ಟವೆಲ್ ಸುತ್ತಿಕೊಂಡೇ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಯುವಕ; ವಿಡಿಯೋ ವೈರಲ್

Delhi Metro : ‘ನಮ್ಮ ಮನೆಯ ಟ್ಯಾಂಕಿನಲ್ಲಿ ನೀರು ಖಾಲಿಯಾಗಿದೆ. ಆಫೀಸಿಗೆ ಹೋಗಿ ಸ್ನಾನ ಮಾಡುತ್ತೇನೆ.’ ಎಂದು ಟವೆಲ್ ಸುತ್ತಿಕೊಂಡು ದೆಹಲಿಯ ಮೆಟ್ರೋ ರೈಲನ್ನು ಹತ್ತಿದ್ದಾರೆ ಈ ಯುವಕ. ಮುಂದೆ?

ಟವೆಲ್ ಸುತ್ತಿಕೊಂಡೇ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಯುವಕ; ವಿಡಿಯೋ ವೈರಲ್
ಟವೆಲ್ ಸುತ್ತಿಕೊಂಡೇ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಯುವಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 09, 2022 | 3:46 PM

Viral Video : ಶರ್ಟ್​ ಹಾಕಿಕೊಂಡು ಟವೆಲ್ ಸುತ್ತಿಕೊಂಡು ಬಂದಿದ್ದರೆ ಪ್ಯಾಂಟ್ ಹಾಕಿಕೊಳ್ಳಲು ಮರೆತಿದ್ದಾರೆ ಎನ್ನಬಹುದಿತ್ತು. ಆದರೆ ಈತ ಶರ್ಟನ್ನೂ ಹಾಕಿಲ್ಲ ಪ್ಯಾಂಟನ್ನೂ. ಟವೆಲ್ ಸುತ್ತಿಕೊಂಡು ಬಂದಿದ್ದು ಯಾಕೆ ಹಾಗಿದ್ದರೆ? ನೆಟ್ಟಿಗರೆಲ್ಲ ಒಂದೇ ಸಮ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೆಹಲಿಯ ಮೆಟ್ರೋ ರೈಲಿನಲ್ಲಿ ಇವರು ಹೀಗೇ ಈ ಅವತಾರದಲ್ಲಿಯೇ ಪ್ರಯಾಣಿಸಿದ ಉದ್ದೇಶವೇನು? ಅಲ್ಲಿದ್ದ ಪ್ರಯಾಣಿಕರಿಗೆಲ್ಲ ಇದು ಅತಿರೇಕ ಎನ್ನಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ??मोहित गौहर ?? (@mohitgauhar)

ಮನೆಯ ಟ್ಯಾಂಕ್​ನಲ್ಲಿ ನೀರು ಖಾಲಿಯಾಗಿತ್ತು, ಹಾಗಾಗಿ ನಾನು ಈವತ್ತು ಆಫೀಸಿನಲ್ಲಿಯೇ ಸ್ನಾನ ಮಾಡೋಣ ಎಂದು ಹೊರಟಿದ್ದೇನೆ-  ಎಂಬ ನೋಟ್​ ಬರೆದು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ ಮೋಹಿತ್​ ಗೌಹಾರ್ ಎನ್ನುವವರು. 3 ಮಿಲಿಯನ್​ ಜನ ನೋಡಿದ್ದಾರೆ ಈ ವಿಡಿಯೋ ಅನ್ನು.

ನೋಡದೆ ಇನ್ನೇನು? ಯಾರಾದರೂ ಹೀಗೆ ಟವೆಲ್ ಸುತ್ತಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರಾ? ಹುಚ್ಚೋ, ಬೆಪ್ಪೋ, ಇನ್ನೊಂದೇನೋ ಅಂತ ಅನ್ನಿಸೋದು ಸಹಜ ಅಲ್ವಾ? ಸುಮ್ಮನೆ ಒಂದುಕಡೆ ನಿಂತಿದ್ದರೆ ಆ ಮಾತು ಬೇರೆ. ತನ್ನ ಮುಖ ಕಂಡಲ್ಲಿ ಕೂದಲು ಸರಿ ಮಾಡಿಕೊಳ್ಳುವುದು, ಕಂಪಾರ್ಟ್​ಮೆಂಟ್​ ತುಂಬಾ ಓಡಾಡುವುದು ಹೀಗೆ ಅಲ್ಲಿದ್ದ ಎಲ್ಲರ ಗಮನ ಸೆಳೆಯಲು ನೋಡುವುದು.

ಇದನ್ನೂ ನೋಡಿ : 12 ವರ್ಷಗಳ ನಂತರ ತನ್ನ ಮನೆಗೆ ಬಂದ ಯುವಕ; ವಿಡಿಯೋ ವೈರಲ್

ನೆಟ್ಟಿಗರಂತೂ ತಮಗೆ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ವ್ಯಂಗ್ಯವಾಡಿದ್ಧಾರೆ. ಇನ್ನೂ ಹಲವರು ಶ್ಲಾಘಿಸಿದ್ಧಾರೆ. ಶಭಾಷ್​! ಹೀಗೆ ಓಡಾಡೋದಕ್ಕೆ ಧೈರ್ಯ ಬೇಕು, ಮೆಚ್ಚಿದೆ ಎಂದಿದ್ದಾರೆ ಮತ್ತೊಬ್ಬರು. ಅತಿಯಾದ ಆತ್ಮವಿಶ್ವಾಸ ಬೇಕು ಹೀಗೆಲ್ಲಾ ಮಾಡಲು ಅದು ನಿಮಗಿದೆ ಎಂದಿದ್ದಾರೆ ಮಗದೊಬ್ಬರು.

ಅಂದಹಾಗೆ ಮೋಹಿತ್ ವಿಡಿಯೋ ಕ್ರಿಯೇಟರ್​ ಎಂದು ಇವರ ಇನ್​ಸ್ಟಾ ಬಯೋ ಹೇಳುತ್ತದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ   

Published On - 3:00 pm, Fri, 9 December 22

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು