ಪಶ್ಚಿಮ ಬಂಗಾಳದಲ್ಲಿ ಅವಳಿ ಸೋದರಿಯರೊಂದಿಗೆ ಅವಳಿ ಸೋದರರ ಮದುವೆ

West Bengal : ‘ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದೆವು, ಒಂದೇ ಕಾಲೇಜಿನಲ್ಲಿ ಪದವಿ ಮುಗಿಸಿದೆವು. ಅವಳಿ ಸಹೋದರರನ್ನೇ ಮದುವೆಯಾಗಬೇಕು ಎಂಬ ಆಸೆ ಹೊಂದಿದ್ದೆವು. ಅದೀಗ ಸಾಧ್ಯವಾಗಿದೆ.’

ಪಶ್ಚಿಮ ಬಂಗಾಳದಲ್ಲಿ ಅವಳಿ ಸೋದರಿಯರೊಂದಿಗೆ ಅವಳಿ ಸೋದರರ ಮದುವೆ
ಅವಳಿ ಸೋದರಿಯರು ಅವಳಿ ಸೋದರರನ್ನು ಮದುವೆಯಾದ ಕ್ಷಣ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 08, 2022 | 11:03 AM

Viral : ಈ ಇಬ್ಬರೂ ಸಹೋದರಿಯರು ಒಂದೇ ಶಾಲೆಯಲ್ಲಿ ಒಟ್ಟಿಗೇ ಓದಿದರು. ಮುಂದೆ ಒಂದೇ ಕಾಲೇಜಿನಲ್ಲಿ ಪದವಿಯನ್ನೂ ಪಡೆದರು. ಅವಳಿಗಳನ್ನೇ ಮದುವೆಯಾಗಬೇಕು ಎಂದುಕೊಂಡಿದ್ದ ಇವರ ಆಸೆ ಈಗ ನೆರವೇರಿದೆ. ಪಶ್ಚಿಮ ಬಂಗಾಳದ ಪೂರ್ವ ವರ್ಧಮಾನ್​ನ ಕುರ್ಮುನ್​ ಗ್ರಾಮದಲ್ಲಿ ಅವಳಿ ಸಹೋದರಿಯರಾದ ಅರ್ಪಿತಾ ಮತ್ತು ಪರಮಿತಾ ಎಂಬ ಅವಳಿ ಸಹೋದರಿಯರು ಲವ್ ಮತ್ತು ಕುಶ್​ ಎಂಬ ಅವಳಿ ಸಹೋದರರನ್ನು ಮಂಗಳವಾರದಂದು ಮದುವೆಯಾಗಿದ್ದಾರೆ.

ಅರ್ಪಿತಾ ಪರಮಿತಾರ ತಂದೆ ಗೌರಚಂದ್ರ ಸಂತ್ರಾ. ಸ್ಥಳೀಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೆಣ್ಣುಮಕ್ಕಳ ಆಸೆ ತಿಳಿದ ಮೇಲೆ ಅವಳಿ ಸೋದರ ಹುಡುಕಾಟದಲ್ಲಿ ತೊಡಗಿದರು. ಕುರ್ಮುನ್ ಗ್ರಾಮದ ಲವ್ ಪಕ್ರೆ ಮತ್ತು ಕುಶ್​ ಪಕ್ರೆ ಅವರ ಪೋಷಕರು ಅವಳಿ ಸಹೋದರಿಯರನ್ನೇ ಮದುವೆಗೆ ಹುಡುಕುತ್ತಿದ್ದರು. ಪರಸ್ಪರರ ಆಶಯ ಒಂದೇ ಆಗಿದ್ದರಿಂದ ಮದುವೆಯ ನಿರ್ಧಾರ ಮಾಡಿದರು.

ಇದನ್ನೂ ಓದಿ : ಅವಳಿ ಸಹೋದರಿಯರನ್ನು ಮದುವೆಯಾದ ವರ; ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಲವ್​ ಮತ್ತು ಕುಶ್​ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ಮದುವೆಯ ಸಮಯದಲ್ಲಿ ಅವಳಿ ಸೋದರರು ಒಂದೇ ಬಗೆಯ ಬಟ್ಟೆ ಧರಿಸಿದ್ದರೆ, ಅವಳಿ ಸಹೋದರಿಯರು ಒಂದೇ ಬಗೆಯ ಸೀರೆಯುಟ್ಟು ಒಂದೇ ಥರ ಅಲಂಕರಿಸಿಕೊಂಡಿದ್ದರು.

ಅಂತೂ ಬದುಕಿನಲ್ಲಿ ಅಂದುಕೊಂಡಂತೆ ಎಲ್ಲ ನೆರವೇರುವುದು ಅಷ್ಟು ಸುಲಭವಲ್ಲವಲ್ಲ? ಈ ಅವಳಿಗಳಿಗೆ ಈ ತನಕ ಅಂದುಕೊಂಡಂತೆಯೇ ಬದುಕು ದಾರಿ ತೋರಿದೆ. ಇನ್ನು ಮುಂದೆಯೂ ಹೀಗೇ ಸಾಗಲಿ.

ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ