Karnataka Tourism: ಸೊಲೊ ಟ್ರಿಪ್ ಇಷ್ಟಪಡುವವರಿಗಾಗಿ ಇಲ್ಲಿದೆ ಕರ್ನಾಟಕದ ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತ ಮಾಹಿತಿ
ಮೈಸೂರಿನ ರಾಜಮನೆತನದ ಪರಂಪರೆ ಮತ್ತು ಭವ್ಯವಾದ ಕಟ್ಟಡಗಳಿಂದ ಹಿಡಿದು ಗೋಕರ್ಣದ ಬೆರಗುಗೊಳಿಸುವ ಕಡಲತೀರಗಳ ವರೆಗೆ ನೀವು ಒಬ್ಬಂಟಿಯಾಗಿ ಪ್ರವಾಸ ಮಾಡಬಹುದಾಗಿದೆ.
ಜೊತೆಗೊಂದು ಬೈಕ್ ಇದ್ದರೆ ಸಾಕು, ಒಂಟಿಯಾಗಿ ಇಡೀ ಪ್ರಪಂಚವನ್ನು ಸುತ್ತಿ ಬಿಡಬಹುದು ಎನ್ನುವ ಏಕಾಂಗಿ ಪ್ರಯಾಣವನ್ನು ಇಷ್ಟಪಡುವವರು ನೀವಾಗಿದ್ದರೆ ಇಲ್ಲಿದೆ ನಿಮಗೆ ಉಪಯುಕ್ತ ಮಾಹಿತಿ.
ಕರ್ನಾಟಕದ ಪ್ರಮುಖ 5 ಪ್ರವಾಸಿ ಸ್ಥಳಗಳ ಕುರಿತ ಮಾಹಿತಿ ಇಲ್ಲಿದೆ. ಸೊಲೊ ಟ್ರಿಪ್ ಇಷ್ಟ ಪಡುವವರಿಗೆ ಈ ಸ್ಥಳಗಳು ಉತ್ತಮ ಹಾಗು ಸುರಕ್ಷಿತ ತಾಣವಾಗಿದೆ.
ಮೈಸೂರಿನ ರಾಜಮನೆತನದ ಪರಂಪರೆ ಮತ್ತು ಭವ್ಯವಾದ ಕಟ್ಟಡಗಳಿಂದ ಹಿಡಿದು ಗೋಕರ್ಣದ ಬೆರಗುಗೊಳಿಸುವ ಕಡಲತೀರಗಳ ವರೆಗೆ ನೀವು ಒಬ್ಬಂಟಿಯಾಗಿ ಪ್ರವಾಸ ಮಾಡಬಹುದಾಗಿದೆ.
1.ಹಂಪಿ: ಇಂದು ಒಂದು ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿದ್ದು ,ಪ್ರತಿ ಮೂಲೆ ಮೂಲೆಯಲ್ಲೂ ಪುರಾತನ ಇತಿಹಾಸವನ್ನು ಸಾರಿ ಹೇಳುವ ಸಾಕಷ್ಟು ಕೆತ್ತನೆಗಳನ್ನು ಕಾಣಬಹುದು. ಜೊತೆಗೆ ದೊಡ್ಡ ದೊಡ್ಡ ಪರ್ವತಗಳು, ಜುಳು ಜುಳು ಹರಿಯುವ ತುಂಗಾ ನದಿ, ಈ ಪಟ್ಟಣದ ಆಕರ್ಷಣೆಯನ್ನು ಹೆಚ್ಚಿಸಿದೆ. ಆದ್ದರಿಂದ ಸೊಲೊ ಟ್ರಿಪ್ ಇಷ್ಟಪಡುವವರು ಭೇಟಿ ನೀಡಲೇಬೇಕಾದ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಇದೂ ಒಂದಾಗಿದೆ. ಇಲ್ಲಿನ ಸ್ಥಳಗಳನ್ನು ನೋಡಿ ಕಣ್ತುಂಬಿಸುವುದರ ಜೊತೆಗೆ ಉತ್ತಮ ಇಲ್ಲಿನ ಇತಿಹಾಸದ ಮಾಹಿತಿಯನ್ನು ಪಡೆಯಬಹುದು.
2. ಗೋಕರ್ಣ: ಕಡಲತೀರವನ್ನು ಇಷ್ಟಪಡುವವರಿಗೆ ಒಂದೊಳ್ಳೆಯ ಪ್ರವಾಸಿ ತಾಣ ಇದಾಗಿದೆ. ತಂಪಾದ ಗಾಳಿ, ಸಮುದ್ರದ ಅಲೆಗಳು, ಸೂರ್ಯಾಸ್ತ ವೀಕ್ಷಣೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಸೊಲೊ ಟ್ರಿಪ್ ಇಷ್ಟಪಡುವವರು ಸಂಜೆಯ ಹೊತ್ತು ಒಬ್ಬಂಟಿಯಾಗಿ ಒಂದು ಉತ್ತಮ ಕ್ಷಣವನ್ನು ಇಲ್ಲಿ ಕಳೆಯಬಹುದು. ಜಲ ಕ್ರೀಡೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಆಧ್ಯಾತ್ಮಿಕ ಭಕ್ತರಿಗಾಗಿ ಮಹಾಬಲೇಶ್ವರ ದೇವಸ್ಥಾನ ಮತ್ತು ಮನಸ್ಸಿನ ಚಿಂತೆಯನ್ನು ದೂರ ಮಾಡಲು ಶಾಂತ ಕಡಲತೀರಗಳನ್ನು ಇಲ್ಲಿ ಕಾಣಬಹುದು.
3.ಚಿಕ್ಕಮಗಳೂರು : ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲ್ಪಡುವ ಚಿಕ್ಕಮಗಳೂರು ಕಾಫಿ ಪ್ರಿಯರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ ಪ್ರದೇಶಗಳು ನಿಮ್ಮನ್ನು ಬೇರೆಯೇ ಪ್ರಪಂಚಕ್ಕೆ ಕರೆದೋಯ್ಯುತ್ತದೆ. ಮುಳ್ಳಯ್ಯನಗಿರಿಯ ಟ್ರೆಕ್ಕಿಂಗ್‌ನಿಂದ ಹಿಡಿದು ಭದ್ರಾ ನದಿಯಲ್ಲಿ ರಿವರ್ ರಾಫ್ಟಿಂಗ್‌ವರೆಗೆ ಇಲ್ಲಿ ಸಾಕಷ್ಟು ಮುದನೀಡುವ ಪ್ರದೇಶವನ್ನು ಕಾಣಬಹುದು. ನಿಮ್ಮ ಒತ್ತಡದ ಜೀವನವನ್ನು ಬದಿಗಿಟ್ಟು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವ ಪ್ರದೇಶ ಇದಾಗಿದೆ.
4. ಮೈಸೂರು: ದಕ್ಷಿಣ ಭಾರತದ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೈಸೂರು ಒಂದಾಗಿದೆ. ಇಲ್ಲಿನ ಅತ್ಯಂತ ಜನಪ್ರಿಯ ತಾಣವೆಂದರೆ ಮೈಸೂರು ಅರಮನೆ. ರಾಜಮನೆತನ ಇತಿಹಾಸವನ್ನು ಸಾರುವ ವಾಸ್ತುಶಿಲ್ಪಗಳನ್ನು ಇಲ್ಲಿ ಕಾಣಬಹುದು. ಇನ್ನೊಂದು ಪ್ರಮುಖ ಆಕರ್ಷಣೆ ಚೌಮಂಡಿ ಬೆಟ್ಟ. ಜೊತೆಗೆ ವ್ಯಾಪಕ ಶ್ರೇಣಿಯ ರೇಷ್ಮೆ ಸೀರೆಗಳು ಮತ್ತು ರುಚಿಕರವಾದ ಆಹಾರಗಳಾದ ಪ್ರಮುಖವಾಗಿ ಮೈಸೂರು ಪಾಕ್ ಬಾಯಲ್ಲಿ ನೀರೂರಿಸುವುದಂತೂ ಖಂಡಿತ.
5.ಕಾರವಾರ: ಈ ಸ್ಥಳದ ಪ್ರಶಾಂತತೆಯು ಪ್ರತಿಯೊಬ್ಬ ಪ್ರವಾಸಿಗನ್ನು ತನ್ನತ್ತ ಸಳೆದುಕೊಳ್ಳುತ್ತದೆ. ಇಲ್ಲಿನ ಅತ್ಯಂತ ಶಾಂತವಾದ ಹಾಗೂ ಉದ್ದವಾದ ಕಡಲ ತೀರಗಳಲ್ಲಿ ಒಂದಾದ ದೇವ್‌ಬಾಗ್ ಬೀಚ್ ಕ್ಯಾಸುರಿನಾ ಮರಗಳನ್ನು ಹೊಂದಿದೆ. ಇತಿಹಾಸದಿಂದ ಅಲಂಕರಿಸಲ್ಪಟ್ಟ ಮತ್ತೊಂದು ಸ್ಥಳವೆಂದರೆ ಕೋಡಿಬಾಗ್ ಕೋಟೆ ಅವಶೇಷಗಳು ಮತ್ತು ಅದರ ಸುತ್ತಲಿನ ಕಡಲತೀರಗಳು. ಆದ್ದರಿಂದ ಒಬ್ಬಂಟಿಯಾಗಿ ಪ್ರಯಾಣಿಸಬಹುದಾದ ಉತ್ತಮ ಸ್ಥಳಗಳಲ್ಲಿ ಕಾರವಾರವು ಒಂದಾಗಿದೆ.
Published On - 4:32 pm, Sun, 6 November 22