Deepika Padukone: ‘ELLE ಗ್ಲೋಬಲ್ ಐಕಾನ್ ಅವಾರ್ಡ್’ನ್ನು ಗೆದ್ದ ನಟಿ ದೀಪಿಕಾ ಪಡುಕೋಣೆ
TV9kannada Web Team | Edited By: ಗಂಗಾಧರ್ ಬ. ಸಾಬೋಜಿ
Updated on: Dec 01, 2022 | 9:51 PM
ನ. 24ರಂದು ನಡೆದ 'ELLE ಬ್ಯೂಟಿ ಅವಾರ್ಡ್ಸ್ 2022'ನಲ್ಲಿ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದು, 'ELLE ಗ್ಲೋಬಲ್ ಐಕಾನ್ ಅವಾರ್ಡ್'ನ್ನು ಪಡೆದುಕೊಂಡಿದ್ದಾರೆ.
Dec 01, 2022 | 9:51 PM
ನಟಿ ದೀಪಿಕಾ ಪಡುಕೋಣೆ ಅವರು ನ. 24ರಂದು ನಡೆದ 'ELLE ಬ್ಯೂಟಿ ಅವಾರ್ಡ್ಸ್ 2022'ನಲ್ಲಿ ಭಾಗವಹಿಸಿದ್ದರು. 'ELLE ಗ್ಲೋಬಲ್ ಐಕಾನ್ ಅವಾರ್ಡ್'ನ್ನು ಪಡೆದುಕೊಂಡಿದ್ದಾರೆ.
'ELLE ಬ್ಯೂಟಿ ಅವಾರ್ಡ್ಸ್'ಗೆ ದೀಪಿಕಾ ಪಡುಕೋಣೆ ಬಿಳಿ ಬಣ್ಣದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಸದ್ಯ ನಟಿ ದೀಪಿಕಾ ತಾವು ಅವಾರ್ಡ್ ಗೆದ್ದುಕೊಂಡಿರುವುದನ್ನು ತಮ್ಮ ಸಾಮಾಜಿಕ ಜಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರನ್ನು ಬಿಳಿ ಬಣ್ಣದ ಗೌನ್ನಲ್ಲಿ ನೋಡಿದ ಅವರ ಫ್ಯಾನ್ಸ್ 'ಮಾಡರ್ನ್ ಬಾರ್ಬಿ' ಎಂದು ಕರೆದಿದ್ದಾರೆ.
ನಟ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರ ಜನವರಿ 25ಕ್ಕೆ ತೆರೆಗೆ ಬರಲಿದೆ.