Sign In

By signing in or creating an account, you agree with Associated Broadcasting Company's Terms & Conditions and Privacy Policy.

Ice Cream Recipe: ಆರೋಗ್ಯಕರ ಕಿವಿ ಹಣ್ಣಿನ ಐಸ್ ಕ್ರೀಮ್ ತಯಾರಿಸಿ

ಕೇವಲ 4 ಪದಾರ್ಥಗಳಲ್ಲಿ ತಯಾರಿಸಬಹುದಾದ ಈ ಐಸ್ ಕ್ರೀಮ್ ನಿಮ್ಮ ಊಟದ ನಂತರ ಸೇವಿಸಲು ಸೂಕ್ತವಾಗಿದೆ.

Ice Cream Recipe: ಆರೋಗ್ಯಕರ ಕಿವಿ ಹಣ್ಣಿನ ಐಸ್ ಕ್ರೀಮ್ ತಯಾರಿಸಿ
Kiwi Ice Cream RecipeImage Credit source: Kiwi Recipes
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 06, 2022 | 6:10 PM

ಕಿವಿ ಹಣ್ಣಿನಲ್ಲಿ ಸಾಕಷ್ಟು ಮಟ್ಟದ ಪೌಷ್ಟಿಕಾಂಶವನ್ನು ಹೊಂದಿದ್ದು, ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಈ ಕಿವಿ ಹಣ್ಣಿನ ಐಸ್ ಕ್ರೀಮ್ ಅನ್ನು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ.

ಕೇವಲ 4 ಪದಾರ್ಥಗಳಲ್ಲಿ ತಯಾರಿಸಬಹುದಾದ ಈ ಐಸ್ ಕ್ರೀಮ್ ನಿಮ್ಮ ಊಟದ ನಂತರ ಸೇವಿಸಲು ಸೂಕ್ತವಾಗಿದೆ. ಈ ಹಣ್ಣು ಆರೋಗ್ಯಕ್ಕೆ ಉತ್ತಮವಾದ ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ.

ಬೇಕಾಗುವ ಪದಾರ್ಥಗಳು: 4 ಕಿವಿ ಹಣ್ಣು 1/4 ಕಪ್ ಸಕ್ಕರೆ 3 ಕಪ್ ಫ್ರೆಶ್ ಕ್ರೀಮ್ 1/2 ಚಮಚ ವೆನಿಲ್ಲಾ ಎಸೆನ್ಸ್

ಮಾಡುವ ವಿಧಾನ: ಹಂತ 1 ಈ ಸುಲಭವಾದ ಐಸ್ ಕ್ರೀಮ್ ಪ್ರಾರಂಭಿಸಲು, ಮೊದಲಿಗೆ 4 ಕಿವಿ ಹಣ್ಣನ್ನು ತೆಗೆದು ಕೊಂಡು ಒಮ್ಮೆ ತೊಳೆಯಿರಿ. ನಂತರ ಅದರ ಸಿಪ್ಪೆಯನ್ನು ನಿಧಾನವಾಗಿ ತೆಗೆಯಿರಿ ಮತ್ತು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಯವಾದ ಪೇಸ್ಟ್ ಆಗಿ ಮಿಶ್ರಣ ಮಾಡಿ. ಕತ್ತರಿಸಿದ ಕೆಲವು ಸಣ್ಣ ತುಂಡುಗಳನ್ನು ಅಲಂಕರಿಸಲು ಸ್ವಲ್ಪ ಉಳಿಸಿ. ಪೇಸ್ಟ್ ಆಗಿ ಮಿಶ್ರಣ ಮಾಡಿದ ಕಿವಿ ಹಣ್ಣನ್ನು ರೆಫ್ರಿಜರೇಟರ್ನಲ್ಲಿ ಇರಿಸಿ.

ಹಂತ 2 ಮುಂದೆ, ಒಂದು ದೊಡ್ಡ ಬೌಲ್ ಅನ್ನು ತೆಗೆದುಕೊಂಡು, ಸಕ್ಕರೆ ಮತ್ತು ವೆನಿಲ್ಲಾ ಎಸೆನ್ಸ್ ಜೊತೆಗೆ ಫ್ರೆಶ್ ಕ್ರೀಮ್ ಅನ್ನು ಸೇರಿಸಿ, ಹ್ಯಾಂಡ್ ಬ್ಲೆಂಡರ್ ಬಳಸಿ ಅದು ನೊರೆ ಬರುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ.

ಇದನ್ನು ಓದಿ: ಅತ್ಯಂತ ಸುಲಭವಾಗಿ ಮನೆಯಲ್ಲೇ ರುಚಿಕರ ಆಲೂ ಹಲ್ವಾ ತಯಾರಿಸಿ

ಹಂತ 3 ಮುಂದೆ, ರೆಫ್ರಿಜರೇಟರ್ನಲ್ಲಿ ಇರಿಸಿದ ಕಿವಿ ಪೇಸ್ಟ್ ಅನ್ನು ಬ್ಲೆಂಡರ್ ಬಳಸಿ, ಅದು ನೊರೆಯಾಗುವವರೆಗೆ ಮಿಶ್ರಣ ಮಾಡಿ ಮತ್ತು ಅದನ್ನು ಟ್ರೇನಲ್ಲಿ ಸುರಿಯಿರಿ ಮತ್ತು ತಾಜಾ ಕಿವಿ ಹಣ್ಣಿನಿಂದ ಅಲಂಕರಿಸಿ. ನಂತರ 7-8 ಗಂಟೆಗಳ ಕಾಲ ಫ್ರೀಜ್ ಮಾಡಿ. ರುಚಿಕರ ಕಿವಿ ಹಣ್ಣಿನ ಐಸ್ ಕ್ರೀಮ್ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:09 pm, Sun, 6 November 22