AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್

Viral Video : ಮನೆಗೆ ಬಂದವರು ಹೋಗಬಾರದು ಅಷ್ಟೇ! ಸಣ್ಣಮಕ್ಕಳಂತೆ ಆಡುತ್ತವೆ ಈ ನಾಯಿಗಳು. ಅದರಲ್ಲೂ ಈ ಗೋಲ್ಡನ್ ರಿಟ್ರೈವರ್​ ಕೇಳಬೇಕೆ? ನೋಡಿ ಇಲ್ಲಿ ಅಜ್ಜಿಯನ್ನು ಊರಿಗೆ ಹೋಗದಂತೆ ಹೇಗೆ ತಡೆಯುತ್ತಿದೆ.

ನಿನ್ನನ್ನು ಊರಿಗೆ ಹೋಗೋದಕ್ಕೆ ಬಿಡಲ್ಲ ಅಜ್ಜಿ; ಗೋಲ್ಡನ್​ ರಿಟ್ರೈವರ್ ವಿಡಿಯೋ ವೈರಲ್
ನೀ ಊರಿಗೆ ಹೋಗಬೇಡ ಅಜ್ಜಿ
TV9 Web
| Updated By: ಶ್ರೀದೇವಿ ಕಳಸದ|

Updated on: Dec 08, 2022 | 2:26 PM

Share

Viral Video : ಅಜ್ಜಿಯ ವಾತ್ಸಲ್ಯ, ಅಕ್ಕರೆ ಎಂದರೆ ಸುಮ್ಮನೇನಾ? ಮಕ್ಕಳಷ್ಟೇ ಏಕೆ ಪ್ರಾಣಿಗಳೂ ಆಕೆಯ ಸಾನಿಧ್ಯವನ್ನು ಬಹಳ ಪ್ರೀತಿಸುತ್ತವೆ. ನಮ್ಮನ್ನು ಕಾಯುವ ದೊಡ್ಡ ದೈವ ಆಕೆ ಎಂಬಂಥ ಭದ್ರಭಾವ ಆಕೆಯ ಮಡಿಲಲ್ಲಿ ಸಿಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ಅಜ್ಜಿ ಊರಿಗೆ ಹೊರಟು ನಿಂತಿದ್ದಾರೆ. ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ಧಾರೆ. ಇದನ್ನು ನೋಡಿದ ಗೋಲ್ಡನ್​ ರಿಟ್ರೈವರ್, ನೀ ಊರಿಗೆ ಹೋಗಬೇಡ. ನಾ ನಿನ್ನನ್ನು ಹೋಗೋದಕ್ಕೆ ಬಿಡುವುದಿಲ್ಲ ಎಂದು ಮುದ್ದಿನಿಂದ ಒತ್ತಾಯಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Murphy | Golden Retriever ? (@thepawsomelifeofmurphy)

ಮುಫು ಎಂಬ ಈ ಮುದ್ದಾದ ನಾಯಿಗೆ ಯಾರು ಹೇಳಿದರು ಇದೆಲ್ಲವನ್ನೂ ಅರ್ಥ ಮಾಡಿಕೋ ಎಂದು? ಅಜ್ಜಿ ಬ್ಯಾಗಿಗೆ ತನ್ನ ಬಟ್ಟೆಗಳನ್ನು ತುಂಬುತ್ತಿದ್ದಂತೆ ಅವರನ್ನು ಹೋಗದಿರುವಂತೆ ತಡೆಯುವ ಪ್ರಯತ್ನ ನೋಡಿ, ಎಂಥ ಮುದ್ದಾಗಿದೆ. ಈ ವಿಡಿಯೋ ಅನ್ನು 6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮನುಷ್ಯನ ಮನಸ್ಸನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಮತ್ತು ಸ್ಪಂದಿಸುವ ಮನೋಭಾವ ಎಲ್ಲ ಪ್ರಾಣಿಗಳಿಗಿಂತ ನಾಯಿಗಳಲ್ಲಿ ಹೆಚ್ಚು. ನೀವಾಗಿಯೇ ಮಾತನಾಡಿಸಬೇಕು ಎನ್ನುವ ಅಹಂ ಆಗಲಿ ಗತ್ತು ಆಗಲಿ ಇವುಗಳಲ್ಲಿ ಇರುವುದಿಲ್ಲ. ಅತ್ಯಂತ ವಿನಮ್ರ, ವಿಧೇಯ ಪ್ರಾಣಿ ನಾಯಿ. ಅದರಲ್ಲಿಯೂ ಗೋಲ್ಡನ್​ ರಿಟ್ರೈವರ್​ ನಾಯಿಗಳಂತೂ ಎಷ್ಟೇ ದೊಡ್ಡವಾದರೂ ತನ್ನನ್ನು ಮಗುವಿನಂತೆಯೇ ಅಚ್ಛಾ ಮಾಡು ಎಂದು ದುಂಬಾಲು ಬೀಳುವಂಥವು.

ಮನೆಯಲ್ಲಿರುವ ಯಾರೂ ಅದನ್ನು ಬಿಟ್ಟು ಎಲ್ಲಿಯೂ ಹೋಗಕೂಡದು. ಸದಾ ತನ್ನನ್ನೇ ಮುದ್ದು ಮಾಡಿಕೊಂಡಿರು ಎಂಬಂತೆ ವರ್ತಿಸುತ್ತವೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!