Updated on:Dec 02, 2022 | 7:28 PM
ನಟಿ ರಾಕುಲ್ ಪ್ರೀತ್ ಸಿಂಗ್ ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲದೆ, ಟಾಲಿವುಡ್ನಲ್ಲಿಯೂ ತಮ್ಮದೆ ಛಾಪು ಮೂಡಿಸಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ನಟನೆಯಿಂದ ಮಾತ್ರವಲ್ಲದೆ, ತಮ್ಮ ಫ್ಯಾಷನ್ಯಿಂದಲ್ಲೂ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಹೊಸ ಸ್ಟೈಲ್ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪರ್ಪಲ್ ಬಣ್ಣದ ಗೌನ್ ಧರಿಸಿ ರಾಕುಲ್ ಪ್ರೀತ್ ಸಿಂಗ್ ಕೈಯಲ್ಲಿ ಟೆಲಿಫೋನ್ ಹಿಡಿದು ಯಾರಿಗೋ ಹಲೋ ಎನ್ನುತ್ತಿದ್ದಾರೆ. ಈ ಡ್ರೆಸ್ನ್ನು ಅಮಿತ್ ಅಗರವಾಲ್ ಡಿಸೈನ್ ಮಾಡಿದ್ದಾರೆ.
ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಕೈಯಲ್ಲಿ ಸದ್ಯ ಸಾಲು ಸಾಲು ಆಫರ್ಗಳಿವೆ. ಅವರ ನಟನೆಯ 'ಛತ್ರಿವಾಲಿ' ಸಿನಿಮಾ ಕೆಲವೇ ದಿನಗಳಲ್ಲಿ ಜೀ 5ನಲ್ಲಿ ಬಿಡುಗಡೆಯಾಗಲಿದೆ.
ಇತ್ತೀಚೆಗೆ ನಟ ಅಜಯ್ ದೇವಗನ್ ಮತ್ತು ಸಿದ್ದಾರ್ಥ ಮಲ್ಲೋತ್ರಾ ನಟನೆಯ 'ಥ್ಯಾಂಕ್ ಗಾಡ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
Published On - 7:19 pm, Fri, 2 December 22