ಹುಂಜಕ್ಕೆ ಲಿಫ್ಟ್​ ಕೊಟ್ಟ ಪುಟ್ಟಣ್ಣನ ವಿಡಿಯೋ ವೈರಲ್

Viral Video : ಲಿಫ್ಟ್ ಕೊಡುತ್ತಿರುವ ಡ್ರೈವರ್​ಗಿಂತ ಪ್ರಯಾಣಿಕನೇ ಹೆಚ್ಚು ವೃತ್ತಿಪರ ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಬಾಲ್ಯ ಎನ್ನುವುದು ಪರಿಶುದ್ಧ ಎನ್ನುವುದು ಇದಕ್ಕೇ ಎನ್ನುತ್ತಿದ್ದಾರೆ ಇನ್ನೊಬ್ಬರು. ನೀವೇನಂತೀರಿ?

ಹುಂಜಕ್ಕೆ ಲಿಫ್ಟ್​ ಕೊಟ್ಟ ಪುಟ್ಟಣ್ಣನ ವಿಡಿಯೋ ವೈರಲ್
ಲಿಫ್ಟ್​ ಕೊಡ್ತೀನಿ ಬಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 07, 2022 | 11:25 AM

Viral Video : ಅಪ್ಪ ಅಮ್ಮ ಮಗುವಿಗೆ ಎರೆದ ಪ್ರೀತಿ, ಕಾಳಜಿಯನ್ನೇ ತನ್ನ ಜೊತೆಗಿರುವವರಿಗೂ ಧಾರೆ ಎರೆಯುತ್ತದೆ ಮಗು. ಇಂಥವರಿಗೆ ಇಂಥದಕ್ಕೇ ಎಂದು ಗೆರೆ ಕೊರೆದುಕೊಂಡು ಬದುಕುವುದು ಮಗುವಿಗೆ ಗೊತ್ತಿಲ್ಲ. ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಎಲ್ಲರೂ ಒಂದೇ ಮಗುವಿನ ಚಿತ್ತದಲ್ಲಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಸೈಕಲ್​ ತೆಗೆದುಕೊಂಡು ರಸ್ತೆಗಿಳಿದಿದೆ ಈ ಮಗು. ಅಲ್ಲಿ ಬಾತು ಮತ್ತು ಹುಂಜ ಕಂಡಿವೆ. ಆಟ ಮುಗಿಸಿ ವಾಪಸ್ ಹೋಗುವಾಗ ಹುಂಜಕ್ಕೆ ಡ್ರಾಪ್​ ಕೊಡಬೇಕು ಎನ್ನಿಸಿದೆ ಮಗುವಿಗೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Heitor Borges (@bebecampeiro)

ಈ ವಿಡಿಯೋ ಅನ್ನು 1.1 ಮಿಲಿಯನ್​ ಜನರು ನೋಡಿದ್ದಾರೆ. 11 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಹೀಟರ್ ಬೋರ್ಜಸ್ ಎನ್ನುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮನೆಯ ಬಳಿ ಈ ಹುಂಜ ಮತ್ತು ಬಾತುಕೋಳಿಯೊಂದಿಗೆ ಆಟವಾಡಿದೆ ಈ ಮಗು. ವಾಪಸ್​ ಹಿಂದಿರುಗುವಾಗ, ನನ್ನ ಸೈಕಲ್​ ಇದ್ದರೂ ನೀ ಯಾಕೆ ನಡೆದುಕೊಂಡು ಬರುವುದು? ಬಾ ನಿನಗೆ ಡ್ರಾಪ್​ ಕೊಡುತ್ತೇನೆ ಎಂದಿದ್ದಾನೆ ಈ ಮುದ್ದಣ್ಣ.

ಇದನ್ನೂ ನೋಡಿ : ಮ್ಯಾನ್​ಹೋಲ್ ಸುತ್ತ ಕಲ್ಲನ್ನಿಟ್ಟು ದಾರಿಹೋಕರನ್ನು ಎಚ್ಚರಿಸಿದ ಈ ಮಕ್ಕಳ ವಿಡಿಯೋ ವೈರಲ್

ಅದೂ ಒಂದೇ ಮಾತಿಗೆ ಪುಟ್ಟ ಗಾಡಿಯನ್ನೇರಿ ಕುಳಿತಿದೆ. ಬೇರೆ ಹುಂಜವಾಗಿದ್ದರೆ ಇಷ್ಟೊತ್ತಿಗೆ ಓಡಿಹೋಗಿಬಿಡುತ್ತಿತ್ತು. ಆದರೆ ಅವ ಎತ್ತಿ ಕೂರಿಸುತ್ತಿದ್ದಂತೆ ಸುಮ್ಮನೇ ಕುಳಿತು ಪ್ರಯಾಣಿಸಿದೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ ವಿಡಿಯೋಗೆ. ಡ್ರೈವರ್​ಗಿಂತ ಪ್ರಯಾಣಿಕನೇ ವೃತ್ತಿಪರ ಇದ್ದಂತಿದೆ ಎಂದಿದ್ದಾರೆ ಒಬ್ಬರು. ಏಕೆಂದರೆ ಆ ಮಣ್ಣಿನ ರಸ್ತೆ ಗಮನಿಸಿ. ಬಾಲ್ಯ ಎನ್ನುವುದು ಯಾವಾಗಲೂ ಪರಿಶುದ್ಧ ಎನ್ನುವುದು ಇಂಥ ಕಾಣರಗಳೀಗಾಗಿಯೇ ಎಂದಿದ್ದಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 11:24 am, Wed, 7 December 22