2022ರಲ್ಲಿ ಜಗತ್ತಿನಾದ್ಯಂತ ಗೂಗಲಪ್ಪನ ಹೊಟ್ಟೆಯಲ್ಲಿ ಅತೀ ಹೆಚ್ಚು ಹುಡುಕಿದ್ದು ಪನೀರ್ನ ಈ ರೆಸಿಪಿಯನ್ನು!
Google's ‘Year in search 2022’ : ಎರಡನೇ ಸ್ಥಾನದಲ್ಲಿ ಹೋಮ್ ಮೇಡ್ ಕೇಕ್. ಮೂರನೇ ಸ್ಥಾನದಲ್ಲಿ ತುಜ್ಲು ಕುರಾಬಿಯೇ ಟರ್ಕಿಶ್ ಬಿಸ್ಕೆಟ್. ನಾಲ್ಕನೇ ಸ್ಥಾನದಲ್ಲಿ ಓವರ್ನೈಟ್ ಓಟ್ಸ್. ಐದನೇ ಸ್ಥಾನದಲ್ಲಿ ಜರ್ಮನ್ನ ಜಿಮ್ಶೆಚೆಕ್ನ್. ಒಂದನೇ ಸ್ಥಾನದಲ್ಲಿ?
Viral : ಪನೀರ್! ಸರೀರಾತ್ರಿಯ ನಿದ್ದೆಗಣ್ಣಲ್ಲಿ ನಿಮ್ಮ ಕಿವಿಯಲ್ಲಿ ಹೀಗೊಂದು ಶಬ್ದ ಉಸುರಿದರೂ ಸಾಕು. ಹಾಂ ಎಲ್ಲಿ? ಎಂದು ಹುಡುಕಿಕೊಂಡೇ ಬಂದುಬಿಡುತ್ತೀರಿ. ಹಾಗೊಂದು ಮಾಂತ್ರಿಕರುಚಿ ಈ ಖಾದ್ಯಕ್ಕಿದೆ. ಹಾಗಾಗಿಯೇ 2022ರಲ್ಲಿ ಜಗತ್ತಿನ ಜನರೆಲ್ಲ ಗೂಗಲ್ ತುಂಬಾ ಅತೀ ಹೆಚ್ಚು ಹುಡುಕಿದ್ದು ಪನೀರ್ನ ಈ ರೆಸಿಪಿಯನ್ನೇ. ಪ್ರತೀ ವರ್ಷಾಂತ್ಯದಲ್ಲಿ ಗೂಗಲ್ ಸರ್ಚ್ ಎಂಜಿನ್ ಪಟ್ಟಿಯನ್ನು ಪ್ರಕಟಿಸುತ್ತದೆ. ಅಂತೆಯೇ Google’s ‘Year in search 2022’ ಪಟ್ಟಿಯಲ್ಲಿ ಈ ಬಾರಿ ‘ಪನೀರ್ ಪಸಂದ್’ ಪ್ರಥಮಸ್ಥಾನ ಪಡೆದುಕೊಂಡಿದೆ.
ಮೊಘಲರ ಆಳ್ವಿಕೆಯಲ್ಲಿ ಭಾರತದಲ್ಲಿ ಈ ಪನೀರ್ ಖಾದ್ಯಗಳು ಚಾಲ್ತಿಗೆ ಬಂದವು. ಅಷ್ಟೇ ಅಲ್ಲ ಬಾಂಗ್ಲಾ ಮತ್ತು ಪಾಕಿಸ್ತಾನದಲ್ಲಿ ಕೂಡ ಈ ಖಾದ್ಯಗಳು ಹೆಚ್ಚು ಜನಪ್ರಿಯಗೊಂಡವು. ಅಂದಿನಿಂದ ಇಂದಿನವರೆಗೂ ತನ್ನ ರುಚಿಯನ್ನು ಜನರ ನಾಲಗೆಯ ಮೇಲೆ ಕಾಯ್ದುಕೊಂಡು ಬಂದಿದೆ ಈ ಪನೀರ್. ಗೂಗಲ್ ಪ್ರತೀ ವರ್ಷದಂತೆ ತನ್ನ ಎಂಜಿನ್ನಲ್ಲಿ ಯಾರು ಏನೆಲ್ಲ ಹುಡುಕಾಡಿದ್ದಾರೆ ಎಂದು ಲೆಕ್ಕ ಹಾಕುವಾಗ ಸಿಕ್ಕಿದ್ದು ಈ ಪನೀರ್ ಪಸಂದ್. ಅದರಲ್ಲೂ ಏಪ್ರಿಲ್ನಲ್ಲಿ ಹೆಚ್ಚು ಜನ ಈ ರೆಸಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ : ಗೋಧೂಳಿಯ ಮಾಂತ್ರಿಕತೆ; ಅಕ್ಕನ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಗೂಗಲ್ನ ಟಾಪ್ ರೆಸಿಪಿಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಪನೀರ್ ಪಸಂದ್. ಎರಡನೇ ಸ್ಥಾನದಲ್ಲಿ ಹೋಮ್ ಮೇಡ್ ಕೇಕ್ ಕೊಸೈರೋ ಇದೆ. ಮೂರನೇ ಸ್ಥಾನದಲ್ಲಿ ತುಜ್ಲು ಕುರಾಬಿಯೇ ಎಂಬ ಟರ್ಕಿಶ್ ಖಾರದ ಬಿಸ್ಕೇಟ್ಗಳಿವೆ. ನಾಲ್ಕನೇ ಸ್ಥಾನದಲ್ಲಿ ಓವರ್ನೈಟ್ ಓಟ್ಸ್ ಇದೆ. ಜರ್ಮನ್ನ ದಾಲ್ಚಿನ್ನಿ ರೋಲ್ ಜಿಮ್ಶೆಚೆಕ್ನ್ ಐದನೇ ಸ್ಥಾನದಲ್ಲಿದೆ.
ಭಾರತದಲ್ಲಿ ಪನೀರ್ ಪಸಂದ್ ಜೊತೆ ಮೋದಕ, ಚಿಕನ್ ಸೂಪ್, ಮಲೈ ಕೋಫ್ತಾ ಕೂಡ ಇವೆ. ನೀವೀಗ ನೆನಪಿಸಿಕೊಳ್ಳಿ ಯಾವೆಲ್ಲ ರೆಸಿಪಿಗಳನ್ನು ಗೂಗಲ್ನಲ್ಲಿ ಹುಡುಕಿದಿರಿ ಎಂದು?
ಮತ್ತಷ್ಟೂ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:31 pm, Wed, 7 December 22