ಗೋಧೂಳಿಯ ಮಾಂತ್ರಿಕತೆ; ಅಕ್ಕನ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ

Viral Video : ಈ ಪಕ್ಷಿ ಈ ಹುಡುಗಿಯ ಮನೆ ಕಿಟಕಿಗೆ ಬಂದು ಅಪ್ಪಳಿಸಿದೆ. ಅದನ್ನು ಎತ್ತಿಕೊಂಡು ಸಮಾಧಾನಿಸಿ ಹಾಡು ಹೇಳಲು ಶುರುಮಾಡಿದ್ದಾಳೆ. ಅದು ಚಿತ್ತಗೊಟ್ಟು ಆಲಿಸುತ್ತಿದೆ. ಇದು ಡಿಸ್ನಿ ಸಿನೆಮಾದ ದೃಶ್ಯದಂತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

ಗೋಧೂಳಿಯ ಮಾಂತ್ರಿಕತೆ; ಅಕ್ಕನ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಮುದ್ದಾಡುತ್ತ ಹಾಡುತ್ತಿರುವ ಈ ಬಾಲೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 07, 2022 | 4:26 PM

Viral Video : ಪಕ್ಷಿಗಳು ಬಹಳ ಸೂಕ್ಷ್ಮ ಮತ್ತು ಅಷ್ಟೇ ಎಚ್ಚರ. ಮುಟ್ಟಲು ಹೋಗುವುದು ದೂರ ಉಳಿಯಿತು, ಒಂದು ಹೆಜ್ಜೆ ಚಲಿಸುವ ಹೊತ್ತಿಗೆ ಪಟ್ಟನೆ ಹಾರಿಹೋಗಿಬಿಡುತ್ತವೆ. ಆದರೆ ಸಾಕಿದ ಪಕ್ಷಿಯಾದರೆ ಸದಾ ನಿಮ್ಮ ಬೆನ್ನಮೇಲೋ, ತಲೆಯ ಮೇಲೋ, ಮುಂಗೈ, ಅಂಗೈಯ್ಯೊಳಗೋ ಕುಳಿತು ನಿಮ್ಮೊಂದಿಗೆ ಸಂವಹನ ನಡೆಸುತ್ತವೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಈ ಪಕ್ಷಿ ಸಾಕಿದ್ದಲ್ಲ. ತಾನಾಗಿಯೇ ಬಂದು ಹೀಗೆ ಈ ಹುಡುಗಿಯ ಕೈಯ್ಯೊಳಗೆ ಕುಳಿತಿದೆ. ಚೆಂದ ಹಾಡುವ ಆಕೆಯನ್ನೇ ನೋಡುತ್ತ ಹಾಡನ್ನು ಆಲಿಸುತ್ತ ಮೈಮರೆತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Gable Swanlund (@gableswanlund)

ಗೇಬಲ್​ ಸ್ವಾನ್​ಲುಂಡ್​ ಎಂಬ ಇನ್​ಸ್ಟಾಗ್ರಾಂ ಪುಟವನ್ನು ಈಕೆಯ ತಾಯಿ ನಿರ್ವಹಿಸುತ್ತಾಳೆ. ಈ ಪುಟದಲ್ಲಿಯೇ ಈ ವಿಡಿಯೋ ಅಪ್​ಲೋಡ್ ಮಾಡಲಾಗಿದೆ. ಈ ಹಕ್ಕಿ ಆಕೆ ಹಾಡುವುದನ್ನು ಎಂಥ ಚಿತ್ತ ಕೊಟ್ಟು ಕೇಳಿಸಿಕೊಳ್ಳುತ್ತದೆಯಲ್ಲ? ನವೆಂಬರ್ 11ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 6.3 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಬಹಳ ಮುದ್ದಾಗಿದೆ ಈ ಹುಡುಗಿ ಹಾಡು ಮತ್ತು ಹಕ್ಕಿ ಎನ್ನುತ್ತಿದ್ದಾರೆ ನೆಟ್ಟಿಗರು. ನಿಮ್ಮ ಧ್ವನಿಯೇ ಅದ್ಭುತವಾಗಿದೆ ಜೊತೆಗೆ ಆ ಪಕ್ಷಿಯೂ. ಏನೋ ಕಥೆ ಹೇಳುತ್ತಿದ್ದೀರೇನೋ ಎಂಬಂತೆ ನೋಡುತ್ತಿದೆ ಎಂದಿದ್ದಾರೆ ಒಬ್ಬರು. ಡಿಸ್ನಿ ಸಿನೆಮಾದ ದೃಶ್ಯದಂತೆ ಕಾಣುತ್ತಿದೆ ಎಂದಿದ್ದಾರೆ ಹಲವರು. ಈ ಹುಡುಗಿ ದೇವತೆಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ