AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ

ಮನುಷ್ಯ ಹಾಗೂ ಮೂಕ ಪ್ರಾಣಿಗಳ ನಡುವಿನ ನಿಷ್ಕಲ್ಮಶ ಸಂಬಂಧವನ್ನು ವಿವರಿಸಲು ಅಸಾಧ್ಯ. ನೀವು ಅವುಗಳನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಂಡರೆ ಅವು ನಿಮ್ಮ ಜತೆಗೆ ಜೀವನ ಪರ್ಯಂತ ಇರುತ್ತವೆ. ಇದೀಗ ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಯುವಕನಿಗೆ ಶ್ವಾನವೊಂದು ಸಾಂತ್ವನ ನೀಡಿದೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ವೈರಲ್ ಆಗಿದೆ.

Video: ತಂದೆಯ ಅಗಲುವಿಕೆಯ ನೋವಿನಲ್ಲಿದ್ದ ಯುವಕನಿಗೆ ಸಾಂತ್ವನ ನೀಡಿದ ಶ್ವಾನ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 14, 2026 | 11:28 AM

Share

ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ (Dog). ಈ ಶ್ವಾನಗಳ ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಈ ಮೂಕಪ್ರಾಣಿಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಮನೆ ಮಾಲೀಕ ದುಃಖದಲ್ಲಿದ್ದರೆ ತನ್ನದೇ ರೀತಿ ಕಾಳಜಿ ವಹಿಸುತ್ತದೆ, ಸಮಾಧಾನ ಮಾಡುತ್ತದೆ. ಇದೀಗ ಇಂತಹದ್ದೇ ಕ್ಷಣದ ವಿಡಿಯೋ ವೈರಲ್ ಆಗಿದೆ. ಶ್ವಾನವೊಂದು ಯುವಕನಿಗೆ ಸಮಾಧಾನ ಮಾಡಿದೆ. ತಂದೆಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಯುವಕನಿಗೆ ಧೈರ್ಯ ತುಂಬಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ಲಕ್ಕಿ (Lucky) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾನೆ. ಮಲಗಿರುವ ಯುವಕನ ಪಕ್ಕದಲ್ಲಿ ಕುಳಿತುಕೊಂಡಿರುವ ಶ್ವಾನವು ಆತನ ಮುಖವನ್ನು ನೆಕ್ಕುತ್ತ ಪ್ರೀತಿ ತೋರಿಸಿದೆ. ಈ ದೃಶ್ಯವು ಯುವಕನಿಗೆ ಸಾಂತ್ವನ ನೀಡುವಂತಿದೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Lucky (@luckybrief.in)

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ಕ್ಲಿಪಿಂಗ್ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಪ್ರಾಮಾಣಿಕ ಪ್ರೀತಿ ಎಂದರೆ, ಮತ್ತೊಬ್ಬರು, ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಷ್ಠೆಗೆ ಮತ್ತೊಂದು ಹೆಸರೇ ಈ ಶ್ವಾನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Tue, 14 July 26

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ