Viral Video : ಇವನ ಹೇರ್ಸ್ಟೈಲ್ಗೆ ಹೌಹಾರಿರುವ ಈ ಕೋತಿ
Monkey Shocked : ಕುಳಿತಲ್ಲಿಂದಲೇ ಒಮ್ಮೆ ಕೋತಿ ಹೆದರಿಸಿದ ಹಾಗೆ ಮಾಡಿದರೆ ಮನುಷ್ಯ ಗಾಬರಿಗೆ ಬಿದ್ದು ಓಡಿಬಿಡುತ್ತಾನೆ! ಆದರೆ ಇಲ್ಲಿ ಉಲ್ಟಾ ಆಗಿದೆ!
Viral Video : ಇವನ ಭುಜ ತಟ್ಟಿ ಮಾತನಾಡಿಸುತ್ತದೆ ಈ ಕೋತಿ. ಅವ ತನ್ನ ಟೋಪಿ ತೆಗೆಯುತ್ತಿದ್ದಂತೆ ಅವನ ಹೇರ್ಸ್ಟೈಲ್ ನೋಡಿದ ಕೋತಿ ಭಯಬಿದ್ದು, ಹಿಂದಿನ ಶೆಟರ್ಸ್ಗೆ ಅಪ್ಪಳಿಸಿದಂತೆ ಮಾಡುತ್ತದೆ. ಬುದ್ಧಿವಂತ ಪ್ರಾಣಿಗಳ ಪೈಕಿ ಕೋತಿಯೂ ಒಂದು. ಹಾಗಾಗಿಯೇ ಮನುಷ್ಯನ ಸಂಗದಲ್ಲಿ ಇರಲು ಇಚ್ಛಿಸುತ್ತವೆ ಈ ಕೋತಿಗಳು. ಈ ವಿಡಿಯೋ ಇನ್ಸ್ಟಾಗ್ರಾಂನ ಎನಿಮಲ್ಸ್ ಹಿಲೇರಿಯಸ್ ಎಂಬ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಟಿಕ್‌ಟಾಕ್‌ನಲ್ಲಿ ‘ಯುರಿಯಾಟೊಮೊಕಿ’ ಎಂಬುವವರು ಇದನ್ನು ಈ ಹಿಂದೆ ಪೋಸ್ಟ್ ಮಾಡಿದ್ದರು. ಈಗ ಈ ರೀಲ್ 1 ಮಿಲಿಯನ್ ವೀಕ್ಷಕರನ್ನು ಇನ್ಸ್ಟಾಗ್ರಾಂ ಮೂಲಕ ಪಡೆದಿದೆ. 65 ಸಾವಿರ ಲೈಕ್‌ಗಳೊಂದಿಗೆ ವೈರಲ್ ಆಗಿದೆ.
ಇದನ್ನೂ ಓದಿView this post on Instagram
ನಿಮಗೇನಾದರೂ ಆಘಾತವಾಯಿತಾ ಈ ವ್ಯಕ್ತಿಯ ಮೊನಚಾದ ಕೂದಲನ್ನು ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ