ದೀರ್ಘಾಯುಷಿಗಳಾಗಬೇಕೆಂದರೆ ಚಿಂತೆಯನ್ನು ಬಿಡಿ ಎನ್ನುತ್ತಿದ್ದಾರೆ 92 ವರ್ಷದ ಈ ವಯೋವೃದ್ಧರು

Life Lessons : ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ. ಎಂದೂ ಹಣದ ಬೆನ್ನು ಹತ್ತಬೇಡಿ. ದಕ್ಕಬೇಕಾಗಿರುವುದು ನಿಮಗೆ ದಕ್ಕಿಯೇ ದಕ್ಕುತ್ತದೆ. ಉಳಿದ ಯಾವ ಬೆಳವಣಿಗೆಯೂ ನಿಮಗೆ ಸಂಬಂಧಿಸಿದ್ದಲ್ಲ, ಅದು ನಿಮ್ಮನ್ನು ಉದ್ದೇಶಿಸಿರುವುದಿಲ್ಲ.

ದೀರ್ಘಾಯುಷಿಗಳಾಗಬೇಕೆಂದರೆ ಚಿಂತೆಯನ್ನು ಬಿಡಿ ಎನ್ನುತ್ತಿದ್ದಾರೆ 92 ವರ್ಷದ ಈ ವಯೋವೃದ್ಧರು
92 ವರ್ಷದ ಕೇಕಿ ಪಾರ್ಸಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 07, 2022 | 12:48 PM

Viral : ಅನೇಕರು ಅನೇಕ ರೀತಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಆ ಕಟ್ಟಿಕೊಳ್ಳುವಿಕೆಯಲ್ಲಿ ಸ್ಪಷ್ಟತೆ ಬಹಳ ಮುಖ್ಯ. ಯಾವುದಕ್ಕೆ ಆದ್ಯತೆ ಕೊಡಬೇಕು, ಕೊಡಬಾರದು ಎನ್ನುವುದರ ಬಗ್ಗೆ ಅರಿವಿದ್ದಾಗ ಅಂಥವರ ಬದುಕು ಅತ್ಯಂತ ನೆಮ್ಮದಿಯಿಂದ ಕೂಡಿರುತ್ತದೆ ಮತ್ತು ಇತರರಿಗೆ ಸ್ಫೂರ್ತಿದಾಯಕವೂ ಅಗಿರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್​ ಗಮನಿಸಿ. 92 ವರ್ಷದ ಈ  ವೃದ್ಧರೊಂದಿಗೆ ಮಾತನಾಡಿದ ಅನುಭವವನ್ನು ನೆಟ್ಟಿಗರೊಬ್ಬರು ಲಿಂಕ್ಡ್​ಇನ್​ನಲ್ಲಿ ಹಂಚಿಕೊಂಡಿದ್ದಾರೆ.

ಎ ಮಿಲಿಯನ್ ಡ್ರೀಮ್ಸ್ ಅಕಾಡೆಮಿಯ ಸಂಸ್ಥಾಪಕ ಸಂಜಯ ಮುದ್ನಾನಿ ಅವರು ಸ್ಟಾರ್​ಬಕ್ಸ್​ಗೆ ಹೋದಾಗ ಕೇಕಿ ಪಾರ್ಸಿ ಎಂಬ ವಯೋವೃದ್ಧರು ಇವರ ಮಾತಿಗೆ ಸಿಗುತ್ತಾರೆ. ಮುಂದಿನದನ್ನು ಅವರ ಮಾತುಗಳಲ್ಲೇ ಓದಿಕೊಳ್ಳಿ.

ನಾನು ಸ್ಟಾರ್​ಬಕ್ಸ್​​ಗೆ ಹೋದಾಗ 92 ವರ್ಷದ ಕೇಕಿ ಪಾರ್ಸಿ ಎಂಬ ವಯೋವೃದ್ಧರನ್ನು ಭೇಟಿಯಾದೆ. ಅವರು ಸ್ಟಾರ್​ಬಕ್ಸ್​ನ ಓಡಾಟಕ್ಕೆ ನಿತ್ಯವೂ ಒಬ್ಬರೇ ಆಟೋದಲ್ಲಿ ಪ್ರಯಾಣಿಸುತ್ತಾರೆ. ಕೋಲು ಹಿಡಿದುಕೊಂಡು ಬರುವ ಅವರು ಕಾಫಿ ಕುಡಿದು ಮರಳುತ್ತಾರೆ. ಒಂದು ದಿನ ಅವರು ಕಾಫಿಗೆ ಆರ್ಡರ್ ಮಾಡಿ ಕುಳಿತಾಗ ನಾನು ಅವರನ್ನು ಮಾತನಾಡಿಸಿದೆ. ಕಥೆಗಾರನಾದ ನಾನು ಅವರ ಕಥೆಯನ್ನು ಕೇಳುವಲ್ಲಿ ಆಸಕ್ತನಾದೆ. ಈ ಪಾರ್ಸಿ ಮನುಷ್ಯನ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಉತ್ಸಾಹಕ್ಕೆ ಖಂಡಿತ ಇಲ್ಲ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇದನ್ನೂ ಓದಿ : ಅಸಾಮಾನ್ಯಳು! ಸಿಂಹಗಳೊಂದಿಗೆ ನಡೆಯುತ್ತಿರುವ ಯುವತಿಯ ವಿಡಿಯೋ ವೈರಲ್

‘ಯಾವಾಗಲೂ ನಾವು ಮಾಡುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಆಗ ನಮಗೆ ದಕ್ಕಬೇಕಾಗಿರುವುದು ದಕ್ಕಿಯೇ ದಕ್ಕುತ್ತದೆ. ಎಂದೂ ಹಣದ ಬೆನ್ನಟ್ಟಬೇಡಿ. ಇನ್ನು ಉಳಿದ ಯಾವುದೇ ಬೆಳವಣಿಗೆಯೂ ನಮಗೆ ಸಂಬಂಧಿಸಿದ್ದಲ್ಲ ಮತ್ತು ನಮ್ಮನ್ನು ಅದು ಉದ್ದೇಶಿಸಿರುವುದಿಲ್ಲ, ಆ ಬಗ್ಗೆ ಚಿಂತಿಸಬಾರದು. ನಾನು ಯಾರನ್ನೂ ಕೆಟ್ಟದಾಗಿ ನಡೆಸಿಕೊಂಡಿಲ್ಲ, ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ನನ್ನನ್ನು ಯಾರು ಎಷ್ಟೇ ಕೆಟ್ಟದಾಗಿ ನಡೆಸಿಕೊಂಡರೂ ನಾನು ಅವರನ್ನು ದ್ವೇಷಿಸಿಲ್ಲ. ಇನ್ನು ದೀರ್ಘಾಯುಷಿಗಳಾಗಿ ಬದುಕಬೇಕೆಂದರೆ ನಿಮ್ಮ ಚಿಂತೆಗಳನ್ನು ಬಿಡಿ’ ಎಂದರು.

ಕೇಕಿ ಅವರಿಗೆ ಯಾವುದೇ ರೀತಿಯ ಪಶ್ಚಾತ್ತಾಪವಿಲ್ಲ. ಅವರು ಪ್ರಪಂಚದ ಉದ್ದಗಲಕ್ಕೂ ಪ್ರಯಾಣಿಸಿದ್ದಾರೆ. ಪ್ರಾಮಾಣಿಕವಾಗಿ ಬದುಕನ್ನು ಸಾಗಿಸುತ್ತ ಬಂದಿದ್ದಾರೆ. ಈ ವಯಸ್ಸಿನಲ್ಲಿಯೂ ಹೀಗವರು ಒಬ್ಬರೇ ಹೊರಬಂದು ಕಾಫಿ ಕುಡಿಯುತ್ತಾರೆಂದರೆ ಅವರು ಬದುಕಿನ ಸಣ್ಣಸಣ್ಣ ಖುಷಿಗಳನ್ನು ಅನುಭವಿಸುವಲ್ಲಿ ಇನ್ನೂ ಆಸಕ್ತಿ ಉಳಿಸಿಕೊಂಡಿದ್ದಾರೆ ಎಂದರ್ಥ. ಸಂತೋಷದಿಂದ ಬದುಕನ್ನು ಕಳೆಯುತ್ತಿರುವ ಇವರು ಅನೇಕರಿಗೆ ಸ್ಫೂರ್ತಿದಾಯಕ.

ಇದನ್ನೂ ಓದಿ : ಹುಲಿಮರಿಯೊಂದಿಗೆ ಆಟವಾಡುತ್ತಿರುವ ಕೋತಿಮರಿ; ನೆಟ್ಟಿಗರ ಹೃದಯ ಬೆಚ್ಚಗೆ

ಈ ತನಕ ಈ ಪೋಸ್ಟ್​ಗೆ ಸುಮಾರು 20,000 ಜನರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು ‘ಜೀವನದ ಪ್ರಯಾಣದಲ್ಲಿ ಹೀಗೆ ಕೆಲ ರತ್ನಗಳನ್ನು ಸಂಧಿಸುತ್ತೀರಿ. ಈ ಭೇಟಿಗಳೇ ಜೀವನವನ್ನು ನೋಡುವ ವಿಧಾನವನ್ನು ಬದಲಾಯಿಸುತ್ತವೆ’ ಎಂದಿದ್ದಾರೆ ಒಬ್ಬರು.  ‘ಅದ್ಭುತ! ಕೇಕಿ ಅವರ ಸಲಹೆಗೆ ಧನ್ಯವಾದಗಳು ಮತ್ತು ಅವರನ್ನು ಪರಿಚಯಿಸಿದ ನಿಮಗೂ’ ಎಂದಿದ್ದಾರೆ ಮತ್ತೊಬ್ಬರು. ಇವರೇ ನಿಜವಾದ ಮನುಷ್ಯರು ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:30 pm, Wed, 7 December 22