Parle-G Biscuit Halwa: ಸಾಮಾಜಿಕ ಜಾಲತಾಣದಲ್ಲಿ ಪಾರ್ಲೆ-ಜಿ ಬಿಸ್ಕೆಟ್ ಹಲ್ವಾ ರೆಸಿಪಿ ವೈರಲ್
ನೀವು ಸಾಮಾನ್ಯವಾಗಿ ಕ್ಯಾರೆಟ್ ಹಲ್ವಾ ಕೇಳಿರ್ತಿರಾ ಕೇಳಿರ್ತಿರಾ, ಆದ್ರೇ ಪಾರ್ಲೆ-ಜಿ ಬಿಸ್ಕೆಟ್ ಹಲ್ವಾ ಎಂದಾದರೂ ಕೇಳಿದ್ದೀರಾ? ಈ ಸ್ಟೋರಿ ನೋಡಿ.
ಸಾಮಾಜಿಕ ಜಾಲತಾಣ(Social Media) ದಲ್ಲಿ ಪ್ರತಿ ದಿನ ಲಕ್ಷಾಂತರ ವಿಡಿಯೋ ಪೋಸ್ಟ್ ಗಳು ಹರಿದಾಡುತ್ತಾ ಇರುತ್ತದೆ. ಆದರೆ ಅದರಲ್ಲಿ ಕೆಲವೊಂದಿಷ್ಟು ವಿಡಿಯೋಗಳು ಸಖತ್ತ್ ಸದ್ದು ಮಾಡುತ್ತದೆ. ಒಂದು ಪಾಸಿಟಿವ್ ಆಗಿರಲುಬಹುದು ಅಥವಾ ನೆಗೆಟಿವ್ ಆಗಿರಲುಬಹುದು. ಅಂತದ್ದೇ ಒಂದು ಸುದ್ದಿ ಇಲ್ಲಿದೆ. ಅದುವೇ ಪಾರ್ಲೆ-ಜಿ ಬಿಸ್ಕೆಟ್ ಹಲ್ವಾ ರೆಸಿಪಿ. ರೆಸಿಪಿ ಎಂದಾಕ್ಷಣ ಒಳ್ಳೇ ಸುದ್ದಿ ಅನ್ಕೊಂಡ್ರಾ. ಇದು ನೆಗೆಟಿವ್ ಕಾಮೆಂಟ್ ಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿದೆ.
ನೀವು ಸಾಮಾನ್ಯವಾಗಿ ಕ್ಯಾರೆಟ್ ಹಲ್ವಾ ಕೇಳಿರ್ತಿರಾ ಕೇಳಿರ್ತಿರಾ, ಆದ್ರೇ ಪಾರ್ಲೆ-ಜಿ ಬಿಸ್ಕೆಟ್ ಹಲ್ವಾ ಎಂದಾದರೂ ಕೇಳಿದ್ದೀರಾ? ಈ ಸ್ಟೋರಿ ನೋಡಿ.
ನಿಮ್ಮಲ್ಲಿ ಅನೇಕ ಜನರಿಗೆ ಸಂಜೆಯ ಚಹಾದೊಂದಿಗೆ ಅದ್ದಿ ತಿನ್ನಲು ಪಾರ್ಲೆ-ಜಿ ಬಿಸ್ಕತ್ತು ಬೇಕೇ ಬೇಕು. ಬಿಸ್ಕೆಟ್ ಮೇಲಿನ ಪ್ರೀತಿಗೆ ಹೊಸ ಹೊಸ ರೆಸಿಪಿ ಪ್ರಯೋಗಗಳು ಈಗಾಗಲೇ ನಡೆಯುತ್ತಿದ್ದು, ಇದೀಗಾ ಪಾರ್ಲೆ-ಜಿ ಬಿಸ್ಕತ್ತು ಹಲ್ವಾ ವಿಲಕ್ಷಣ ಆಹಾರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಟ್ವಿಟರ್ ಬಳಕೆದಾರ ಮೊಹಮ್ಮದ್ ಫ್ಯೂಚರ್‌ವಾಲಾ ಅವರು ಹಂಚಿಕೊಂಡಿರುವ ಪಾರ್ಲೆ-ಜಿ ಬಿಸ್ಕೆಟ್ ಹಲ್ವಾ ವೀಡಿಯೊ ಇಲ್ಲಿದೆ.
Parle G biscuit ka halwa kha lo friendzzzz??? Good morning G? pic.twitter.com/ZRuCQDNiCJ
— Mohammed Futurewala (@MFuturewala) December 8, 2022
ಪಾರ್ಲೆ-ಜಿ ಬಿಸ್ಕೆಟ್ ಹಲ್ವಾ ರೆಸಿಪಿ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಇಷ್ಟ ಪಡುವುದಕಿಂತ ಹೆಚ್ಚಾಗಿ ಸಾಕಷ್ಟು ಜನರಲ್ಲಿ ಅಸಹ್ಯ ಹುಟ್ಟಿಸಿದೆ. ಟ್ವಿಟರ್ ಬಳಕೆದಾರ ಮೊಹಮ್ಮದ್ ಫ್ಯೂಚರ್‌ವಾಲಾ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಎರಡು ಪ್ಯಾಕ್ ಬಿಸ್ಕತ್ತುಗಳನ್ನು ಬಾಣಲೆಯಲ್ಲಿ ತುಪ್ಪದಲ್ಲಿ ಹುರಿಯಲಾಗುತ್ತದೆ. ಬಿಸ್ಕೆಟ್ ಗಳು ದಟ್ಟವಾದ ಕಂದು ಬಣ್ಣಕ್ಕೆ ತಿರುಗಿದಾಗ, ಬಿಸ್ಕೆಟ್ ಬಟ್ಟಲಿಗೆ ವರ್ಗಾಯಿಸುತ್ತಾರೆ. ಇದು ತಣ್ಣಗಾದ ನಂತರ ಅವುಗಳನ್ನು ಪುಡಿ ಮಾಡಲಾಗುತ್ತದೆ. ನಂತರ ಇದನ್ನು ಸಕ್ಕರೆ ಪಾಕದಲ್ಲಿ ಬೆರೆಸಿ ಹಲ್ವಾ ತಯಾರಿಸಲಾಗುತ್ತದೆ.
ಇದನ್ನು ಓದಿ: ಚಾಕೊಲೇಟ್ ಗುಲಾಬ್ ಜಾಮೂನ್ ವೀಡಿಯೊ ಇದೀಗಾ ಸಖತ್ ವೈರಲ್
ಈ ಕ್ಲಿಪ್ ಟ್ವಿಟರ್‌ನಲ್ಲಿ 1,700 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದಕ್ಕೆ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾಗಿ ಕಂಡುಬಂದಿದೆ. ಸಾಕಷ್ಟು ಟ್ವಿಟರ್ ಬಳಕೆದಾರರು ಇಷ್ಟಪಡದಿರುವ ಬಟನ್(Unlike button) ಪ್ಲೀಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: