ಮುದ್ದಿನಿಂದಲೇ ಅಪ್ಪಚ್ಚಿ ಇನ್ನು ನನಗೆ ಕೋಪ ಬಂದರೆ ಹೇಗಪ್ಪಿ!?

Baby Elephant : ಇಷ್ಟಕ್ಕೇ ಸುಸ್ತಾದರೆ ಹೇಗೆ? ಬಾರಣ್ಣೋ ಇನ್ನೂ ಸ್ವಲ್ಪ ಹೊತ್ತು ಆಟ ಆಡೋಣ ಎಂದು ಉಮೇದಿನಲ್ಲಿ ಕರೆಯುತ್ತಿದೆ ಮರಿಯಾನೆ. ಈ ಅಣ್ಣ ಮಾತ್ರ ಜನ್ಮದಲ್ಲಿ ಇನ್ನೆಂದೂ ಇಂಥ ಸಾಹಸಕ್ಕೆ ಬೀಳಲಾರೆ ಎನ್ನುತ್ತಿದ್ಧಾನೆ.

ಮುದ್ದಿನಿಂದಲೇ ಅಪ್ಪಚ್ಚಿ ಇನ್ನು ನನಗೆ ಕೋಪ ಬಂದರೆ ಹೇಗಪ್ಪಿ!?
Baby Elephant Almost Crushes Man While Cuddling With Him
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 15, 2022 | 5:06 PM

Viral Video : ಪುಟ್ಟ ಮರಿ ಇದು. ಒಮ್ಮೆ ಸೊಂಡಿಲಿನತ್ತ ನಿಮ್ಮ ಕತ್ತು ಕೊಟ್ಟು ನೋಡಿ. ಎಳೇಮಗುವಿನ ಕಾಲುಗಳಿವು ಒಮ್ಮೆ ನಿಮ್ಮ ಎದೆಯನ್ನು ಕೊಟ್ಟು ನೋಡಿ. ಪಾಪ ಇನ್ನೂ ಕೂಸಿದು ಒಮ್ಮೆ ತೊಡೆಮೇಲೆ ಮಲಗಿಸಿಕೊಂಡು ನೋಡಿ; ದೂರದಿಂದ ನೋಡಿ ಉಕ್ಕುವ ಮುದ್ದನ್ನು ತಡೆಯಲಾರದೆ ಹತ್ತಿರ ಹೋದಿರೋ? ಹುಕಿಬಂದ ಈ ಮರಿಯಾನೆ ನಿಮ್ಮನ್ನು ಜೀವನದಲ್ಲಿ ನೆನಪಿಟ್ಟಕೊಳ್ಳುವಂತೆ ಮುದ್ದಿಸಿಬಿಡುತ್ತದೆ. ನೋಡಿ ಈ ವಿಡಿಯೋ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಮನುಷ್ಯ ಮೆಲ್ಲಗೆ ಮಾತನಾಡಿಸಲು ಹೋಗಿದ್ದಾನೆ. ಮಾತನಾಡಿಸುತ್ತಾ ಮೈದಡವಿದ್ದಾನೆ. ಸಾಕಲ್ಲ ಅಷ್ಟೇ. ಏರಿ ಅವನನ್ನು ಸರೀ ಉರುಳಾಡಿಸಿ ಮುದ್ದಿನ  ಮಳೆಗರಿದಿದೆ. ಈ ವಿಡಿಯೋ ಅನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 16,000ಕ್ಕೂ ಹೆಚ್ಚು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನನಗನಿಸಿದಂತೆ ಈ ವ್ಯಕ್ತಿ ಖುಷಿಯಿಂದ ಆಟವಾಡುತ್ತಿಲ್ಲ. ಸಾಕಷ್ಟು ಪ್ರಯಾಸ ಪಡುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಖಂಡಿತ ಈ ಮನುಷ್ಯ ಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂದಿದ್ದಾರೆ ಇನ್ನೂ ಒಬ್ಬರು. ಆ ಮನುಷ್ಯನ ಮುಖ ನೋಡಿದರೆ ಗೊತ್ತಾಗುತ್ತದೆ ಸಾಕಷ್ಟು ಸುಸ್ತಾಗಿದ್ದಾನೆ ಅವ ಎಂದು ಮಗದೊಬ್ಬರು ಹೇಳಿದ್ದಾರೆ. ಅಣ್ಣಾ ಸುಸ್ತಾಗಿ ಹೋಗಿದ್ದಾನೆ, ಬೇಕಿತ್ತಾ ಈ ಆಟ? ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡುತ್ತಿದ್ದಂತೆ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:04 pm, Tue, 15 November 22