AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆಯ ನೃತ್ಯಕ್ಕೆ ಅತ್ತೆ ಖುಷ್​; ಅಪರೂಪದ ಈ ಜೋಡಿ, ವೈರಲ್​ ವಿಡಿಯೋ ನೋಡಿ

Mother in Law : ‘ನನ್ನ ಅತ್ತೆಯ ಪ್ರತಿಕ್ರಿಯೆ ನಿರೀಕ್ಷಿಸಲೆಂದೇ ನಾನು ಈ ನೃತ್ಯ ಮಾಡಿದೆ. ನಾನು ಹೇಗಿದ್ದೇನೋ ಹಾಗೆಯೇ ಅವರು ನನ್ನನ್ನು ಸ್ವೀಕರಿಸಿದ್ದಾರೆ. ಇಂಥ ಕುಟುಂಬವನ್ನು ಹೊಂದಲು ನಾನು ಪುಣ್ಯ ಮಾಡಿದ್ದೇನೆ.’

ಸೊಸೆಯ ನೃತ್ಯಕ್ಕೆ ಅತ್ತೆ ಖುಷ್​; ಅಪರೂಪದ ಈ ಜೋಡಿ, ವೈರಲ್​ ವಿಡಿಯೋ ನೋಡಿ
Mother in law has the sweetest reaction after seeing her daughter in law dance
TV9 Web
| Updated By: ಶ್ರೀದೇವಿ ಕಳಸದ|

Updated on:Nov 11, 2022 | 4:01 PM

Share

Viral Video : ಬಾಲ್ಯದ ಮತ್ತು ಹರೆಯದಲ್ಲಿ ಅಡಗಿದ್ದ ಆಕಾಂಕ್ಷೆಗಳಿಗೆ ಸಾಮಾಜಿಕ ಜಾಲತಾಣ ವಯೋಬೇಧವಿಲ್ಲದೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದೀಗ ವೈರಲ್​ ಆಗಿರುವ ಈ ವಿಡಿಯೋ ನೋಡಿ. ಅಡುಗೆಮನೆಯಲ್ಲಿ ಇವರ ಅತ್ತೆ ಕೆಲಸದಲ್ಲಿ ಮುಳುಗಿದ್ದಾರೆ. ಸೊಸೆ ಹಾಲ್​ನಲ್ಲಿ ನೃತ್ಯ ಮಾಡಿದ್ದಾರೆ. ನೆಟ್ಟಿಗರು ಅರೆ ವ್ಹಾ! ಇದು ಅದ್ಭುತ ಎನ್ನುತ್ತಿದ್ದಾರೆ. ಏಕೆಂದರೆ ಅತ್ತೆ ಮತ್ತು ಸೊಸೆಯ ಸಂಬಂಧದ ನಿಭಾವಣೆ ಅಷ್ಟು ಸುಲಭದ್ದಲ್ಲ ಎನ್ನುವುದು ಇದನ್ನು ಓದುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿರುವ ಸತ್ಯಾನುಸತ್ಯ!

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇನ್​ಸ್ಟಾಗ್ರಾಂನ ಖಾತೆದಾರರಾದ ವಿನೀತಾ ಶರ್ಮಾ ತಮ್ಮ ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ನನ್ನ ಅತ್ತೆಯ ಪ್ರತಿಕ್ರಿಯೆ ನಿರೀಕ್ಷಿಸಲೆಂದೇ ನಾನು ಈ ನೃತ್ಯ ಪ್ರದರ್ಶನ ಮಾಡಿದೆ. ನಾನು ಹೇಗಿದ್ದೇನೋ ಹಾಗೆಯೇ ಅವರು ನನ್ನನ್ನು ಸ್ವೀಕರಿಸಿದ್ದಾರೆ. ಇಂಥ ಕುಟುಂಬವನ್ನು ಹೊಂದಲು ನಾನು ಪುಣ್ಯ ಮಾಡಿದ್ದೇನೆ’ ಎಂದಿದ್ದಾರೆ.

ವಿನೀತಾ ತಮ್ಮ ಬಯೋದಲ್ಲಿ, ಎಂಎಸ್​ಸಿ ರಾಸಾಯನಿಕ ಶಾಸ್ತ್ರದಲ್ಲಿ ಪದವೀಧರೆಯಾಗಿದ್ದು ನಿರೂಪಣೆ, ನೃತ್ಯ, ನೃತ್ಯ ಸಂಯೋಜನೆ ತಮ್ಮ ಹವ್ಯಾಸ ಎಂದು ಹೇಳಿಕೊಂಡಿದ್ದಾರೆ.

ಈ ವಿಡಿಯೋ ಅನ್ನು ಈಗಾಗಲೇ 64,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಉಲ್ಲಾಸಮಯವಾದ ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ಧಾರೆ. ನಿಮ್ಮ ಈ ಪ್ರೀತಿ ಮತ್ತು ವಿಶ್ವಾಸ ಕಂಡು ಬಹಳ ಖುಷಿಯಾಯಿತು ಎಂದಿದ್ದಾರೆ ನೆಟ್ಟಿಗರು. ಪೀಳಿಗೆಯ ಅಂತರವನ್ನು ಮತ್ತು ಸಂಬಂಧಗಳ ಪರಂಪರಾಗತ ಗೋಜಲನ್ನು ಹೀಗೆ ಉಪಾಯವಾಗಿಯೇ ಬಿಡಿಸಬೇಕು ಎಂದಿದ್ದಾರೆ ಇನ್ನೂ ಒಬ್ಬರು. ಹೀಗೆ ಪ್ರತೀ ಮನೆಗಳಲ್ಲಿಯೂ ಸಂಬಂಧಗಳನ್ನು ತಿಳಿವಳಿಕೆಯಿಂದ ನಿಭಾಯಿಸುವ ಸೊಸೆಯಂದಿರು ಬೇಕು ಮತ್ತು ಅವರನ್ನು ಅವರಂತೆಯೇ ಸ್ವೀಕರಿಸುವ ಅತ್ತೆಯಂದಿರೂ ಬೇಕು ಎಂದಿದ್ಧಾರೆ ಹಲವರು.

ಏನನ್ನಿಸುತ್ತಿದೆ ಈ ವಿಡಿಯೋ ನೋಡಿದ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:55 pm, Fri, 11 November 22