AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೂ ಹಾಲು ಕೊಡು; ಮರಿಜಾಗ್ವಾರ್​ಗೆ ಹಾಲು ಕುಡಿಸಲು ಬಿಡದ ಮರಿಹುಲಿ

Viral Video : ಜಾಗ್ವಾರ್​ಗಷ್ಟೇ ಯಾಕೆ ನೀನು ಹಾಲು ಕುಡಿಸುವುದು? ನನಗೂ ಕುಡಿಸು, ನನ್ನನ್ನು ಹೀಗೇ ಎತ್ತಿಕೋ, ಮುದ್ದು ಮಾಡು ಎಂದು ದುಂಬಾಲು ಬೀಳುತ್ತಿದೆ ಈ ಮರಿಹುಲಿ. ನೋಡಿ ಈ ಮುದ್ದಾದ ವಿಡಿಯೋ.

ನನಗೂ ಹಾಲು ಕೊಡು; ಮರಿಜಾಗ್ವಾರ್​ಗೆ ಹಾಲು ಕುಡಿಸಲು ಬಿಡದ ಮರಿಹುಲಿ
ಮರಿಜಾಗ್ವಾರ್​ಗೆ ಹಾಲು ಕುಡಿಸುತ್ತಿದ್ದರೆ ಈ ಮರಿಹುಲಿ ಸತಾಯಿಸುತ್ತಿದೆ
TV9 Web
| Edited By: |

Updated on:Dec 07, 2022 | 3:40 PM

Share

Viral Video : ನನ್ನತ್ತಲೇ ನೋಡು, ನನಗೇ ಕೊಡು, ನನಗೇ ಮೊದಲು ಕುಡಿಸು, ನನಗೇ ಉಣಿಸು, ನನಗೇ ಮುದ್ದು ಮಾಡು, ನನ್ನನ್ನಷ್ಟೇ ಮಲಗಿಸಿಕೋ, ನನ್ನನ್ನು ಬಿಟ್ಟು ಬೇರೆ ಯಾರ ಕಡೆಗೂ ಗಮನ ಕೊಡಬೇಡ ಎಂದು ಮಕ್ಕಳಂತೆ ಈ ಪ್ರಾಣಿಗಳೂ ಹೀಗೆ ದುಂಬಾಲು ಬೀಳುತ್ತವೆ ಎನ್ನುವುದು ನಿಮಗೆ ಗೊತ್ತೇ? ನೋಡಿಲ್ಲವಾದಲ್ಲಿ ಈ ವಿಡಿಯೋ ನೋಡಿ. ಈ ಪ್ರಾಣಿಪೋಷಕ ಜಾಗ್ವಾರನ ಮರಿಗೆ ಹಾಲು ಕುಡಿಸುತ್ತಿದ್ದರೆ ಈ ಹುಲಿಮರಿಗೆ ಹೊಟ್ಟೆಯಾಳದಿಂದ ಮುದ್ದಾದ ಸಂಕಟ ಉಕ್ಕೇರುತ್ತಿದೆ!

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Top Viral Animal Videos (@animal.viral)

ಅವನ ಕಣ್ಣಿಗೋ ಮೂಗಿಗೋ ಬಾಯಿಗೋ ಕಿವಿಗೋ ಹುಲಿಯ ಉಗುರು ತಾಕಿದರೆ ಏನು ಗತಿ? ಎನ್ನಿಸುತ್ತದೆಯಲ್ಲವೆ ಈ ವಿಡಿಯೋ ನೋಡಿದಾಗ. ಅವ ಮಾತ್ರ ಯಾವುದೂ ಆತಂಕ, ಭಯವಿಲ್ಲದೆ ಆರಾಮಾಗಿ ಜಾಗ್ವಾರ್​ನ ಮರಿಗೆ ಹಾಲು ಕುಡಿಸುತ್ತಿದ್ದಾನೆ.

ಮೊದಲು ನನಗೆ ಕೊಡಬೇಕಿತ್ತು ಅಂತಲೋ ಇನ್ನಷ್ಟು ಹಾಲು ಕೊಡು ಎಂತಲೋ ಹುಲಿ ಅವನ ಮೇಲೆರಗಿ ಮುದ್ದುಮಾಡುತ್ತಿದೆ. ಬಹುಶಃ ಹುಲಿಮುದ್ದು ಎಂದರೆ ಇದೇ ಇರಬೇಕು ಅಲ್ಲವೆ?

ಈ ವಿಡಿಯೋ ಅನ್ನು ಸುಮಾರು 3,000 ಹೆಚ್ಚು ಜನರು ನೋಡಿದ್ದಾರೆ. ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:40 pm, Wed, 7 December 22

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು