ಕಾಲುಗಳ ಸ್ವಾಧೀನ ಕಳೆದುಕೊಂಡ ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ

Ahmedabad : ನಿಶ್ಚಿತಾರ್ಥದ ನಂತರ ಅಪಘಾತಕ್ಕೆ ಒಳಗಾಗಿ ದೇಹದ ಕೆಳಭಾಗದ ಸ್ವಾಧೀನ ಕಳೆದುಕೊಳ್ಳುತ್ತಾಳೆ ವಧು. ತನ್ನ ಪೋಷಕರ ವಿರೋಧದ ಮಧ್ಯೆಯೂ ಅವಳನ್ನೇ ಮದುವೆಯಾಗುತ್ತಾನೆ ಅಹಮದಾಬಾದ್​ನ ವರ.

ಕಾಲುಗಳ ಸ್ವಾಧೀನ ಕಳೆದುಕೊಂಡ ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ
ಮದುವೆಯಲ್ಲಿ ದಿವ್ಯಾಂಗವುಳ್ಳ ವಧುವನ್ನು ವರ ಎತ್ತಿಕೊಂಡೇ ಇರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 07, 2022 | 9:39 AM

Viral : ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ಅಪರೂಪದ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮಹಾವೀರ್ ಸಿಂಘ್​ ಮತ್ತು ಪಟಾನ್​ನ ರೀನ್​ಲಾಬಾ ಅವರ ನಿಶ್ಚಿತಾರ್ಥ ನಡೆದಿತ್ತು. ಆದರೆ ರೀನ್​ಲಾಬಾ ಅಪಘಾತಕ್ಕೆ ಒಳಗಾದರು. ಇದರಿಂದ ಅವರ ಕೆಳಭಾಗ ಪಾರ್ಶ್ವವಾಯುವಿಗೆ ತುತ್ತಾಗಿ ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಆಗ ತನ್ನ ಕುಟುಂಬ ಈ ಮದುವೆಯನ್ನು ನಿರಾಕರಿಸಿದರೂ ಮಹಾವೀರ್ ಮಾತ್ರ ರೀನ್​ಲಾಬಾ ಅವರೊಂದಿಗೇ ಮದುವೆಯಾಗಬೇಕೆಂದು ಹಠ ಹಿಡಿದರು. ಇದೀಗ ಅವರ ಮದುವೆ ಯಶಸ್ವಿಯಾಗಿ ನೆರವೇರಿದೆ.

ಇದನ್ನೂ ಓದಿ : ಅವಳಿ ಸಹೋದರಿಯರನ್ನು ಮದುವೆಯಾದ ವರ; ವಿಡಿಯೋ ವೈರಲ್

ಇವರಿಬ್ಬರ ನಿಶ್ಚಿತಾರ್ಥ ಪರಸ್ಪರ ಕುಟುಂಬದ ಒಪ್ಪಿಗೆಯ ಮೇರೆಗೆ ಗುಜರಾತ್​ನ ಪಟಾನ್​ನಲ್ಲಿ ಮೂರು ವರ್ಷಗಳ ಹಿಂದೆ ನಡೆದಿತ್ತು. ನಂತರ ಎರಡೂ ಕುಟುಂಬದವರ ಬಾಂಧವ್ಯವೂ ವೃದ್ಧಿಸಿತು. ಆರು ತಿಂಗಳ ಹಿಂದೆ ಮದುವೆಯ ದಿನಾಂಕವನ್ನು ಗೊತ್ತುಪಡಿಸಲಾಯಿತು. ಆದರೆ, ರೀನ್​ಲಾಬಾ ಸ್ನೇಹಿತರೊಂದಿಗೆ ಆಟವಾಡುತ್ತಿದ್ಧಾಗ ಅಕಸ್ಮಾತ್ ಆಗಿ ಬಿದ್ದರು. ಆಗ ಬೆನ್ನುಹುರಿಗೆ ತೀವ್ರ ಗಾಯವಾಯಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ದೇಹದ ಕೆಳಭಾಗಕ್ಕೆ ಚಿಕಿತ್ಸೆ ಫಲಿಸಲಿಲ್ಲ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಮದುಮಗ ತನ್ನ ಪ್ರೀತಿಯ ನಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದಾಗ

ಮಹಾವೀರ್​ನ ಕುಟುಂಬದವರು ಮದುವೆ ನಿಲ್ಲಿಸುವುದಾಗಿ ಹೇಳಿದಾಗ ರೀನ್​ಲಾಬಾನ ಪೋಷಕರು ಚಿಂತೆಗೀಡಾದರು. ಆದರೆ ಮಹಾವೀರ್​ ತನ್ನ ಹುಟ್ಟುಹಬ್ಬದ ದಿನ ಅಂದರೆ ಅಕ್ಟೋಬರ್​ 31ರಂದು, ತಾನು ಮದುವೆಯಾಗುವುದಾದರೆ ರೀನ್​ಲಾಬಾರನ್ನೇ ಎಂದರು. ನಂತರ ಡಿಸೆಂಬರ್ 1ರಂದು ತನ್ನ ಕುಟುಂಬದವರ ವಿರೋಧದ ಮಧ್ಯೆಯೇ ಅಹಮದಾಬಾದ್​ನಲ್ಲಿ ಮದುವೆಯಾದರು. ಅಂತೂ ರೀನ್​ಲಾಬಾರನ್ನು ಎತ್ತಿಕೊಂಡೇ ಸಪ್ತಪದಿ ತುಳಿದರು ಮಹಾವೀರ್.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 9:38 am, Wed, 7 December 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್