AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ; ಸಾಂಪ್ರದಾಯಿಕ ಶೈಲಿಯಲ್ಲಿ ನೂಡಲ್ಸ್​ ಹೇಗೆ ತಯಾರಿಸುತ್ತಾರೆ ನೋಡಿ ವಿಡಿಯೋ

Chinese Noodles : ನೂಡಲ್ಸ್​ ಚೀನಾದಿಂದ ಇಟಲಿಗೆ ಬಂದಿತೋ, ಇಟಲಿಯಿಂದ ಚೀನಾಕ್ಕೆ ಬಂದಿತೋ? ಹೀಗೊಂದು ಚರ್ಚೆಯಲ್ಲಿ ನೆಟ್ಟಿಗರಿದ್ದಾರೆ. ಈ ವಿಡಿಯೋ ನೋಡುತ್ತ ನೀವು ಏನು ಯೋಚಿಸುತ್ತೀರಿ ಎನ್ನುವುದರ ಬಗ್ಗೆ ನಮಗೆ ಕುತೂಹಲ.

ಚೀನಾ; ಸಾಂಪ್ರದಾಯಿಕ ಶೈಲಿಯಲ್ಲಿ ನೂಡಲ್ಸ್​ ಹೇಗೆ ತಯಾರಿಸುತ್ತಾರೆ ನೋಡಿ ವಿಡಿಯೋ
ಚೀನಾದ ಸಾಂಪ್ರದಾಯಿಕ ನೂಡಲ್ಸ್​ ತಯಾರಿಕೆ
TV9 Web
| Updated By: ಶ್ರೀದೇವಿ ಕಳಸದ|

Updated on:Dec 07, 2022 | 3:02 PM

Share

Viral Video : ನೂಡಲ್ಸ್​! ಯಾರಿಗೆ ತಾನೆ ಇಷ್ಟವಿಲ್ಲ. ಪುಟ್ಟಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಬಾಯಲ್ಲಿ ನೀರೂರುತ್ತದೆ. ನೂಡಲ್ಸ್​ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಚೀನಾದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನೂಡಲ್ಸ್​ ಹೇಗೆ ತಯಾರಿಸಲಾಗುತ್ತದೆ ಎಂಬ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ನೋಡುತ್ತಿದ್ದಂತೆ ನೀವೀಗ ಅಡುಗೆಮನೆಗೆ ಹೋಗಿ ನೂಡಲ್ಸ್​ ಮಾಡಿಕೊಂಡು ತಿಂದೇಬಿಡುವಿರೋ ಏನೋ.

‘ಈ ನೂಡಲ್ಸ್​ ಅನ್ನು ಮೊದಲು ಯಾರು ಕಂಡುಹಿಡಿದರು? ಇಟಾಲಿಯನ್ನರು ಕಂಡುಹಿಡಿದು ನಂತರ ಅದು ಚೀನಾಕ್ಕೆ ಬಂದಿತೆ? ಅಥವಾ ಚೀನಾದಿಂದ ಇಟಲಿಗೆ ಬಂದಿತೆ? ಎಂದು ಇತಿಹಾಸಕಾರರು ಈ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲಿ ನೋಡಿ ಚೀನಾದ ಶಾಂಕ್ಸಿಯ ಟ್ಯಾಂಗ್ ರಾಜವಂಶದ ಆಳ್ವಿಕೆಯಲ್ಲಿ ಬೆಳಕಿಗೆ ಬಂದಿರುವ ಸಾಂಪ್ರದಾಯಿಕ ನೂಡಲ್ಸ್ ತಯಾರಿಕೆ ಇಲ್ಲಿದೆ’ ಎಂಬ ಒಕ್ಕಣೆ ಈ ವಿಡಿಯೋಗಿದೆ.

ಹಿಟ್ಟನ್ನು ಸಣ್ಣ ಎಳೆಗಳಾಗಿ ಪರಿವರ್ತಿಸುವುದು, ಎಳೆಗಳನ್ನು ಹತ್ತು ಹನ್ನೆರಡು ಅಡಿಗಳಷ್ಟು ಉದ್ದ ಎಳೆಗಳನ್ನಾಗಿಸುವುದು, ಒಣಗಿಸುವುದು ಮತ್ತು ಸಣ್ಣಸಣ್ಣ ತುಂಡುಗಳನ್ನಾಗಿಸುವುದು ಬಹಳ ಮಜವಾಗಿದೆಯಲ್ಲ ಇದೆಲ್ಲ ನೋಡಲು? ಈ ವಿಡಿಯೋ ಅನ್ನು ಈತನಕ 20,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 300ಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ನೂಡಲ್ಸ್​ನ ಮೂಲದ ಬಗ್ಗೆ ಚರ್ಚಿಸಿದ್ದಾರೆ.

ಇದನ್ನೂ ನೋಡಿ : ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ

ಟ್ಯಾಂಗ್​ ರಾಜವಂಶಸ್ಥರು ಮಧ್ಯ ಏಷ್ಯಾದೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಆಹಾರ ಉತ್ಪಾದನೆಯ ಮೇಲೆ ಇದು ಪರಸ್ಪರ ಪ್ರಭಾವ ಬೀರಿದೆ ಎಂದಿದ್ದಾರೆ ಒಬ್ಬರು. ಇಟಲಿಯ ಮಾರ್ಕೋ ಪೋಲೋ ಚೀನಾದಲ್ಲಿ ಸೃಷ್ಟಿಯಾದ ಈ ನೂಡಲ್ಸ್​ ಅನ್ನು ಇಟಲಿಗೆ ಪರಿಚಯಿಸಿದರು ಎಂದಿದ್ದಾರೆ ಮತ್ತೊಬ್ಬರು. ಚೀನಾದ ಪ್ರತೀ ಪ್ರಾಂತ್ಯವೂ ಬೇರೆಬೇರೆ ರೀತಿಯಲ್ಲಿ ಸಾಂಪ್ರದಾಯಿಕ ನೂಡಲ್ಸ್​ ತಯಾರಿಕೆ ವಿಧಾನವನ್ನು ಅಳವಡಿಸಿಕೊಂಡಿದೆ. ಯಂತ್ರದ ಮೂಲಕ ತಯಾರಾಗುವ ನೂಡಲ್ಸ್​ಗಿಂತ ಇವು ರುಚಿಯಾಗಿರುತ್ತವೆ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 2:55 pm, Wed, 7 December 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?