ಗುಜರಾತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಹಿಮ್ಮತ್‌ನಗರದ ‘ಮೀಸೆ ಮನುಷ್ಯ’

ಪಶ್ಚಿಮ, ಪೂರ್ವದಿಂದ ಉತ್ತರದವರೆಗೆ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ಹೇಳಿಕೊಳ್ಳುವ ಸೋಲಂಕಿ ಮಾಜಿ ಸೇವಾ ಸಿಬ್ಬಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತಾನು ಶ್ರಮಿಸುವುದಾಗಿ ಪ್ರಚಾರ ವೇಳೆ ಹೇಳಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ  ಹಿಮ್ಮತ್‌ನಗರದ ‘ಮೀಸೆ ಮನುಷ್ಯ’
ಮಗನ್‌ಭಾಯ್ ಸೋಲಂಕಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 01, 2022 | 4:03 PM

ಹಿಮ್ಮತ್‌ನಗರದ ಮೀಸೆ ಮನುಷ್ಯ (Moustache Man )ಎಂದೇ ಕರೆಯಲ್ಪಡುವ  2.5 ಅಡಿ ಉದ್ದದ ಮೀಸೆಹೊಂದಿರುವ ಮಗನ್‌ಭಾಯ್ ಸೋಲಂಕಿ (57) (Maganbhai Solanki)ಈ ವರ್ಷದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Assembly elections) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಯುವಕರಲ್ಲಿ ಮೀಸೆ ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಅವರು ಸರ್ಕಾರದಲ್ಲಿ ಮನವಿ ಮಾಡಿದ್ದಾರೆ. ಸಕರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಮಾರುಕಟ್ಟೆಯೊಂದರಲ್ಲಿ ಸೋಲಂಕಿ ಅವರು ವ್ಯಾಪಾರಿಗಳಿಂದ ಮತ ಕೇಳುತ್ತಿದ್ದಾಗ, ಮತದಾರರೊಬ್ಬರು “ಮೂಚೇನ್ ಹೋ ತೋ ಇನ್ಕೀ ಜೈಸಿ, ವಾರ್ನಾ ನಾ ಹೋ” (ಮೀಸೆ ಇದ್ದರೆ ಇವರ ಥರಾ ಇರಬೇಕು,ಇಲ್ಲಾಂದ್ರೆ ಇರಬಾರದು) ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಪ್ರಸ್ತುತ ಸೋಲಂಕಿ ಸ್ಪರ್ಧಿಸುತ್ತಿರುವ ಹಿಮ್ಮತ್‌ನಗರ ಕ್ಷೇತ್ರವು ಬಿಜೆಪಿ ಅಭ್ಯರ್ಥಿಯ ಕೈಯಲ್ಲಿದೆ. ಡಿಸೆಂಬರ್ 5 ರಂದು ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಹಿಮ್ಮತ್‌ನಗರದಲ್ಲಿ ಮತದಾನ ನಡೆಯಲಿದೆ. ಸೋಲಂಕಿ 2012 ರಲ್ಲಿ ಸೈನ್ಯದಿಂದ ಗೌರವ ಲೆಫ್ಟಿನೆಂಟ್ ಆಗಿ ನಿವೃತ್ತರಾದರು. 2017 ರ ಗುಜರಾತ್ ವಿಧಾನಸಭಾ ಚುನಾವಣೆಯಿಂದ ನಾನು ಇಷ್ಟಪಟ್ಟು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಆಗ ನಾನು ಬಹುಜನ ಸಮಾಜ ಪಕ್ಷದ (BSP) ಅಭ್ಯರ್ಥಿಯಾಗಿದ್ದೆ. ಸೋತೆ ಆದರೆ ಸ್ಪರ್ಧಿಸುವುದನ್ನು ಬಿಡಲಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ನಾನು ಪಕ್ಷೇತರ ಸ್ಪರ್ಧಿಸಿದ್ದೆ. ಈ ಬಾರಿಯೂ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಪಿಟಿಐಗೆ ತಿಳಿಸಿದರು.

ಪಶ್ಚಿಮ, ಪೂರ್ವದಿಂದ ಉತ್ತರದವರೆಗೆ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ಹೇಳಿಕೊಳ್ಳುವ ಸೋಲಂಕಿ ಮಾಜಿ ಸೇವಾ ಸಿಬ್ಬಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತಾನು ಶ್ರಮಿಸುವುದಾಗಿ ಪ್ರಚಾರ ವೇಳೆ ಹೇಳಿದ್ದಾರೆ. ಈ ದಿನಗಳಲ್ಲಿ ಜವಾನರು ನೀತಿ ಬದಲಾವಣೆಗಳಿಂದ ಬೇಗನೆ ನಿವೃತ್ತರಾಗಿರುವುದರಿಂದ ನಾನು ಮಾಜಿ ಸೈನಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ. ಅವರಲ್ಲಿ ಹೆಚ್ಚಿನವರು 45-46 ನೇ ವಯಸ್ಸಿನಲ್ಲಿ ನಿವೃತ್ತರಾದ ನಂತರ ನಿರುದ್ಯೋಗಿಗಳಾಗಿದ್ದಾರೆ. ಈ ಹಿಂದೆ ನಿವೃತ್ತ ಯೋಧರು ಸರ್ಕಾರಿ ಕಚೇರಿಗಳಲ್ಲಿ ಮರು ಉದ್ಯೋಗ ಪಡೆಯುತ್ತಿದ್ದರು, ಆದರೆ ಈಗ ಅದೂ ನಿಂತು ಹೋಗಿದೆ,’’ ಎಂದು ಆರೋಪಿಸಿದರು. ಅವರ ಕುಟುಂಬದ ಸದಸ್ಯರಲ್ಲದೆ, ಅವರ ಸ್ನೇಹಿತರಾಗಿರುವ ಕೆಲವು ನಿವೃತ್ತ ಸೇನಾ ಸಿಬ್ಬಂದಿ ಕೂಡ ಅವರ ಪರ ಪ್ರಚಾರ ಮಾಡುತ್ತಿದ್ದಾರೆ.

ಹೋದಲ್ಲೆಲ್ಲಾ ಅವರ ಮೀಸೆ ಗಮನ ಸೆಳೆಯುತ್ತದೆ ಎಂದು ಸ್ನೇಹಿತರು ಹೇಳಿದ್ದಾರೆ.

ಇದನ್ನೂ ಓದಿ
Image
Gujarat Election 2022: ಗುಜರಾತ್​ನಲ್ಲಿ ಇಂದು ಮತ್ತು ನಾಳೆ ಪ್ರಧಾನಿ ಮೋದಿಯಿಂದ ಅಬ್ಬರದ ಪ್ರಚಾರ
Image
Gujarat Election 2022: ಗುಜರಾತ್​ನ 89 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಚುನಾವಣೆ
Image
ಚುನಾವಣೆಗೆ ಮುನ್ನ ಗುಜರಾತ್‌ನಲ್ಲಿ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯ ವಶ

ನಾನು ಸೇನೆಯಲ್ಲಿದ್ದಾಗ, ನನ್ನ ಮೀಸೆಯನ್ನು ಹಿರಿಯ ಅಧಿಕಾರಿಗಳು ಯಾವಾಗಲೂ ಮೆಚ್ಚಿಕೊಳ್ಳುತ್ತಿದ್ದರು. ನಾನು ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಮೀಸೆ ನೋಡಿ ಜನ ಖುಷಿಪಡುತ್ತಾರೆ. ಮಕ್ಕಳು ಹೊರಬಂದು ಅದನ್ನು ಮುಟ್ಟಲು ಪ್ರಯತ್ನಿಸುತ್ತಾರೆ, ಆದರೆ ಯುವಕರು ಅಂತಹ ಮೀಸೆಯನ್ನು ಹೇಗೆ ಬೆಳೆಸಬೇಕೆಂದು ಸಲಹೆಗಳನ್ನು ಕೇಳುತ್ತಾರೆ ಎಂದು ಅವರು ಹೇಳಿದ್ದಾರೆ.

ಸೋಲಂಕಿ ಅವರು ಆಯ್ಕೆಯಾದರೆ ಯುವಕರು ಮೀಸೆ ಬೆಳೆಯಲು ಪ್ರೋತ್ಸಾಹಿಸಲು ಕಾನೂನು ತರಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. “ಯಾರು ಮೀಸೆ ಬೆಳೆಸುತ್ತಾರೆಯೋ ಅದರ ನಿರ್ವಹಣೆಗಾಗಿ ಸರ್ಕಾರ ಸ್ವಲ್ಪ ಹಣವನ್ನು ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

ಸೋಲಂಕಿ ತಮ್ಮ ತಂದೆಯಿಂದ ಮೀಸೆ ಬೆಳೆಯಲು ಸ್ಫೂರ್ತಿ ಪಡೆದ ಅವರು 19 ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರುವ ಹೊತ್ತಿಗೆ ಉದ್ದ ಮೀಸೆ ಹೊಂದಿದ್ದರು. ಸೇನೆಯಲ್ಲಿ, ನನ್ನ ಮೀಸೆಯನ್ನು ಕಾಪಾಡಿಕೊಳ್ಳಲು ನನಗೆ ವಿಶೇಷ ಭತ್ಯೆ ಸಿಕ್ಕಿತು. ನನ್ನ ರೆಜಿಮೆಂಟ್‌ನಲ್ಲಿ ನನ್ನನ್ನು ಮೂಚ್‌ವಾಲಾ ಎಂದು ಕರೆಯಲಾಗುತ್ತಿತ್ತು. ನನ್ನ ಮೀಸೆ ನನ್ನ ಹೆಮ್ಮೆ. ಇದು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆಎಂದು ಅವರು ಹೇಳಿದರು.

ಸೋಲಂಕಿ ಉಮೇದುವಾರಿಕೆಗೆ ಅವರ ವಿರೋಧಿಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದಿದ್ದರೂ, ಅವರು ಚುನಾವಣೆಯಲ್ಲಿ ಗೆಲ್ಲಲು ನಿರ್ಧರಿಸಿದ್ದಾರೆ. ನಾನು ಗೆಲ್ಲುವ ಮುನ್ನ ಬಿಟ್ಟುಕೊಡುವುದಿಲ್ಲ. “ಕೊನೆಯ ಗುಂಡು ಮತ್ತು ಕೊನೆಯ ರಕ್ತದ ಹನಿಯವರೆಗೂ ಬಿಟ್ಟುಕೊಡಬಾರದು ಎಂದು ಸೇನೆಯಲ್ಲಿ ನಮಗೆ ಕಲಿಸಲಾಯಿತು. ನಾನು ಮೊದಲ ಬಾರಿಗೆ ಸ್ಪರ್ಧಿಸಿದಾಗ 1,000 ಮತಗಳನ್ನು ಪಡೆದಿದ್ದೇನೆ, ಎರಡನೇ ಬಾರಿ ಅದು ಸುಮಾರು 2,500 ಮತಗಳನ್ನು ಪಡೆದಿದೆ. ಈ ಬಾರಿ ನನ್ನ ಸಾಧನೆಯನ್ನು ಸುಧಾರಿಸುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ವರದಿಯ ಪ್ರಕಾರ ಪ್ರಸ್ತುತ ಬಿಜೆಪಿ ವಶದಲ್ಲಿರುವ ಹಿಮ್ಮತ್‌ನಗರವು ಪಕ್ಷಕ್ಕೆ ಸುರಕ್ಷಿತ ಸೀಟು. ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿದ್ದು, ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಎಪಿ ಅಧಿಕಾರಕ್ಕೆ ಬಂದರೆ ಈ ಪ್ರದೇಶಕ್ಕೆ ಕೈಗಾರಿಕೆಗಳನ್ನು ತರುವುದಾಗಿ ಭರವಸೆ ನೀಡಿವೆ.

ಬಿಜೆಪಿ ಹಿಮ್ಮತ್‌ನಗರದಿಂದ ವೀರೇಂದ್ರಸಿನ್ಹ ಝಾಲಾ ಅವರನ್ನು ಕಣಕ್ಕಿಳಿಸಿದೆ, ಕಾಂಗ್ರೆಸ್ ಕಮಲೇಶ್‌ಭಾಯ್ ಪಟೇಲ್ ಅವರನ್ನು ನಾಮನಿರ್ದೇಶನ ಮಾಡಿದೆ, ಎಎಪಿ ನಿರ್ಮಲಸಿಂಹ ಪರ್ಮಾರ್ ಅವರನ್ನು ಕಣಕ್ಕಿಳಿಸಿದೆ.

ಸುಮಾರು 2,80,000 ಮತದಾರರು ಇರುವ ಇಲ್ಲಿ ಸುಮಾರು 11 ಪ್ರತಿಶತ ಪರಿಶಿಷ್ಟ ಜಾತಿಯ ಮತವಿದೆ, ಆದರೆ ಪರಿಶಿಷ್ಟ ಪಂಗಡಗಳು ಸುಮಾರು ಮೂರು ಪ್ರತಿಶತ, ಮುಸ್ಲಿಮರು 3.2 ಪ್ರತಿಶತವಿದ್ದಾರೆ. ಪಟೇಲ್, ರಜಪೂತ ಮತ್ತು ಕ್ಷತ್ರಿಯರು ಉಳಿದ ಮತದಾರರನ್ನು ಒಳಗೊಂಡಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ 89 ಸ್ಥಾನಗಳಲ್ಲಿ ಗುರುವಾರ ಮತದಾನ ನಡೆಯುತ್ತಿದೆ. ಹಿಮ್ಮತ್‌ನಗರ ಸೇರಿದಂತೆ ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Thu, 1 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ