ಫುಡ್​ ಸ್ಟಾಲೋ, ಕಾರ್ಪೊರೇಟ್​ ಉದ್ಯೋಗವೋ; ಯಾವುದು ಒಳ್ಳೆಯದು? ನೆಟ್ಟಿಗರ ಭಾರೀ ಚರ್ಚೆ

Quora Debate : ಕುದುರೆಯಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಿದ್ದ ಕಾರ್ಪೋರೇಟ್​ ಮಂದಿಗೆ ಕೊರೊನಾದಿಂದ ಉಂಟಾದ ಈ ಸ್ಥಿತ್ಯಂತರದಿಂದಾಗಿ ತಮ್ಮ ಜೀವನಗತಿಯನ್ನು ಅವಲೋಕನ ಮಾಡಿಕೊಳ್ಳಲು ಅಂತೂ ಪುರಸೊತ್ತು ಸಿಕ್ಕಿದೆ.

ಫುಡ್​ ಸ್ಟಾಲೋ, ಕಾರ್ಪೊರೇಟ್​ ಉದ್ಯೋಗವೋ; ಯಾವುದು ಒಳ್ಳೆಯದು? ನೆಟ್ಟಿಗರ ಭಾರೀ ಚರ್ಚೆ
ಸಾಂದರ್ಭಿಕ ಚಿತ್ರ
Follow us
| Updated By: ಶ್ರೀದೇವಿ ಕಳಸದ

Updated on: Nov 11, 2022 | 5:41 PM

Viral Video : ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲೊಂದಾದ Quora ನಲ್ಲಿ ಇತ್ತೀಚೆಗೆ ಹೊಸ ಚರ್ಚೆಯೊಂದು ಹುಟ್ಟಿಕೊಂಡಿದೆ. ಕಾರ್ಪೋರೇಟ್​ ಕಂಪೆನಿಗಳಲ್ಲಿ ಒಳ್ಳೆಯ ಸಂಬಳವಿದ್ದರೂ ಯಾಕೆ ಜನ ಸ್ವಂತ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬುದು ಅಲ್ಲಿ ನಡೆಯುತ್ತಿರುವ ಸದ್ಯದ ಚರ್ಚೆ. ಅನೇಕರು ಕಂಪೆನಿಗಳಿಗಿಂತ ಸ್ವಂತ ಉದ್ಯೋಗದಲ್ಲಿಯೇ ಹೆಚ್ಚು ಗಳಿಸಬಹುದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದನ್ನು ಒಪ್ಪಿಲ್ಲ. ಅಂತೂ ಕುದುರೆಯಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಿದ್ದ ಜನರಿಗೆ ಕೊರೊನಾದಿಂದ ಉಂಟಾದ ಈ ಸ್ಥಿತ್ಯಂತರದಿಂದಾಗಿ ತಮ್ಮ ಜೀವನಗತಿಯನ್ನು ತಾವು ಅವಲೋಕನ ಮಾಡಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ಅನೇಕರು ಕಾರ್ಪೋರೇಟ್​ ಉದ್ಯೋಗವನ್ನು ಬಿಟ್ಟು ಸಣ್ಣ ಸಣ್ಣ ಉದ್ಯಮಗಳಲ್ಲಿ ಅದರಲ್ಲಿಯೂ ಫುಡ್​ ಸ್ಟಾಲ್​, ಫುಡ್​ ಕಾರ್ಟ್​ಗಳನ್ನು ಶುರು ಮಾಡಿದ್ಧಾರೆ ಎನ್ನುವುದು ಗಮನಾರ್ಹ ಸಂಗತಿ. ಒಬ್ಬ ಕಾರ್ಪೋರೇಟ್​ ಉದ್ಯೋಗಿ ತನ್ನ ಉದ್ಯೋಗವನ್ನು ಬಿಟ್ಟು, ಒಳ್ಳೆಯ ಸಂಪಾದನೆಗಾಗಿ ಚೋಲೆ ಬಟೂರೆ ಅಂಗಡಿಯನ್ನು ಶುರುಮಾಡಬೇಕಾದ ಸಂದಿಗ್ಥತೆಯ ಬಗ್ಗೆ ಅನಾಮಧೇಯರೊಬ್ಬರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಎಂಬಿಎ ಪದವೀಧರರರು ತಮ್ಮ ಕಾರ್ಪೋರೇಟ್​ ಉದ್ಯೋಗವನ್ನು ಬಿಟ್ಟು ಚಾಯ್​ವಾಲಾ ಅಂಗಡಿಯನ್ನು ಶುರು ಮಾಡಿದರು. ಸಾಕಷ್ಟು ಎಂಜಿನಿಯರಿಂಗ್ ಪದವೀಧರರು ತಮಗೆ ಇಷ್ಟವಾದ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಈ ಎಲ್ಲವನ್ನು ಗಮನಿಸಿದ ನಾನು ನನ್ನ ಕಾರ್ಪೋರೇಟ್ ಉದ್ಯೋಗವನ್ನು ಬಿಟ್ಟು ಚೋಲೆ ಬಟೂರೆ ಅಂಗಡಿ ಶುರು ಮಾಡಿದೆ. ಕಾರ್ಪೋರೇಟ್​ ಕಂಪೆನಿಯಲ್ಲಿ ನನ್ನ ಸಂಬಳ ವರ್ಷಕ್ಕೆ ರೂ. 8 ಲಕ್ಷ ಇತ್ತು. ಆದರೆ ಆ ಸಂಬಳಕ್ಕೆ ಹೋಲಿಸಿದರೆ ಈಗ ಆರಂಭಿಸಿರುವ ಈ ಸ್ವಂತ ಉದ್ಯಮದಲ್ಲಿಯೇ ಹೆಚ್ಚು ಹಣವಿದೆ’ ಎಂದಿದ್ದಾರೆ.

ಪಂಕಿತ್ ನಾರಂಬ ಕಂಟೆಂಟ್​ ಕ್ರಿಯೇಟರ್​​, ಕಾರ್ಪೊರೇಟ್​ ಉದ್ಯೋಗಿಯೊಬ್ಬರು ಶುರು ಮಾಡಿರುವ ಚಾಯ್​ವಾಲಾ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು 24.7 ಮಿಲಿಯನ್​ ಜನರು ನೋಡಿದ್ದಾರೆ. 2 ಮಿಲಿಯನ್​ಗಿಂತಲೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ.

ಇದೆಲ್ಲ ನಿರಾಧಾರವಾದ ಚರ್ಚೆ ಎಂಧು ಅನೇಕರು ತಮಾಷೆ ಮಾಡಿದ್ದಾರೆ ಈ ಚರ್ಚೆಯಲ್ಲಿ. ಆದರೆ ಇದೆಲ್ಲವನ್ನೂ ಹೊರತುಪಡಿಸಿದರೆ ವಾಸ್ತವದಲ್ಲಿ ಸತ್ಯವಡಗಿದೆ ಎಂದು ಅನೇಕರು ಹೇಳಿದ್ಧಾರೆ. ನಿಜಕ್ಕೂ ಸಣ್ಣ ವ್ಯಾಪಾರಿಗಳು ಕಾರ್ಪೋರೇಟ್​ ಉದ್ಯೋಗದಲ್ಲಿ ಇರುವವರಿಗಿಂತ ಹೆಚ್ಚು ಗಳಿಸುತ್ತಾರೆ ಎಂದಿದ್ದಾರೆ ಉಳಿದವರು. ಇದು ಸರಿಯಾದ ಹೋಲಿಕೆಯಲ್ಲ ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಈ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ