ಚುನಾವಣೆಗೆ ಮುನ್ನ ಗುಜರಾತ್‌ನಲ್ಲಿ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯ ವಶ
ನಾಡಿಯಾಡ್ ಮತ್ತು ವಡೋದರಾದಿಂದ ಐದು ಜನರನ್ನು ಬಂಧಿಸಲಾಗಿದ್ದು, ಅಹಮದಾಬಾದ್‌ನ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ.
ಗುರುವಾರ ಮೊದಲ ಹಂತದಲ್ಲಿ 89 ಸ್ಥಾನಗಳಿಗೆ 788 ಅಭ್ಯರ್ಥಿಗಳಿಗೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ (Gujarat) ಈಗಾಗಲೇ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್, ಮದ್ಯ ಮತ್ತು ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ವಶಪಡಿಸಿಕೊಂಡಕ್ಕಿಂತ 10 ಪಟ್ಟು ಹೆಚ್ಚು ವಸ್ತುಗಳನ್ನು ವಶಪಡಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ವಶಪಡಿಸಿಕೊಂಡ ಮೊತ್ತ ₹27.21 ಕೋಟಿ. ನವೆಂಬರ್ 29 ರ ಹೊತ್ತಿಗೆ ಒಟ್ಟು ವಶಪಡಿಸಿಕೊಳ್ಳುವಿಕೆಯು ₹290.24 ಕೋಟಿಗಳಷ್ಟಿತ್ತು. 2017 ರಲ್ಲಿ ವಶಪಡಿಸಿಕೊಂಡಿದ್ದಕ್ಕಿಂತ 10.66 ಪಟ್ಟು ಜಾಸ್ತಿಯಾಗಿದೆ ಇದು. ಅನೇಕ ಕಾನೂನು ಜಾರಿ ಸಂಸ್ಥೆಗಳು ಅದರ ಯೋಜನೆ ಮತ್ತು ವೀಕ್ಷಣೆಯ ಪರಿಣಾಮವಾಗಿ ರಾಜ್ಯದ ಚುನಾವಣಾ ಪ್ರಕ್ರಿಯೆಯು ದಾಖಲೆಯ ವಶಪಡಿಸಿಕೊಳ್ಳುವಿಕೆ ಆಗಿದೆ ಎಂದು ಚುನಾವಣಾ ಆಯೋಗ (Election Commission) ಹೇಳಿದೆ.ಗುಜರಾತ್‌ನ ಎಟಿಎಸ್ ಅಧಿಕಾರಿಗಳ ಗುಂಪು ವಡೋದರಾ (ಗ್ರಾಮೀಣ) ಮತ್ತು ವಡೋದರಾ ನಗರದಲ್ಲಿ ನಡೆಸಲಾಗುತ್ತಿರುವ ಮಹತ್ವದ ಡ್ರಗ್ಸ್ ಭಾರೀ ರವಾನೆಯ ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುನ್ನಡೆಸುತ್ತಿದೆ.ಈ ತಂಡವು ಸುಮಾರು ₹ 478 ಕೋಟಿ ಮೌಲ್ಯದ ಸರಿಸುಮಾರು 143 ಕೆಜಿ ಮೆಫೆಡ್ರೋನ್ (ಸಿಂಥೆಟಿಕ್ ನಾರ್ಕೋಟಿಕ್) ಅನ್ನು ಪತ್ತೆ ಮಾಡಿದೆ ಮತ್ತು ಎರಡು ಮೆಫೆಡ್ರೋನ್ ಔಷಧ ತಯಾರಿಕಾ ಕೇಂದ್ರಗಳನ್ನು ಪತ್ತೆ ಮಾಡಿದೆ.
ನಾಡಿಯಾಡ್ ಮತ್ತು ವಡೋದರಾದಿಂದ ಐದು ಜನರನ್ನು ಬಂಧಿಸಲಾಗಿದ್ದು, ಅಹಮದಾಬಾದ್‌ನ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. 1985 ರ ಎನ್‌ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕಾರ್ಯಾಚರಣೆ ಪ್ರಗತಿಯಲ್ಲಿದೆ ಮತ್ತು ಕಾರ್ಯಾಚರಣೆ ಪೂರ್ಣಗೊಂಡ ನಂತರ ಸಂಪೂರ್ಣ ವಿವರಗಳು ಲಭ್ಯವಾಗುತ್ತವೆ ಎಂದು ಚುನಾವಣಾ ಸಮಿತಿ ಹೇಳಿದೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 89 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 48, ಕಾಂಗ್ರೆಸ್ 40, ಒಂದು ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದರು.ಗುರುವಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ 14,382 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 5ಕ್ಕೆ (ಸೋಮವಾರ) ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.