AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಯೊಂದು ಎಕ್ಸರೇ ತೆಗೆಸಿಕೊಳ್ಳಲು ಹೋದಾಗ; ನೆಟ್ಟಿಗರೆಲ್ಲ ಈ ಸೌಮ್ಯಜೀವಿಯನ್ನು ಆರಾಧಿಸುತ್ತಿದ್ದಾರೆ

X-ray : ಬಾ ಕೂತ್ಕೋ, ಹಾಗೇ ಮಲಗು, ಇಲ್ಲ ಸರಿಯಾಗಲಿಲ್ಲ, ಇನ್ನೊಂದು ಸಲ ಎದ್ದು ಮಲಗು... ಎಕ್ಸ್​ರೇ ರೂಮಿನಲ್ಲಿ ಟೆಕ್ನಿಷಿಯನ್​ ಹೀಗೆಲ್ಲ ಹೇಳುತ್ತ ಹೋದಂತೆ ಕೇಳುತ್ತ ಹೋಗಿದೆ ಈ ಸೌಮ್ಯ ಆನೆ. ನೋಡಿ ಅಪರೂಪದ ವಿಡಿಯೋ.

ಆನೆಯೊಂದು ಎಕ್ಸರೇ ತೆಗೆಸಿಕೊಳ್ಳಲು ಹೋದಾಗ; ನೆಟ್ಟಿಗರೆಲ್ಲ ಈ ಸೌಮ್ಯಜೀವಿಯನ್ನು ಆರಾಧಿಸುತ್ತಿದ್ದಾರೆ
ಎಕ್ಸ್​ರೇಗೆ ಒಳಗಾಗುತ್ತಿರುವ ಆನೆ
TV9 Web
| Updated By: ಶ್ರೀದೇವಿ ಕಳಸದ|

Updated on: Dec 08, 2022 | 10:03 AM

Share

Viral Video : ಈಗಲೂ ಆಸ್ಪತ್ರೆ ಎಂದರೆ ಎಷ್ಟೋ ಜನಕ್ಕೆ ಕೈಕಾಲು ನಡುಗುತ್ತವೆ. ಅದರಲ್ಲೂ ಪ್ರಯೋಗಾಲಯಕ್ಕೆ ಹೋಗುವುದೆಂದರೆ ಇನ್ನೂ ಭಯ. ಮನುಷ್ಯರಾದ ನಾವು ಹೇಗೋ ಧೈರ್ಯ ತಂದುಕೊಳ್ಳುತ್ತೇವೆ. ಆದರೆ ಕಾಡಿನ ಪ್ರಾಣಿಗಳಿಗೆ? ಊಹಿಸಲು ಅಸಾಧ್ಯವೇ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಈ ಆನೆ ಮಾತ್ರ ಸಮಾಧಾನದಿಂದ, ನಮ್ರತೆಯಿಂದ ಪ್ರಯೋಗಾಲಯಕ್ಕೆ ಹೋಗುತ್ತದೆ. ಯಂತ್ರಗಳನ್ನು, ಮನುಷ್ಯರನ್ನು ನೋಡಿ ಕಂಗಾಲಾಗುವುದಿಲ್ಲ. ಅಲ್ಲಿ ಹೇಗೆ ಹೇಳುತ್ತಾರೋ ಹಾಗೆ ಕೇಳುತ್ತದೆ. ಎಕ್ಸ್​ರೇ ತೆಗೆಸಿಕೊಳ್ಳುವಾಗ ಅದು ನೀಡುವ ಸಹಕಾರ ನಂಬಲಸಾಧ್ಯವೆನ್ನುವಂತಿದೆ.

ಬಹಳ ತಾಳ್ಮೆಯಿಂದ ಮನುಷ್ಯರೂ ನಾಚುವಂತೆ ವರ್ತಿಸಿದೆ ಈ ಆನೆ. ಬಹುಶಃ ಇಷ್ಟೊಂದು ತಿಳಿವಳಿಕೆ ಮತ್ತು ಸಹಕಾರದಿಂದ ನಡೆದುಕೊಂಡ ಇಂಥ ಆನೆಯನ್ನು ನೀವು ಈ ತನಕ ನೋಡಿಲ್ಲವೇನೋ. ಈತನಕ ಈ ವಿಡಿಯೋ ಅನ್ನು ಸುಮಾರು 8,000 ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕ ನಾನು ಇಷ್ಟು ಸಹಕಾರದಿಂದ ವರ್ತಿಸಿದ ಆನೆಯನ್ನು, ಪ್ರಾಣಿಯನ್ನು ನೋಡಿರಲೇ ಇಲ್ಲ ಎಂದಿದ್ದಾರೆ ಒಬ್ಬರು. ಈಕೆ ಬಹಳ ತಿಳಿವಳಿಕೆಯುಳ್ಳವಳಾಗಿದ್ದಾಳೆ ಎಂದಿದ್ದಾರೆ ಇನ್ನೊಬ್ಬರು. ಎಂಥ ಸೌಮ್ಯ, ಎಂಥ ಬುದ್ಧಿಶಕ್ತಿ, ಎಷ್ಟೊಂದು ವಿಶ್ವಾಸ, ಈಕೆಯ ನಂಬಿಕೆಗೆ ನಾವೆಲ್ಲ ಅರ್ಹರು ಎಂದಿದ್ದಾರೆ ಮಗದೊಬ್ಬರು. ಎಂಥ ಚೆಂದ, ಇಂಥ ಸೌಮ್ಯ ಪ್ರಾಣಿಗೆ ತೊಂದರೆ ಕೊಡಲು ಮನುಷ್ಯರಾದ ನಮಗೆ ಹೇಗೆ ಮನಸ್ಸಾಗುತ್ತದೆಯೋ. ನಾವು ಮನುಷ್ಯರು ಕ್ರೂರ ಸಂತತಿಯವರೇನೋ ಎನ್ನಿಸುತ್ತದೆ ಪ್ರಾಣಿಗಳಿಗೆ ತೊಂದರೆ ಕೊಡುವಾಗ.

ಸೌಮ್ಯವರ್ತನೆಯಿಂದ ಆನೆಯ ಮೇಲೆ ಪ್ರೀತಿ ಉಂಟಾಗಿ ಮತ್ತೆ ಮತ್ತೆ ವಿಡಿಯೋ ನೋಡಬೇಕು ಅನ್ನಿಸುತ್ತಿದೆಯಲ್ಲ ನಿಮಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ