AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾ ರಾ ರಕ್ಕಮ್ಮ; ತನ್ನ ಮದುವೆಯ ದಿನ ವಧು ನರ್ತಿಸಿದ ವಿಡಿಯೋ ವೈರಲ್​

Ra Ra Rakkamma : ಸುದೀಪ್​ ಅಭಿನಯದ ಈ ಚಿತ್ರದಲ್ಲಿರುವ ಹಾಡನ್ನು ಮಂಗ್ಲಿ ಹಾಡಿದ್ದಾರೆ. ಈಗಿಲ್ಲಿ ವಧು ತನ್ನ ಮದುವೆಯ ದಿನ ಮೈಚಳಿ ಬಿಟ್ಟು ಈ ಹಾಡಿಗೆ ಕುಣಿದದ್ದನ್ನು ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಏನಂತೀರಿ?

ರಾ ರಾ ರಕ್ಕಮ್ಮ; ತನ್ನ ಮದುವೆಯ ದಿನ ವಧು ನರ್ತಿಸಿದ ವಿಡಿಯೋ ವೈರಲ್​
ರಾ ರಾ ರಕ್ಕಮ್ಮ ಹಾಡಿಗೆ ನರ್ತಿಸಿದ ವಧು
TV9 Web
| Edited By: |

Updated on:Dec 01, 2022 | 1:07 PM

Share

Viral Video : ಎಳೇಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಈ ಹಾಡು ಜನಪ್ರಿಯವಾಗಿದೆ. ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನೆಮಾದ ಹಾಡು ಇದು. ಲಯಪ್ರಧಾನವಾದ ಈ ಹಾಡನ್ನು ತೆಲುಗು ಗಾಯಕಿ ಮಂಗ್ಲಿ ಹಾಡಿದ್ದಾರೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ತನ್ನ ಮದುವೆಯ ದಿನ ಸ್ನೇಹಿತೆಯರೊಂದಿಗೆ ನರ್ತಿಸಿದ್ದಾರೆ. ವಧು ಹಿಂದೆ ಕುಳಿತು ನೃತ್ಯ ನೋಡುತ್ತಿದ್ಧಾನೆ. ವಧು ಮೈಚಳಿ ಬಿಟ್ಟು ಕುಣಿದ ರೀತಿ ನೆಟ್ಟಿಗರಲ್ಲಿ ಹುರುಪು ತುಂಬಿದೆ.

ಮುಂದೆ ಕುಳಿತು ನೃತ್ಯ ನೋಡುವುದನ್ನು ಬಿಟ್ಟು ಹಿಂದೆ ಏಕೆ ಕುಳಿತನೋ ಈ ವರಮಹಾಶಯ ಎಂದು ಈ ವಿಡಿಯೋ ನೋಡಿದ ಯಾರಿಗೂ ಅನ್ನಿಸುತ್ತದೆ. ಅಲ್ಲವೆ? ಈ ತನಕ ಈ ವಿಡಿಯೋ ಅನ್ನು ಸುಮಾರು 6.24 ಲಕ್ಷ ಜನರು ನೋಡಿದ್ದಾರೆ. ಪ್ರತಿಕ್ರಿಯಿಸದೇ ಇರಲು ಹೇಗೆ ಸಾಧ್ಯ? ಹಾಗಿದೆ ಈ ನೃತ್ಯ!

ಎಂಥ ಅಸಹ್ಯ ಪ್ರದರ್ಶನ ಇದು, ಇಂಥವನ್ನೆಲ್ಲ ಸಹಿಸಿಕೊಳ್ಳುವುದೂ ಕಷ್ಟವೇ ಎಂದಿದ್ದಾರೆ ಇನ್ನೊಬ್ಬರು. ನನ್ನ ಹುಡುಗಿ ಏನಾದರೂ ಹೀಗೆ ಕುಣಿದಿದ್ದರೆ ನಾನಂತೂ ಮಂಟಪದಿಂದಲೇ ಎದ್ದು ಓಡಿಬಿಡುತ್ತಿದ್ದೆ ಎಂದಿದ್ದಾರೆ ಮತ್ತೊಬ್ಬರು. ಮದುವೆಗೆ ಬಂದ ಅತಿಥಿಗಳನ್ನು ಸಂತೋಷಪಡಿಸಲು ನೃತ್ಯಕಲಾವಿದರನ್ನು ಕರೆಸಲಾಗುತ್ತಿತ್ತು. ಆದರೆ ಇದೆಲ್ಲವೂ ಇಂದು ಮಿತಿಮೀರಿ ಅಸಹ್ಯಕರವೆನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ಮದುವೆಗೆ ಅವರು ಟಿಕೆಟ್​ ಇಟ್ಟಿದ್ದರೆ ಖಂಡಿತ ಸಾಕಷ್ಟು ಹಣವನ್ನು ಗಳಿಸಬಹುದಿತ್ತು ಎಂದು ತಮಾಷೆ ಮಾಡಿದ್ದಾರೆ ಒಬ್ಬರು.

ಇದನ್ನೂ ನೋಡಿ : Viral Video : ಚಲಿಸುವ ಕಲ್ಯಾಣ ಮಂಟಪ; ಬಂತೈ ಬಂತೈ ಮನೆಗೇ ಬಂತೈ, ವಧುವರರು ತಯಾರೇ?

ಇದು ಮೂರ್ಖತನದ ಪರಮಾವಧಿ. ಮದುವೆಯ ಮಂಟಪವು ಇಂಥ ನೃತ್ಯಗಳಿಗೆ ಅಲ್ಲ. ಸಂಸ್ಕೃತಿಯನ್ನೇ ಇವರು ಮರೆಯುತ್ತಿದ್ದಾರೆ ಎಂದಿದ್ದಾರೆ ಹಲವರು. ನೀವು ಈ ಹಾಡಿನ ನೃತ್ಯವನ್ನು ಎಷ್ಟೇ ಅನುಕರಿಸಲು ನೋಡಿದರೂ ಮೂಲನೃತ್ಯಕ್ಕೆ ಸಾಟಿಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ ಒಬ್ಬರು. ಈ ಮದುಮಗನ ಬಗ್ಗೆ ಕನಿಕರವೆನ್ನಿಸುತ್ತದೆ, ಈ ವಧು ಸಾರ್ವಜನಿಕವಾಗಿ ಐಟಮ್​ ಸಾಂಗ್​ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿ ಎಂದಿದ್ದಾರೆ ಮತ್ತೊಬ್ಬರು.

ನನ್ನ ಮದುವೆಯ ದಿನ ಹುಡುಗಿಯಾದವಳು ಹೀಗೆ ನರ್ತಿಸಿದ್ದರೆ ಖಂಡಿತ ನಾನು ಈ ಮದುವೆಯನ್ನು ಮುರಿದುಕೊಳ್ಳುತ್ತಿದ್ದೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟೂ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:07 pm, Thu, 1 December 22

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್