ಗುಜರಾತ್ನ ದೇವಾಲಯದ ಆನೆ ವಿಗ್ರಹದಡಿಯಲ್ಲಿ ಸಿಲುಕಿದ ಭಕ್ತ; ಇಷ್ಟೊಂದು ಭಕ್ತಿ ಒಳ್ಳೇದಲ್ಲ ಎಂದ ನೆಟ್ಟಿಗರು
Viral Video ವಿಗ್ರಹದಡಿಯಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ತುಂಬಾ ಪ್ರಯತ್ನಿಸಿರುವುದನ್ನು ನೋಡಿದರೆ ಅವರು ದೇವಾಲಯದಲ್ಲಿ ಆಚರಣೆಯನ್ನು ಪಾಲಿಸುತ್ತಿದ್ದರು ಎಂದು ತೋರುತ್ತದೆ.
ಭಾರತ ವೈವಿಧ್ಯಮಯ ಧರ್ಮಗಳ ನಾಡು. ದೇವರ ಆಶೀರ್ವಾದ ಪಡೆಯಲು ಜನರು ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಕೆಲವೊಮ್ಮೆ, ಜನರು ದೇವರನ್ನು ಮೆಚ್ಚಿಸುವುದಕ್ಕಾಗಿ ವಿಭಿನ್ನವಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಕ್ತನೊಬ್ಬ ದೇವಸ್ಥಾನದಲ್ಲಿರುವ ಆನೆಯ ಪ್ರತಿಮೆಯ (elephant statue) ಅಡಿಯಲ್ಲಿ ನುಸುಳಿ, ಹೊರಬರಲು ಒದ್ದಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.ಅಂದಹಾಗೆ ಈ ವಿಡಿಯೊ ಗುಜರಾತ್ನದ್ದು(Gujarat). ವ್ಯಕ್ತಿ ಈ ವಿಗ್ರಹದಡಿಯಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆಯೇ ಎಂಬುದು ವಿಡಿಯೊದಲ್ಲಿ ಸ್ಪಷ್ಟವಾಗಿಲ್ಲ. ವಿಗ್ರಹದಡಿಯಲ್ಲಿ ಸಿಲುಕಿಕೊಂಡು ಅದರಿಂದ ಹೊರಬರಲು ತುಂಬಾ ಪ್ರಯತ್ನಿಸಿರುವುದನ್ನು ನೋಡಿದರೆ ಅವರು ದೇವಾಲಯದಲ್ಲಿ ಆಚರಣೆಯನ್ನು ಪಾಲಿಸುತ್ತಿದ್ದರು ಎಂದು ತೋರುತ್ತದೆ. ಟ್ವಿಟ್ಟರ್ ಬಳಕೆದಾರ ನಿತಿನ್ ಹಂಚಿಕೊಂಡ ವಿಡಿಯೊದಲ್ಲಿ, ವಿಗ್ರಹದೆಡೆಯಿಂದ ಹೊರಬರಲು ಮನುಷ್ಯ ತನ್ನ ಕೈ ಮತ್ತು ದೇಹವನ್ನು ಕುಗ್ಗಿಸಿ ಒದ್ದಾಡುತ್ತಿರುವುದು ಕಾಣಿಸುತ್ತದೆ. ದೇವಾಲಯದ ಅರ್ಚಕರು ಕೂಡಾ ವ್ಯಕ್ತಿಗೆ ಸಹಾಯ ಮಾಡುತ್ತಿರುವುದು ಕಾಣಿತ್ತದೆ. ಅಲ್ಲಿ ನೆರಿದಿದ್ದ ಜನರುರು ಕೂಡಾ ಭಕ್ತನಿಗೆ ಸಲಹೆಗಳನ್ನು ನೀಡುತ್ತಿರುವುದು ಕಾಣಬಹುದು.
Any kind of excessive bhakti is injurious to health ? pic.twitter.com/mqQ7IQwcij
ಇದನ್ನೂ ಓದಿ— ηᎥ†Ꭵղ (@nkk_123) December 4, 2022
ಟ್ವಿಟರ್ನಲ್ಲಿ ಈ ವಿಡಿಯೊವನ್ನು 1300ಕ್ಕಿಂತಲೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 2019 ರಲ್ಲಿ ಅಂತಹುದೇ ಒಂದು ಘಟನೆ ಸಂಭವಿಸಿದ್ದು, ಆಚರಣೆಯ ಭಾಗವಾಗಿ ಸಣ್ಣ ಆನೆಯ ಪ್ರತಿಮೆಯ ಕಾಲುಗಳ ನಡುವೆ ತೆವಳಿದ ಮಹಿಳಾ ಭಕ್ತೆಯೊಬ್ಬರು ಸಿಲುಕಿಕೊಂಡು ಸ್ವಲ್ಪ ಸಮಯದ ನಂತರ ಹೊರಬಂದಿದ್ದರು.