ಅಜ್ಜನ ಸೈಕಲ್ ಸ್ಟಂಟ್; ವಯಸ್ಸು ಅನ್ನೋದು ಕೇವಲ ಅಂಕಿಯಷ್ಟೇ!

Cycle Stunts : ಅಜ್ಜಾ, ನೀನೇ ನಿಜವಾದ ಶ್ರೀಮಂತ. ಆರೋಗ್ಯ ಆಯಸ್ಸು, ಸಂತೋಷ ಮತ್ತು ಉತ್ಸಾಹದೊಂದಿಗೆ ನಿನ್ನ ಪಾಡಿಗೆ ನೀ ಸಾಹಸವನ್ನೂ ಮಾಡುತ್ತಿದ್ದೀ ಎಂದು ಬೆನ್ನು ತಟ್ಟುತ್ತಿದ್ದಾರೆ ನೆಟ್ಟಿಗರು.

ಅಜ್ಜನ ಸೈಕಲ್ ಸ್ಟಂಟ್; ವಯಸ್ಸು ಅನ್ನೋದು ಕೇವಲ ಅಂಕಿಯಷ್ಟೇ!
ಸೈಕಲ್ ಸ್ಟಂಟ್​ನಲ್ಲಿ ಈ ಅಜ್ಜ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 01, 2022 | 3:24 PM

Viral Video : ಕಲಿಕೆಗೆ ಯಾವ ವಯಸ್ಸು? ಆದರೆ ಸಾಹಸಕ್ಕೆ!? ಅದಕ್ಕೂ ಇಲ್ಲ ಅನ್ನುತ್ತಿದ್ದಾನೆ ಈ ಅಜ್ಜ. ಹೀಗೆ ಈ ಮೋಡಮುಸುಕಿದ ವಾತಾವರಣದಲ್ಲಿ ಜಿಬುರು ಮಳೆಯಲ್ಲಿ ಈ ಅಜ್ಜ ಮುಖ್ಯರಸ್ತೆಯಲ್ಲಿ ಅತಿವೇಗದಲ್ಲಿ ಸೈಕಲ್​ ಮೇಲೆ ಸ್ಟಂಟ್ ಮಾಡಿಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ನೋಡಿದ ಯಾರಿಗೂ ಅಲಾ ಅಜ್ಜನೇ! ಎನ್ನಿಸದೇ ಇರಲು. ನೀವೀಗ ಚಳಿಯಲ್ಲಿ ಮುದುರಿಕೊಂಡು ಕಾಫಿಗಾಗಿ ಧ್ಯಾನಿಸುತ್ತ ಕುಳಿತಿರಬಹುದು. ಆದರೆ ಈ ಅಜ್ಜನ ವಿಡಿಯೋ ನೋಡುತ್ತಿದ್ದಂತೆ ಸೈಕಲ್ ಏರಬೇಕೆಂದು ಮನಸ್ಸಾದರೂ ಆದೀತು.

ಮಳೆಯಲ್ಲಿ ಓಡಾಡುವುದೇ ಕಷ್ಟವೆಂದು ಮುದುರಿ ಕುಳಿತುಕೊಳ್ಳುವ ಜನ ನಾವು. ಅದರಲ್ಲೂ ಸೈಕಲ್​ ಮೇಲೆ! ಆದರೆ ಈ ಅಜ್ಜನ ಉತ್ಸಾಹ ನೋಡಿ, ತನ್ನಪಾಡಿಗೆ ತಾ ಹೇಗೆ ಗಾಳಿಯಲ್ಲಿ ತೇಲುತ್ತಿದ್ದಾನೆಂದು. ಈ ವಯಸ್ಸಿನಲ್ಲಿಯೇ ಇಷ್ಟೊಂದು ಸಾಹಸ ಇನ್ನು ವಯಸ್ಸಿದ್ದಾಗ ಏನೆಲ್ಲ ಸಾಹಸ ಮಾಡಿರಬಹುದು ಎನ್ನುವ ಅನುಮಾನ ಏಳದೆ ಇರುತ್ತದೆಯೇ?

ಹೀಗೆ ಸೈಕಲ್​ ಮೇಲೆ ಮೈಮರೆತು ಹೋಗುತ್ತಿರುವಾಗ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ. ಯಾವ ಊರು ಏನು ಹೆಸರು ಏನೊಂದೂ ಗೊತ್ತಿಲ್ಲ. ಈಗಾಗಲೇ ಈ ವಿಡಿಯೋ ಅನ್ನು ಸುಮಾರು 85,000 ಜನ ನೋಡಿದ್ದಾರೆ. ಇವನೇ ನಿಜವಾದ ಶ್ರೀಮಂತ, ಏಕೆಂದರೆ ಇಷ್ಟೊಂದು ಆಯಸ್ಸು, ಆರೋಗ್ಯವನ್ನು ಪಡೆದುಕೊಂಡು ಉತ್ಸಾಹವನ್ನೂ ಉಳಿಸಿಕೊಂಡಿದ್ದಾನೆ ಎಂದಿದ್ದಾರೆ ಒಬ್ಬರು. ಜೀವನವನ್ನು ಹೀಗೆ ಸಂತೋಷದಿಂದ ಅನುಭವಿಸಬೇಕು ಎಂದಿದ್ದಾರೆ ಇನ್ನೊಬ್ಬರು. ಅಳುವುದಕ್ಕೆ, ಕೊರಗುವುದಕ್ಕೆ ಸಮಯವಿಲ್ಲ ಎನ್ನುವ ಹಾಗೆ ಹೀಗೆ ಬದುಕನ್ನು ಎದುರುಗೊಳ್ಳಬೇಕು ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ