Paresh Rawal: ಬೆಂಗಾಲಿಗಳನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳಿಗೆ ಹೋಲಿಸಿ ಮಾತಾಡಿದ ನಟ ಪರೇಶ್ ರಾವಲ್
Paresh Rawal ‘ಸಿಲಿಂಡರ್ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಲಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಪರೇಶ್ ರಾವಲ್ ಹೇಳಿರುವುದು ವಿವಾದಕ್ಕೆ ಕಾರಣ ಆಗಿದೆ.
ನಟ ಪರೇಶ್ ರಾವಲ್ (Paresh Rawal) ಅವರು ಬಾಲಿವುಡ್ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸಿನಿಮಾಗಳಲ್ಲಿ ಅವರ ಹಾಸ್ಯ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಾರೆ. ಆದರೆ ರಿಯಲ್ ಲೈಫ್ನಲ್ಲಿ ಪರೇಶ್ ರಾವಲ್ ಅವರು ಆಡಿದ ಕೆಲವು ಮಾತುಗಳು ವಿವಾದ ಸೃಷ್ಟಿ ಮಾಡಿವೆ. ಬೆಂಗಾಲಿ (Bengali) ಜನರನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರಿಗೆ ಸಮೀಕರಿಸಿ ಮಾತನಾಡಿದ್ದಾರೆ ಪರೇಶ್ ರಾವಲ್. ಗುಜರಾತ್ನಲ್ಲಿ ಬಿಜೆಪಿ ಪರವಾಗಿ ಚುನಾವಣಾ (Gujarat Election) ಪ್ರಚಾರ ಮಾಡುವಾಗ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.
ಪರೇಶ್ ರಾವಲ್ ಹೇಳಿದ್ದೇನು?
‘ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿ ಆಗಿದೆ. ಬೆಲೆ ಇಳಿಯುತ್ತದೆ. ಜನರಿಗೆ ಉದ್ಯೋಗವೂ ಸಿಗುತ್ತದೆ. ಆದರೆ ರೊಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದೆಹಲಿಯ ರೀತಿ ನಿಮ್ಮ ಅಕ್ಕ-ಪಕ್ಕ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಸಿಲಿಂಡರ್ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಲಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಪರೇಶ್ ರಾವಲ್ ಅವರು ಗುರುವಾರ (ಡಿ.1) ಹೇಳಿಕೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸುವ ಭರದಲ್ಲಿ ಪರೇಶ್ ರಾವಲ್ ಅವರು ದೆಹಲಿ ಕುರಿತು ಈ ರೀತಿ ಹೇಳಿದ್ದಾರೆ. ಬೆಂಗಾಲಿ ಜನರನ್ನು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಗರ ಜೊತೆ ಸಮೀಕರಿಸಿ ಮಾತನಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅವರ ಮಾತುಗಳು ಜನರ ನಡುವೆ ದ್ವೇಷ ಭಾವನೆ ಬಿತ್ತುವಂತಿವೆ ಎಂದು ಹಲವರು ಕಿಡಿಕಾರಿದ್ದಾರೆ. ಬಳಿಕ ಪರೇಶ್ ರಾವಲ್ ಅವರು ಟ್ವಿಟರ್ ಮೂಲಕ ಕ್ಷಮೆ ಕೇಳಿದ್ದಾರೆ.
of course the fish is not the issue AS GUJARATIS DO COOK AND EAT FISH . BUT LET ME CLARIFY BY BENGALI I MEANT ILLEGAL BANGLA DESHI N ROHINGYA. BUT STILL IF I HAVE HURT YOUR FEELINGS AND SENTIMENTS I DO APOLOGISE. ? https://t.co/MQZ674wTzq
— Paresh Rawal (@SirPareshRawal) December 2, 2022
‘ಖಂಡಿತವಾಗಿ ಮೀನು ಇಲ್ಲಿನ ಸಮಸ್ಯೆ ಅಲ್ಲ. ಯಾಕೆಂದರೆ ಗುಜರಾತಿಗಳು ಕೂಡ ಮೀನು ತಿನ್ನುತ್ತಾರೆ. ನಾನು ಬೆಂಗಾಲಿ ಅಂತ ಹೇಳಿದ್ದು ಬಾಂಗ್ಲಾದೇಶಿಗರು ಮತ್ತು ರೊಂಹಿಗ್ಯಾ ಜನರಿಗೆ. ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Gujarat Election 2022: ಅಹಮದಾಬಾದ್ನಲ್ಲಿ ಇಂದು ಬೃಹತ್ ರೋಡ್ಶೋ ನಡೆಸಲಿರುವ ಪ್ರಧಾನಿ ಮೋದಿ
ಅರವಿಂದ್ ಕೇಜ್ರಿವಾಲ್ ಬಗ್ಗೆ ಪರೇಶ್ ರಾವಲ್ ಟೀಕೆ:
‘ಅವರು ಖಾಸಗಿ ವಿಮಾನದಲ್ಲಿ ಬರುತ್ತಾರೆ. ಇಲ್ಲಿ ಬಂದು ತೋರಿಕೆಗೆ ಆಟೋ ರಿಕ್ಷಾದಲ್ಲಿ ಕೂರುತ್ತಾರೆ. ನಾನು ನಟನೆಯಲ್ಲಿ ಜೀವಮಾನ ಕಳೆದಿದ್ದೇನೆ. ಆದರೆ ಹೀಗೆ ನಾಟಕ ಮಾಡುವವರನ್ನು ನಾನು ನೋಡಿಲ್ಲ’ ಎಂದು ಅರವಿಂದ್ ಕೇಜ್ರಿವಾಲ್ ಅವರನ್ನು ಪರೇಶ್ ರಾವಲ್ ಟೀಸಿದ್ದಾರೆ. ಅವರ ಹೇಳಿಕೆ ಕುರಿತು ಪರ-ವಿರೋಧ ಚರ್ಚೆ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.