ಗಡಗಡಗಡ; ನಾ ಬೆಚ್ಚಗಿಡ್ತೀನಿ ನಿನ್ನ, ಸುಮ್ನಿರು ಮೇಕೆ
Viral Video : ‘ತುಂಬಾ ಚಳಿ ಇದೆ. ಬಾ ನಾನು ನಿನಗೆ ಬೆಚ್ಚಗೆ ಮಾಡ್ತೀನಿ’ ಪುಟ್ಟಪುಟ್ಟ ಕೈಗಳಿಂದ ಮೇಕೆಯ ಕೈಕಾಲುಗಳನ್ನು ಬೆಚ್ಚಗಾಗಿಸುತ್ತಿದ್ದಾನೆ ಈ ಪುಟ್ಟಣ್ಣ. ಎಷ್ಟು ಸಲ ನೋಡಿದರೂ ನೋಡಬೇಕೆನ್ನಿಸುತ್ತದೆ ಈ ವಿಡಿಯೋ.
Viral Video : ಹೊರಗೆ ಬಿಸಿಲಿದ್ದರೂ ಎಂಥ ಚಳಿ ಇದೆ. ಕಾಲು ಕೆಳಗಿಟ್ಟರೆ ಜುಣುಜುಣು, ನೀರು ಮುಟ್ಟಿದರೆ ಗಡಗಡ. ರಾತ್ರಿಹಗಲೂ ಚಳಿಯೇ ಚಳಿ. ಈ ಪುಟ್ಟ ಹುಡುಗನೊಬ್ಬ ಫೈರ್ ಕ್ಯಾಂಪಿನೆದುರು ಕುಳೀತಿದ್ದಾನೆ. ಮಡಿಲೊಳಗೆ ಮೇಕೆಮರಿಯೊಂದನ್ನು ಇಟ್ಟುಕೊಂಡು ಪುಟ್ಟ ಕೈಗಳಿಂದ ಕಾವು ಕೊಡುತ್ತಿದ್ದಾನೆ. ಅದೂ ಸುಮ್ಮನೇ ಕಾವು ಕೊಡಿಸಿಕೊಳ್ಳುತ್ತಿದೆ. ಎಂಥ ಮುದ್ಧಾಗಿದೆ ಈ ವಿಡಿಯೋ.
ठंड सबको लगती है ?❤️ pic.twitter.com/2mwYSWJwVh
— ज़िन्दगी गुलज़ार है ! (@Gulzar_sahab) December 4, 2022
15,000ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಎಂಥ ಚಳಿಯೂ ಓಡಿಹೋಗುವಂತಿದೆ. ನೋಡುತ್ತಿದ್ದಂತೆ ಬೆಚ್ಚನೆಯ ಭಾವ ಆವರಿಸುವುದರಲ್ಲಿ ಸಂದೇಹವೇ ಇಲ್ಲ. ಎಷ್ಟು ಶ್ರದ್ಧೆ, ಪ್ರೀತಿ, ಅಕ್ಕರೆಯಿಂದ ಮರಿಗೆ ಕಾವು ಕೊಡುತ್ತಿದ್ದಾನೆ ಈ ಪುಟ್ಟ. ನೆಟ್ಟಿಗರೆಲ್ಲ ಈ ಹುಡುಗನಿಗೆ ಶಭಾಷ್ ಎನ್ನುತ್ತಿದ್ದಾರೆ.
ಮರಿಯಾದರೂ ಎಷ್ಟು ಸಮಾಧಾನದಿಂದ ಅವನ ಮೇಲೆ ಕುಳಿತಿದೆ. ಹೀಗದು ಕುಳಿತಿದೆಯೆಂದರೆ ಅವನ ಮೇಲೆ ಅದೂ ಕೂಡ ಎಷ್ಟು ವಿಶ್ವಾಸ ಪ್ರೀತಿ ಇಟ್ಟಿರಬಹುದು. ಕಥೆ ಹೇಳುವ ಸಮಯವಿದು. ಈ ಕರುಣೆ ಎಂದಿಗೂ ಈ ಬಾಲಕನ ಭವಿಷ್ಯವನ್ನು ಉತ್ತಮವಾಗಿಸುತ್ತದೆ ಎಂದಿದ್ದಾರೆ ಒಬ್ಬರು. ನನ್ನ ಮಗ ಕೂಡ ಹೀಗೆಯೇ ಮಾಡುತ್ತಾನೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ
Published On - 4:37 pm, Thu, 8 December 22