Aloo Halwa: ಅತ್ಯಂತ ಸುಲಭವಾಗಿ ಮನೆಯಲ್ಲೇ ರುಚಿಕರ ಆಲೂ ಹಲ್ವಾ ತಯಾರಿಸಿ

ಈ ಆಲೂ ಹಲ್ವಾ ರೆಸಿಪಿ ಕೇವಲ 15-20 ನಿಮಿಷಗಳಲ್ಲಿ ತಯಾರಿಸಬಹುದು. ಸಕ್ಕರೆಯ ಅಂಶಗಳು ನಿಮ್ಮ ದೇಹಕ್ಕೆ ತೊಂದರೆಯನ್ನುಂಟು ಮಾಡಿದರೆ, ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇರಿಸಬಹುದು.

Aloo Halwa: ಅತ್ಯಂತ ಸುಲಭವಾಗಿ ಮನೆಯಲ್ಲೇ ರುಚಿಕರ ಆಲೂ ಹಲ್ವಾ ತಯಾರಿಸಿ
Aloo Halwa RecipeImage Credit source: NDTV FOOD
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 06, 2022 | 5:25 PM

ಸಿಹಿ ತಿಂಡಿಗಳನ್ನು ಕಂಡಾಕ್ಷಣ ಬಾಯಲ್ಲಿ ನೀರೂರುವುದು ಸಾಮಾನ್ಯ. ಆದ್ದರಿಂದ ನಿಮ್ಮ ಸಿಹಿ ತಿಂಡಿಗಳ ಆಸೆಯನ್ನು ಪೂರೈಸಲು ಮನೆಯಲ್ಲಿಯೇ ಆರೋಗ್ಯಕರ ಸಿಹಿ ತಿಂಡಿಗಳನ್ನು ತಯಾರಿಸಿ.

ಈ ಆಲೂ ಹಲ್ವಾ ರೆಸಿಪಿ ಕೇವಲ 15-20 ನಿಮಿಷಗಳಲ್ಲಿ ತಯಾರಿಸಬಹುದು. ಸಕ್ಕರೆಯ ಅಂಶಗಳು ನಿಮ್ಮ ದೇಹಕ್ಕೆ ತೊಂದರೆಯನ್ನುಂಟು ಮಾಡಿದರೆ, ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇರಿಸಬಹುದು. ಜೊತೆಗೆ ಈ ಹಲ್ವಾವನ್ನು ಕುರುಕಲು ಮಾಡಲು ನಿಮ್ಮ ಆಯ್ಕೆಯ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಮುಂತಾದ ಬೀಜಗಳನ್ನು ಸೇರಿಸಿ. ಇದು ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಬೇಕಾಗುವ ಸಾಮಾಗ್ರಿಗಳು: 2 ಆಲೂಗಡ್ಡೆ 4 ಚಮಚ ಸಕ್ಕರೆ ಅಥವಾ ಬೆಲ್ಲ 1 ಚಮಚ ಒಣದ್ರಾಕ್ಷಿ 1 ಚಮಚ ಬಾದಾಮಿ 1 ಚಮಚ ತುಪ್ಪ 1/4 ಕಪ್ ಹಾಲು 1 ಚಮಚ ಗೋಡಂಬಿ 1/4 ಚಮಚ ಪುಡಿಮಾಡಿದ ಏಲಕ್ಕಿ

ಮಾಡುವ ವಿಧಾನ: ಹಂತ 1 ಮೊದಲು 2 ಆಲೂಗಡ್ಡೆಯನ್ನು ಬೇಯಿಸಿ. ನಂತರ ಬೆಂದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ನಿಧಾನವಾಗಿ ಮ್ಯಾಶ್ ಮಾಡಿ.

ಹಂತ 2 ಮಧ್ಯಮ ಉರಿಯಲ್ಲಿ ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾಗಲು ಬಿಡಿ. ನಂತರ ಅದರಲ್ಲಿ ಹಿಸುಕಿದ ಆಲೂಗಡ್ಡೆ ಸೇರಿಸಿ ಮತ್ತು ಅವುಗಳನ್ನು 2-3 ನಿಮಿಷ ಬೇಯಲು ಬಿಡಿ.

ಹಂತ 3 ಈಗ ಅದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಹಾಗೂ ಎಲ್ಲವನ್ನೂ ಒಟ್ಟಿಗೆ ನಿಧಾನವಾಗಿ ಮಿಶ್ರಣ ಮಾಡಿ. ಇನ್ನೊಂದು 5 ನಿಮಿಷ ಬೇಯಿಸಲು ಬಿಡಿ.

ಹಂತ 4 ಕೊನೆಯದಾಗಿ ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್ ಹಾಕಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ 3-4 ನಿಮಿಷ ಬೇಯಲು ಬಿಡಿ.

ಹಂತ 5 ನಿಮ್ಮ ಆಲೂ ಹಲ್ವಾ ಬಡಿಸಲು ಸಿದ್ಧವಾಗಿದೆ. ಈ ಪಾಕವಿಧಾನವನ್ನು ಪ್ರಯತ್ನಿಸಿ. ಯಾವುದೇ ಕಲಬೆರಕೆ ಇಲ್ಲದೆ ರುಚಿಯಾದ ಹಾಗೂ ಆರೋಗ್ಯಕರವಾದ ಆಲೂ ಹಲ್ವಾವನ್ನು ಕೇವಲ 15-20 ನಿಮಿಷಗಳಲ್ಲಿ ತಯಾರಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:24 pm, Sun, 6 November 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್