆಯಲ್ಲಿ ತೊಡಗಿದ್ದಾರೆ. ಆದರೆ ಮೂಷಿಕರಾಯರು ಮಾತ್ರ ಕೇಕ್​ನಲ್ಲಿ ಮುಳುಗಿದ್ದಾರೆ. 50,000 ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ಧಾರೆ.

ಇಲಿಯನ್ನು ತಿನ್ನಲು ಆಹ್ವಾನಿಸಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಇದು ಪಾಕಿಸ್ತಾನದಿಂದ ಬಂದ ಇಲಿ ಆಗಿರಬೇಕು ಎಂದಿದ್ದಾರೆ ಒಬ್ಬರು. ಇಲಿಯೂ ಸಮಾನವಾಗಿ ಈ ಮೀಟಿಂಗ್​​ನಲ್ಲಿ ಭಾಗಿಯಾಗಿದೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಮೀಟಿಂಗ್​ಗೆ ಬಂದ ಇಲಿ ಈಟಿಂಗೂ ಮಾಡಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಬಿಗ್​ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಸಾಂಬಾಂದಲ್ಲಿ ಗಡಿಯೊಳಗೆ ಉಗ್ರರ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ BSF
ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
ಬಂಕರ್​ಗಳಲ್ಲಿ ಅವಿತುಕೊಂಡಿರುವ ಪಾಕ್ ಪ್ರಧಾನಿ ಶರೀಫ್ ಮತ್ತು ಸೇನಾ ಮುಖ್ಯಸ್ಥ
ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ
ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ
ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್
ಸೇನೆಯೊಂದಿಗೆ ನಾವಿದ್ದೇವೆ ಅಂತ ಸೂಚಿಸಲು ತಿರಂಗ ಯಾತ್ರೆ: ದಿನೇಶ್ ಗುಂಡೂರಾವ್
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ