ಇಗುವಾನಾದೊಂದಿಗೆ ಕಲ್ಲಂಗಡಿ ತಿಂದ ವ್ಯಕ್ತಿ; ನೆಟ್ಟಿಗರ ಮಿಶ್ರಪ್ರತಿಕ್ರಿಯೆ
Iguana : ಸಾಕೋದಕ್ಕೆ ನಾಯಿ ಬೆಕ್ಕು ಇಲ್ಲವಾ ಈ ಮನುಷ್ಯನಿಗೆ? ಹೋಗಲಿ ಸಾಕಿದಮೇಲೆ ಈ ಪರಿ ಹುಚ್ಚಾಟ ಯಾಕೆ? ಎನ್ನುತ್ತಿದ್ದಾರೆ ನೆಟ್ಮಂದಿ ಈ ವಿಡಿಯೋ ನೋಡಿ.
Viral Video : ದನಕರು, ಬೆಕ್ಕುನಾಯಿಗಳ ಜೊತೆಗೆ ಈಗೀಗ ಜನರು ಜೇಡ, ಹಾವು, ಸರೀಸೃಪಗಳನ್ನೂ ಸಾಕುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನೋಡುತ್ತಿದ್ದೀರಿ. ಆದರೆ ಯಾರಾದರೂ ತಮ್ಮ ಸಾಕುಪ್ರಾಣಿಗಳೊಂದಿಗೆ ತಿಂಡಿತಿನಿಸು ಹಣ್ಣುಗಳನ್ನು ಹಂಚಿಕೊಂಡು ತಿಂದಿದ್ದನ್ನು ನೋಡಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಈ ವ್ಯಕ್ತಿ ಇಗುವಾನಾದೊಂದಿಗೆ ಕಲ್ಲಂಗಡಿ ಹಣ್ಣನ್ನು ಹಂಚಿಕೊಂಡು ತಿಂದಿದ್ದಾನೆ.
Sharing is caring.. ?
ಇದನ್ನೂ ಓದಿ? IG: lizardthebuddy pic.twitter.com/mXUGWjbejl
— Buitengebieden (@buitengebieden) November 2, 2022
ಈತನಕ 6,29,000 ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂಥ ಪ್ರಾಣಿಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಸುರಕ್ಷಿತವೇ ಎಂದಿದ್ದಾರೆ. ಸಾಕಿದ್ದರೂ ಆಹಾರ ಹಂಚಿಕೊಳ್ಳುವುದು ಎಷ್ಟು ಸರಿ? ಇಂಥ ಹುಚ್ಚಾಟಗಳನ್ನು ಬಿಟ್ಟು ನಾಯಿಯೋ ಬೆಕ್ಕನ್ನೋ ಸಾಕಲು ಈ ಮನುಷ್ಯನಿಗೆ ಹೇಳಿ ಎಂದಿದ್ದಾರೆ.
ಇದನ್ನು ಸಾಕುವುದರಿಂದ ಏನು ಪ್ರಯೋಜನ ಎಂದು ಕೇಳಿದ್ದಾರೆ ಕೆಲವರು. ಅದ್ಭುತವಾಗಿದೆ ಈ ಪ್ರಾಣಿ ಎಂದಿದ್ದಾರೆ ಕೆಲವರು. ನೋಡಿ ಹಣ್ಣನ್ನು ಹೇಗೆ ಗಬಕ್ಕೆಂದು ತಿನ್ನುತ್ತದೆ ಬಹಳ ಚೆಂದ ಎಂದಿದ್ದಾರೆ ಇನ್ನೂ ಕೆಲವರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:10 pm, Sat, 5 November 22