ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ…
Guinness World Record : 8 ವರ್ಷದ ಬಾಲಕನಾಗಿದ್ದಾಗ ಇವರ ಎತ್ತರ 5.11 ಅಡಿ. 1940ರ ಜೂನ್ನಲ್ಲಿ 8 ಅಡಿ 11.1 ಇಂಚು. ಗಿನ್ನೀಸ್ ವರ್ಲ್ಡ್ ರೆಕಾರ್ಡ್ನಲ್ಲಿ ಇವರ ಹೆಸರು ಸೇರ್ಪಡೆಯಾಯಿತು. ನಂತರ 22ನೇ ವಯಸ್ಸಿನಲ್ಲಿ ತೀರಿಕೊಂಡರು.
Viral : ಜಗತ್ತಿನ ಅತೀ ಎತ್ತರದ ಮಹಿಳೆ ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದ ಸುದ್ದಿಯನ್ನು ಓದಿದ್ದೀರಿ. ಹಾಗೆಯೇ ಜಗತ್ತಿನ ಅತೀ ಹಿರಿಯ ವೈದ್ಯರು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಪಟ್ಟಿಯನ್ನು ಸೇರಿರುವುದನ್ನೂ ಓದಿದ್ದೀರಿ. ಇತ್ತೀಚೆಗಷ್ಟೇ ಜಗತ್ತಿನ ಹಿರಿಯ ನಾಯಿಯ ಬಗ್ಗೆ ಕೂಡ ಓದಿದ್ದೀರಿ. ಇದೀಗ ಜಗತ್ತಿನ ಅತೀ ಎತ್ತರದ ವ್ಯಕ್ತಿಯೊಬ್ಬರ ಫೋಟೋಗಳನ್ನು ನೋಡುತ್ತ ಅವರ ಬಗ್ಗೆ ಓದಬಹುದಾಗಿದೆ. ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಈ ವ್ಯಕ್ತಿಯ ಫೋಟೋಗಳನ್ನು ರೀಟ್ವೀಟ್ ಮಾಡಿದೆ.
amazing picture of the tallest man who ever lived https://t.co/gYfRubPf8p
— Guinness World Records (@GWR) December 6, 2022
ಅಮೆರಿಕದ ರಾಬರ್ಟ್ ವಾಡ್ಲೋ (Robert Wadlow) ಎಂಬುವವರು ಜಗತ್ತಿನ ಅತೀ ಎತ್ತರದ ಮನುಷ್ಯ. 1955ರಲ್ಲಿ ಇವರು ಗಿನ್ನೀಸ್ವ ವರ್ಲ್ಡ್ ರೆಕಾರ್ಡ್ನ ಪಟ್ಟಿಗೆ ಸೇರಿದ್ಧಾರೆ. ಎಂಟು ವರ್ಷದ ಬಾಲಕನಾಗಿದ್ದಾಗ ಇವರ ಎತ್ತರ 5.11 ಅಡಿ ಆಗಿತ್ತು. ಅಂದರೆ ಇವರು ಆ ವಯಸ್ಸಿನಲ್ಲಿಯೇ ತಂದೆಯ ಎತ್ತರವನ್ನು ಮೀರಿ ಬೆಳೆದಿದ್ದರು. 1940ರ ಜೂನ್ನಲ್ಲಿ ಇವರ ಎತ್ತರವನ್ನು ಅಳತೆ ಮಾಡಿದಾಗ 8 ಅಡಿ 11.1 ಇಂಚು (2.72 ಮೀ) ಇತ್ತು. ಒಟ್ಟಾರೆಯಾಗಿ ಇವರು ನಿತ್ಯಜೀವನ ಸಾಗಿಸಲು ಕಷ್ಟಪಡಬೇಕಾಗಿತ್ತು. ಹದಿಹರೆಯಕ್ಕೆ ಬಂದಾಗ ಇವರು 1.63 ಮೀ (5 ಅಡಿ 4 ಇಂಚು) ಉದ್ದ ಇರುವವರಿಗೆ ಹೊಲಿಯಲಾದ ಬಟ್ಟೆಗಳನ್ನು ಧರಿಸಬೇಕಾಗುತ್ತಿತ್ತು.
ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ
ಗಿನ್ನೀಸ್ ವರ್ಲ್ಡ್ ರೆಕಾರ್ಡ್ ವೆಬ್ಸೈಟ್ ಪ್ರಕಾರ, ವಾಡ್ಲೋ ಪಿಟ್ಯುಟರಿ ಗ್ರಂಥಿಯ ಹೈಪರ್ ಪ್ಲಾಸ್ಟಿಯಾ ಸಮಸ್ಯೆಗೆ ಈಡಾಗಿದ್ದರು. ಆದ್ದರಿಂದಲೇ ಹಾರ್ಮೋನ್ನಲ್ಲಿ ವ್ಯತ್ಯಾಸವಾಗಿ ಇವರ ದೈಹಿಕ ಬೆಳವಣಿಗೆಯಲ್ಲಿ ಈ ಅಸಹಜತೆ ತೋರಿತು. ನಂತರ ಇವರು ಅನೇಕ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅಲ್ಲದೆ ವಯಸ್ಸಿಗೆ ತಕ್ಕಂತೆ ತನ್ನ ಗೆಳೆಯರೊಂದಿಗೆ ಆಟವಾಡಲು ಇನ್ನಿತರೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಹಳ ಕಷ್ಟಪಡಬೇಕಾಯಿತು. ನಂತರ ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿ 1940ರ ಜುಲೈ 15ರಂದು ಮಿಚಿಗನ್ ಮೆನಿಸ್ಟಿಯಲ್ಲಿರುವ ಹೋಟೆಲ್ನಲ್ಲಿ ನಿಧನರಾದರು. ಆಗ ಇವರಿಗೆ ಕೇವಲ 22ರ ಹರೆಯ.
ಈ ಫೋಟೋ ನೋಡಿದ ನೆಟ್ಟಿಗರು ಅಚ್ಚರಿಯಿಂದ ಚರ್ಚಿಸಲಾರಂಭಿಸಿದ್ದಾರೆ.
ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ