AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ವತಾರೋಹಣದಲ್ಲಿ ದಾಖಲೆ ಬರೆದ ಕೊಪ್ಪಳದ ಸೈನಿಕ ವೀರೇಶ ಗಾದಿಗನೂರ

Indian Army : ಮೂರು ದಿನಗಳಲ್ಲಿ ಹಿಮಾಲಯದ ಮೂರು ಶಿಖರಗಳು ಸೇರಿದಂತೆ ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ.

ಪರ್ವತಾರೋಹಣದಲ್ಲಿ ದಾಖಲೆ ಬರೆದ ಕೊಪ್ಪಳದ ಸೈನಿಕ ವೀರೇಶ ಗಾದಿಗನೂರ
ವೀರೇಶ ಗಾದಿಗನೂರ
TV9 Web
| Edited By: ಶ್ರೀದೇವಿ ಕಳಸದ|

Updated on:Dec 08, 2022 | 6:18 PM

Share

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ 39 ವರ್ಷದ ವೀರೇಶ ಪಿ. ಗಾದಿಗನೂರ ಎಂಬುವವರು ಮೆಂಟಾಕ್​ ಪರ್ವತಾರೋಹಣ ಮಾಡಿ ದಾಖಲೆ ಮಾಡಿದ್ಧಾರೆ. ಇವರು 2202ರ ಜನವರಿಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಜೂನ್​ನಲ್ಲಿ ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಪರ್ವತಾರೋಹಣ ಮಾಡಿದ್ದರು. ಕರ್ತವ್ಯದಲ್ಲಿ ನಿರತರಾಗಿದ್ದಾಗ ಹೊಸ ದಾರಿಗಳನ್ನು ಹುಡುಕುವುದರ ಕಡೆಗೆ ಇವರ ಆಸಕ್ತಿ ಇರುತ್ತಿತ್ತು. ಇದೇ ಮುಂದೆ ಅವರನ್ನು ಪರ್ವತಾರೋಹಣದೆಡೆ ಸೆಳೆಯಿತು.

ಮೂರು ದಿನಗಳಲ್ಲಿ ಮೂರು ಶಿಖರಗಳು ಸೇರಿದಂತೆ 11 ಮೆಂಟಾಕ್​ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ. ಈತನಕ 2017ರಲ್ಲಿ ಸಿಯಾಚಿನ್​ನಲ್ಲಿ ಮೌಂಟ್​ ಕಾಮೆಟ್​, ಮೌಂಟ್​ ಭಾಗೀರಥಿ, ಮೌಂಟ್​ ಜೋಗಿನ್​ ಸೇರಿದಂತೆ 39 ಪರ್ವತಗಳ ಆರೋಹಣ ಮಾಡಿದ್ದಾರೆ. 2017ರಲ್ಲಿ ಲಡಾಕ್​, ಸ್ಟಾಕ್​ ಕಾಂಗ್ರಿ ಪರ್ವತಾರೋಹಣವನ್ನು ನಾಲ್ಕು ದಿನಗಳಲ್ಲಿ ಇಬ್ಬರೊಂದಿಗೆ 6,000 ಮೀಟರ್ ಎತ್ತರದ 17 ಪರ್ವತಗಳ ಆರೋಹಣ ಮಾಡಿದ್ದಾರೆ. ಏಷ್ಯಾ ಬುಕ್  ಆಫ್​ ರೆಕಾರ್ಡ್ಸ್​ ಮತ್ತು ನೋಬಲ್ ವರ್ಲ್ಡ್​ ರೆಕಾರ್ಡ್ಸ್​ ಮತ್ತು ವರ್ಲ್ಡ್​ ಬುಕ್ ಆಫ್​ ರೆಕಾರ್ಡ್ಸ್​ ನಲ್ಲಿ ಇದು ದಾಖಲಾಗಿದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಾನು 2010ರಲ್ಲಿ ಪರ್ವತಾರೋಹಣ ತರಬೇತಿಗೆ ಸೇರಿದಾಗ ನನಗೆ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಆದರೆ ಕ್ರಮೇಣ ಇದು ಎಷ್ಟು ಸಾಹಸಮಯ ಎಂಬುದನ್ನು ಅರಿಗುಕೊಳ್ಳುತ್ತಾ ಹೋದೆ. ಈ ಪರ್ವತಾರೋಹಣ ಮಾಡಿ ತ್ರಿವರ್ಣ ಧ್ವಜ ಹಾರಿಸಿದಾಗ ನಿಜಕ್ಕೂ ಸಂತಸ ಮತ್ತು ಹೆಮ್ಮೆಯ ವಿಷಯ ಎನ್ನಿಸಿತು’ ಎಂದಿದ್ಧಾರೆ ವೀರೇಶ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:13 pm, Thu, 8 December 22

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ