1970ರಲ್ಲಿ ಸ್ಟೀವ್ ಜಾಬ್ಸ್ ಧರಿಸಿದ್ದ ಸ್ಯಾಂಡಲ್ಸ್ ರೂ.1.76 ಕೋಟಿಗೆ ಹರಾಜು
Steve Jobs : ಬರ್ಕನ್ಸ್ಟಾಕ್ಸ್ ಕಂಪೆನಿಯ ಈ ಸ್ಯಾಂಡಲ್ಸ್ ಅತ್ಯಂತ ಹೆಚ್ಚು ಬೆಲೆಗೆ ಹರಾಜಾಗಿರುವುದು ಗಮನಿಸಬೇಕಾದ ಅಂಶ. ಇವುಗಳನ್ನು ಕಾರ್ಕ್ ಮತ್ತು ಸೆಣಬಿನಿಂದ ತಯಾರಿಸಲಾಗಿದೆ.
Viral Video : ಕೆಲ ದಿನಗಳ ಹಿಂದೆಯಷ್ಟೇ ಸ್ಟೀವ್ ಜಾಬ್ಸ್ ಅವರ ಸ್ಯಾಂಡಲ್ಸ್ ಜೂಲಿಯನ್ಸ್ ಆಕ್ಷನ್ ವೆಬ್ಸೈಟ್ ನಲ್ಲಿ ಹರಾಜಿಗಿದ್ದವು. ರೂ. 48,32,889- ರೂ. 64,43,852 ತನಕ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿತ್ತು. 1970ರಲ್ಲಿ ಸ್ಟೀವ್ ಧರಿಸುತ್ತಿದ್ದ ಈ ಸ್ಯಾಂಡಲ್ಸ್ ಇದೀಗ ರೂ. 1.76 ಕೋಟಿಗೆ ಹರಾಜಾಗಿದೆ. ಬರ್ಕನ್ಸ್ಟಾಕ್ಸ್ ಕಂಪೆನಿಯ ಈ ಸ್ಯಾಂಡಲ್ಸ್ ಅತ್ಯಂತ ಹೆಚ್ಚು ಬೆಲೆಗೆ ಹರಾಜಾಗಿರುವುದು ಗಮನಿಸಬೇಕಾದ ಅಂಶ. ಕಾರ್ಕ್ ಮತ್ತು ಸೆಣಬಿನಿಂದ ಈ ಸ್ಯಾಂಡಲ್ಸ್ ತಯಾರಿಸಲಾಗಿದೆ. ಅನೇಕ ವರ್ಷಗಳ ಕಾಲ ಸ್ಟೀವ್ ಈ ಸ್ಯಾಂಡಲ್ಸ್ ಧರಿಸಿದ್ದರಿಂದ ಅವರ ಪಾದಗಳು ಅಚ್ಚಾಗಿವೆ. ಈಗ ಈ ಸ್ಯಾಂಡಲ್ಸ್ ಖರೀದಿಸಿದ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ.
ಬರ್ಕನ್ಸ್ಟಾಕ್ ಅರಿಝೋನಾ ಕಂಪೆನಿಯ ಸ್ಯಾಂಡಲ್ಗಳು 1970-1980ರ ಸಮಯದಲ್ಲಿ ಚಾಲ್ತಿಯಲ್ಲಿದ್ದವು. iಷ್ಟು ದಿನ ಸ್ಟೀವ್ ಜಾಬ್ನ ಹೌಸ್ ಮ್ಯಾನೇಜರ್ ಮಾರ್ಕ್ ಶೆಫ್ ಅವರ ಬಳಿ ಈ ಸ್ಯಾಂಡಲ್ಸ್ ಇದ್ದವು. ಜೂಲಿಯನ್ ಆಕ್ಷನ್ ಈ ಸ್ಯಾಂಡಲ್ಸ್ನ್ನು ಹರಾಜಿಗೆ ಇಡುವ ಮೊದಲು 2017ರಲ್ಲಿ ಇಟಲಿಯ ಮಿಲಾನೋದ ಅನೇಕ ಹರಾಜು ಪ್ರದರ್ಶನಗಳಲ್ಲಿ ಇವು ಕಾಣಿಸಿಕೊಂಡಿದ್ದವು. ಅಲ್ಲದೆ 2017ರಲ್ಲಿ ಜರ್ಮನಿ, ನ್ಯೂಯಾರ್ಕ್‌ನ ಸೋಹೋದ ಬಿರ್ಕನ್ಸ್ಟಾಕ್ನ ಸ್ಟೋರ್ಸ್ನಲ್ಲಿ, ಕೋಲ್ನ ಐಎಂಎಂನಲ್ಲಿ, ಜರ್ಮನಿಯ ಕಲೋನ್‌ನ ಪೀಠೋಪಕರಣ ಮೇಳದಲ್ಲಿ, 2018 ರಲ್ಲಿ ಬರ್ಲಿನ್ನಲ್ಲಿ ನಡೆದ ಡೈ ಝೀತ್ ಮ್ಯಾಗಝೀನ್ನ ಝೀಟ್ ಮೇಳದಲ್ಲಿ ಮತ್ತು ಇತ್ತೀಚೆಗೆ ಸ್ಟಟ್ಗಾರ್ಟ್ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲಿ ಹೀಗೆ ಎಲ್ಲ ಕಡೆ ಪ್ರದರ್ಶನಗೊಂಡು ಇದೀಗ ಈ ವೆಬ್ಸೈಟಿನಲ್ಲಿ ಕಾಣಿಸಿಕೊಂಡಿವೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:36 pm, Tue, 15 November 22