ನಿದ್ದೆಯಲ್ಲಿರುವ ಮಗುವನ್ನೂ ಸ್ಕೂಟರನ್ನೂ ಸಂಭಾಳಿಸುತ್ತಿರುವ ಸೂಪರ್​ಮ್ಯಾನ್ ಅಪ್ಪ!

Superman : ಅಪ್ಪನ ಸಾಮರ್ಥ್ಯಗಳು ಏನೆಂದು ಒಮ್ಮೆಲೇ ಪ್ರಕಟಗೊಳ್ಳುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅಪ್ಪನೊಳಗಿನ ಸೂಪರ್​ಮ್ಯಾನ್​ ಜಾಗೃತಗೊಳ್ಳುತ್ತಾ ಹೋಗುತ್ತಾನೆ. ಅದಕ್ಕೆ ಅಪ್ಪನೆಂದರೆ ಆನೆಯ ಬಲವೇ! ನೋಡಿ ಈ ವಿಡಿಯೋ.

ನಿದ್ದೆಯಲ್ಲಿರುವ ಮಗುವನ್ನೂ ಸ್ಕೂಟರನ್ನೂ ಸಂಭಾಳಿಸುತ್ತಿರುವ ಸೂಪರ್​ಮ್ಯಾನ್ ಅಪ್ಪ!
ನಿದ್ದೆಹೋದ ಮಗನನ್ನೂ ಗಾಡಿಯನ್ನೂ ಸಂಭಾಳಿಸುತ್ತ ಚಲಿಸುತ್ತಿರುವ ಅಪ್ಪ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 06, 2022 | 11:41 AM

Viral Video : ಅಪ್ಪಂದಿರು ಎಂದರೆ ಮಕ್ಕಳ ವಿಷಯದಲ್ಲಿ ದೊಡ್ಡ ಶಕ್ತಿ. ಕೇಳಿದ್ದನ್ನು ದಯಪಾಲಿಸುವ ದೈವ. ಎಂಥ ಸಂದರ್ಭದಲ್ಲಿಯೂ ಕಾಯುವ ಕರುಣಾಳು. ಎಂಥ ಕಷ್ಟದಲ್ಲಿಯೂ ಸಾಹಸಿಗನಂತೆ ರಕ್ಷಿಸುವ ಸೂಪರ್ ಹೀರೋ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ದ್ವಿಚಕ್ರವಾಹನ ಓಡಿಸುತ್ತ, ಹಿಂದಿನ ಸೀಟಿನಲ್ಲಿ ಕುಳಿತು ನಿದ್ದೆ ಮಾಡುತ್ತಿರುವ ಮಗುವನ್ನು ಈ ಅಪ್ಪ ಸಂಭಾಳಿಸುತ್ತ ಗಾಡಿ ಓಡಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ABHISHEK THAPA (@abhi37920)

ಅಪ್ಪನ ಸಾಮರ್ಥ್ಯಗಳು ಏನೆಂದು ಒಮ್ಮೆಲೇ ಪ್ರಕಟಗೊಳ್ಳುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಅಪ್ಪನೊಳಗಿನ ಸೂಪರ್​ಮ್ಯಾನ್​ ಜಾಗೃತಗೊಳ್ಳುತ್ತಾ ಹೋಗುತ್ತಾನೆ. ಅದಕ್ಕೆ ಅಪ್ಪನೆಂದರೆ ಆನೆಯ ಬಲವೇ! ನವೆಂಬರ್ 14ರಂದು ಅಭಿಷೇಕ್​ ಥಾಪಾ ಎಂಬ ಇನ್​​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ಈ ಮಗು ಅಪ್ಪನ ಹಿಂದೆ ಕುಳಿತಿದೆ. ಹಾಗೇ ನಿದ್ದೆ ಬಂದಿದೆ. ಎಡಗೈಯಿಂದ ಅಪ್ಪ ಮಗುವನ್ನು ಹಿಡಿದುಕೊಂಡು ಒಂದೇ ಕೈಯಿಂದ ಗಾಡಿ ಓಡಿಸಿದ್ದಾನೆ.

ಇದನ್ನೂ ಓದಿ : ಮುದ್ದಿನಿಂದಲೇ ಅಪ್ಪಚ್ಚಿ ಇನ್ನು ನನಗೆ ಕೋಪ ಬಂದರೆ ಹೇಗಪ್ಪಿ!?

ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಅಪ್ಪನ ಕೈ  ನಿಮ್ಮ ಬೆನ್ನಿಗಿರುವ ತನಕ ನೀವು ಸುರಕ್ಷಿತರು ಎಂದಿದ್ದಾರೆ ಒಬ್ಬರು. ಅಪ್ಪನೆಂದರೆ ಅಪ್ಪನೇ ಎಂದಿದ್ಧಾರೆ ಇನ್ನೊಬ್ಬರು. ನನಗಿನ್ನೂ ನೆನಪಿದೆ ಶಾಲೆಗೆ ಹೋಗುವಾಗ ಮಳೆ ಬಂದಿತು. ಅಪ್ಪ ತನ್ನ ರೇನ್​ಕೋಟ್​ ಅನ್ನು ನನಗೆ ಕೊಟ್ಟರು ಎಂದು ಹೇಳಿದ್ದಾರೆ ಮತ್ತೊಬ್ಬರು. ಪ್ರತಿಯೊಬ್ಬರ ಜೀವನದ ನಿಜವಾದ ಹೀರೋ ಎಂದಿದ್ದಾರೆ ಮಗದೊಬ್ಬರು. ಅಪ್ಪ ಇರುವ ತನಕ ಎಲ್ಲವೂ ಸಾಧ್ಯ! ಎಂದಿದ್ದಾರೆ ಇನ್ನೊಬ್ಬರು. ಎಲ್ಲ ಅಪ್ಪಂದಿರೂ ಈ ಅಪ್ಪನಂತೆ ಒಳ್ಳೆಯವರಾಗಿರುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೆ ನನ್ನ ಅಪ್ಪ ನೆನಪಾಗುತ್ತಿದ್ದಾರೆ ಈ ವಿಡಿಯೋ ನೋಡಿ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:40 am, Tue, 6 December 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ